newsfirstkannada.com

ತಂಡಕ್ಕೆ ಈ ಆಟಗಾರನ ಎಂಟ್ರಿಯಿಂದ ಹಾರ್ದಿಕ್ ಪಾಂಡ್ಯಗೆ ಢವಢವ.. ಕೆಟ್ಟ ಮೇಲೆ ಬುದ್ಧಿ ಬಂತಾ..!

Share :

Published January 18, 2024 at 12:34pm

  NCAನಲ್ಲಿ ಹಗಲು-ರಾತ್ರಿ ಬೆವರಿಳಿಸುತ್ತಿದ್ದಾರೆ ಪಾಂಡ್ಯ

  ಬಿಡುವಿಲ್ಲದ ವರ್ಕೌಟ್​, ಕಂ​​ಬ್ಯಾಕ್​​ಗೆ ನಾನಾ ಕಸರತ್ತು

  ಹಾರ್ದಿಕ್ ಪಾಂಡ್ಯ ಆತಂತಕ್ಕೆ ಕಾರಣ ಏನು..?

ಇಷ್ಟು ದಿನ ನನಗ್ಯಾವ ಭಯ ಇಲ್ಲ ಅನ್ನೋ ಓವರ್ ಕಾನ್ಫಿಡೆನ್ಸ್​ನಲ್ಲಿದ್ದ ಹಾರ್ದಿಕ್​​ಗೆ ಈಗ ಎದೆಯಲ್ಲಿ ಢವ ಢವ ಶುರುವಾಗಿದೆ. ಕಮ್​ಬ್ಯಾಕ್​​ಗಾಗಿ ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ. ಅಂದ್ಹಾಗೆ ಸ್ಟಾರ್​ ಆಲ್​ರೌಂಡರ್​​ ಹಾರ್ದಿಕ್ ಏನೆಲ್ಲಾ ಮಾಡ್ತಿದ್ದಾರೆ. ಸೈಲೆಂಟ್ ಆಗಿದ್ದ ಹಾರ್ದಿಕ್ ಪಾಂಡ್ಯ ಇದ್ದಕ್ಕಿದ್ದಂಗೆ ಅಖಾಡಕ್ಕಿಳಿದಿದ್ದಾರೆ.

ಹಾರ್ದಿಕ್ ಪಾಂಡ್ಯ. ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​ನಲ್ಲಿ ಜಾದೂ ಮಾಡೋ ಮೋಡಿಗಾರ. ದುರಾದೃಷ್ಟವಶಾತ್​ ಏಕದಿನ ವಿಶ್ವಕಪ್​ನಲ್ಲಿ ಇಂಜುರಿಗೆ ತುತ್ತಾಗಿದ್ದ ಹಾರ್ದಿಕ್, ಟೀಮ್ ಇಂಡಿಯಾದಿಂದಲೇ ಹೊರ ಬಿದ್ದಿದ್ದಾರೆ. ಸೌತ್ ಆಫ್ರಿಕಾ, ಅಫ್ಘನ್ ವಿರುದ್ಧದ ಟಿ20 ಸರಣಿಗೆ ಅಲಭ್ಯರಾಗಿದ್ದ ಹಾರ್ದಿಕ್​, ಈಗ ಕಮ್​ಬ್ಯಾಕ್​​​ಗಾಗಿ ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ.

ಡೇ ಆ್ಯಂಡ್ ನೈಟ್ ಹಾರ್ದಿಕ್ ಪಾಂಡ್ಯ ಕಠಿಣ ಶ್ರಮ

ಇಂಜುರಿ ಕಾರಣದಿಂದ ಟೀಮ್ ಇಂಡಿಯಾದಿಂದ ದೂರ ಇರೋ ಹಾರ್ದಿಕ್ ಪಾಂಡ್ಯ, ಕಮ್​​ಬ್ಯಾಕ್​ಗಾಗಿ ಡೇ ಆ್ಯಂಡ್ ನೈಟ್​ ಶ್ರಮವಹಿಸುತ್ತಿದ್ದಾರೆ. ಬೆಂಗಳೂರಿನಲ್ಲೇ ಬೀಡು ಬಿಟ್ಟಿರುವ ಹಾರ್ದಿಕ್ ಪಾಂಡ್ಯ, ಮುಂಜಾನೆಯಿಂದಲೇ ದೈನದಿನ ದಿನಚರಿ ಆರಂಭಿಸ್ತಿದ್ದಾರೆ. ಬೆಳಗ್ಗೆಯೇ ಯೋಗ, ಧ್ಯಾನದ ಮೂಲಕ ದಿನಚರಿ ಆರಂಭಿಸುವ ಹಾರ್ದಿಕ್, ಜಿಮ್​ನಲ್ಲಿ ಸಕತ್ ವರ್ಕೌಟ್ ನಡೆಸ್ತಿದ್ದಾರೆ. ಬೆಂಗಳೂರಿನ ಎನ್​ಸಿಎನಲ್ಲೇ ಬಹುಪಾಲು ಕಳೆಯುವ ಹಾರ್ದಿಕ್ ಪಾಂಡ್ಯ, ಎನ್​ಸಿಎ ಟ್ರೈನರ್ ಮಾರ್ಗದರ್ಶನದಲ್ಲಿ ದಿನಪೂರ್ತಿ ಬೆವರಿಳಿಸುತ್ತಿದ್ದಾರೆ. ಆ ಮೂಲಕ ಟೀಮ್ ಇಂಡಿಯಾ ಕಮ್​​ಬ್ಯಾಕ್​​​ಗಾಗಿ ಇನ್ನಿಲ್ಲದ ಶ್ರಮವಹಿಸ್ತಿದ್ದಾರೆ.

ಹಾರ್ದಿಕ್​ಗೆ ಶುರುವಾಯ್ತಾ ಶಿವಂ ದುಬೆ ಭಯ?

ಏಕದಿನ ವಿಶ್ವಕಪ್​ನಲ್ಲಿ ಇಂಜುರಿಯಾಗಿದ್ದ ಹಾರ್ದಿಕ್ ಪಾಂಡ್ಯ, ಅಫ್ಘನ್ ಸರಣಿ ತನಕ ಎನ್​ಸಿಎಯಿಂದಲೇ ದೂರ ಉಳಿದ್ದರು. ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡ್ತಾ ಕಾಲ ಕಳೆಯುತ್ತಿದ್ದರು. ಮನೆಯಲ್ಲೇ ತಾಲೀಮು ನಡೆಸ್ತಿದ್ದರು. ಯಾವಾಗ ಶಿವಂ ದುಬೆ ಟೀಮ್ ಇಂಡಿಯಾಗೆ ಎಂಟ್ರಿ ನೀಡಿ ಅಬ್ಬರಿಸಿದ್ರೂ, ಈ ಬೆನ್ನಲ್ಲೇ ಎನ್​ಸಿಎಗೆ ಆಗಮಿಸಿರುವ ಹಾರ್ದಿಕ್ ಪಾಂಡ್ಯ, ಹಗಲು, ರಾತ್ರಿ ಎನ್ನದ ಬೆವರು ಹರಿಸುತ್ತಿದ್ದಾರೆ.

ಹಾರ್ದಿಕ್ ಪಾಂಡ್ಯ ಆತಂತಕ್ಕೆ ಕಾರಣ ಏನು?

ಹಾರ್ದಿಕ್ ಪಾಂಡ್ಯ ಬದಲಿ ಆಟಗಾರನಾಗಿ ಅಫ್ಘಾನ್ ಸರಣಿಯಲ್ಲಿ ಸ್ಥಾನ ಪಡೆದ ಶಿವಂ ದುಬೆ, ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡಿದ್ದಾರೆ. ಬ್ಯಾಟಿಂಗ್​​​​​​​​​​​​​​​​​ ಹಾಗೂ ಬೌಲಿಂಗ್​ನಲ್ಲೂ ಕಮಾಲ್ ಮಾಡ್ತಿದ್ದಾರೆ. ಮ್ಯಾಚ್ ಫಿನಿಷರ್ ರೋಲ್​ನ ಅದ್ಭುತವಾಗಿ ನಿಭಾಯಿಸ್ತಿರುವ ಶಿವಂ ದುಬೆ, ತಾನೋರ್ವ ಪರ್ಫೆಕ್ಟ್​ ಆಲ್​ರೌಂಡರ್ ಅನ್ನೋದನ್ನು ಫ್ರೂವ್ ಮಾಡಿದ್ದಾರೆ. ಇದಕ್ಕಿಂತ ಮಿಗಿಲಾಗಿ ನಾಯಕನ ಮನ ಗೆದ್ದಿರೋ ಶಿವಂ ದುಬೆ, ಟಿ20 ತಂಡಕ್ಕೆ ಫಸ್ಟ್​​ ಚಾಯ್ಸ್​ ಆಗಿದ್ದಾರೆ. ಇದೇ ಈಗ ಹಾರ್ದಿಕ್ ಪಾಂಡ್ಯರ ತಳಮಳಕ್ಕೆ ಕಾರಣವಾಗಿದೆ.

ಶಿವಂ ದುಬೆ ಅಬ್ಬರದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಹಾರ್ದಿಕ್, ಹಗಲು ರಾತ್ರಿ ಎನ್ನದ ಶ್ರಮ ವಹಿಸ್ತಿದ್ದಾರೆ. ಈ ಐಪಿಎಲ್​ ವೇಳೆ ಅಂಗಳಕ್ಕಿಳಿಯಲಿರುವ ಹಾರ್ದಿಕ್, ಟೀಮ್ ಇಂಡಿಯಾ ಪರ ಆಡಲು ಟಿ20 ವಿಶ್ವಕಪ್​ ತನಕ ಕಾಯಲೇಬೇಕಿದೆ. ಇದಕ್ಕಾಗಿ ಫಿಟ್ನೆಸ್​​​​​​​​​​​​​​​​ ಮೇಲೆಯೇ ಹೆಚ್ಚು ಫೋಕಸ್ ಮಾಡಿ, ಇಂಜುರಿಯಿಂದ ದೂರ ಉಳಿಯುವ ಮೂಲಕ ಸ್ಥಾನ ಗಟ್ಟಿ ಮಾಡಿಕೊಳ್ಳಬೇಕು. ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಗಾದೆ ಮಾತಿನಂತೆ, ಶಿವಂ ದುಬೆ ಅಬ್ಬರದ ಬಳಿಕ ಹಾರ್ದಿಕ್ ಬುದ್ದಿ ಕಲಿತಂತೆ ಕಾಣ್ತಿದೆ. ಹೀಗಾಗಿಯೇ ಹಗಲು ರಾತ್ರಿ ಎನ್ನದೇ ಹಾರ್ದಿಕ್ ಶ್ರಮವಹಿಸ್ತಿರೋದು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ತಂಡಕ್ಕೆ ಈ ಆಟಗಾರನ ಎಂಟ್ರಿಯಿಂದ ಹಾರ್ದಿಕ್ ಪಾಂಡ್ಯಗೆ ಢವಢವ.. ಕೆಟ್ಟ ಮೇಲೆ ಬುದ್ಧಿ ಬಂತಾ..!

https://newsfirstlive.com/wp-content/uploads/2024/01/HARDIK-PANDYA-3.jpg

Load More