/newsfirstlive-kannada/media/post_attachments/wp-content/uploads/2024/12/HARDHIK_PANDYA-2.jpg)
ಮನುಷ್ಯ ಎಷ್ಟೇ ಎಷ್ಟೇ ಎತ್ತರಕ್ಕೆ ಬೆಳೆದ್ರೂ, ಬೆಳೆದು ಬಂದ ಹಾದಿಯನ್ನ ಮರೆಯಬಾರದು ಅನ್ನೋ ಮಾತಿಗೆ ತಕ್ಕಂತೆ ನಡೆದುಕೊಳ್ತಿದ್ದಾರೆ ಟೀಮ್​ ಇಂಡಿಯಾ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ. ಕ್ರಿಕೆಟ್​​ ಜೊತೆಗೆ ಕಾಂಟ್ರವರ್ಸಿಯಿಂದ ಹೆಚ್ಚು ಸುದ್ದಿಯಾದ ಹಾರ್ದಿಕ್​ಗೆ ಈ ಮಾತು ಹೇಗಪ್ಪ ಅನ್ವಯವಾಗುತ್ತೆ ಅನ್ನೋ ಪ್ರಶ್ನೆ ನಿಮಗೆ ಕಾಡ್ತಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಸ್ಟಾರ್​ ಆಲ್​ರೌಂಡರ್. ಗ್ರೇಟ್​ ಮ್ಯಾಚ್ ಫಿನಿಶರ್. ಟಿ20 ವಿಶ್ವಕಪ್​ ಗೆಲುವಿನ ರೂವಾರಿ. ಆನ್​​​ಫೀಲ್ಡ್​ನಲ್ಲಿ ತನ್ನ ಆಟದಿಂದ ಗಮನ ಸೆಳೆಯುವ ಈ ಬರೋಡ ಸ್ಟಾರ್​, ಆಫ್​ ದಿ ಫಿಲ್ಡ್​ನಲ್ಲೂ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗ್ತಾರೆ. ಇಷ್ಟು ದಿನ ಆಟ ಹಾಗೂ ಆಫ್ ದಿ ಫೀಲ್ಡ್​ನ ವಿವಾದದಿಂದ ಟ್ರೆಂಡ್​ನಲ್ಲಿದ್ದ ಹಾರ್ದಿಕ್, ಈಗ ಹೃದಯ ಶ್ರೀಮಂತಿಕೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ.
/newsfirstlive-kannada/media/post_attachments/wp-content/uploads/2024/04/Hardhik-Pandya-Brother-1.jpg)
ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ಆಗಿರುವ ಹಾರ್ದಿಕ್, ಇವತ್ತು ಕೋಟಿ ಕೋಟಿ ಹಣ ಗಳಿಸಿದ್ದಾರೆ. ಶ್ರೀಮಂತ ಕ್ರಿಕೆಟರ್ ಆಗಿ ಬೆಳೆದು ನಿಂತಿದ್ದಾರೆ. ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ. ಇದಕ್ಕೆಲ್ಲ ಪಾಂಡ್ಯ ಪರಿಶ್ರಮವೊಂದೇ ಕಾರಣವಲ್ಲ. ಈ ಸಕ್ಸಸ್​ನ ಹಿಂದೆ ಹಲವು ಕಥೆಗಳಿವೆ. ಹಲವರ ಸಹಾರವಿದೆ. ಅದ್ರಲ್ಲಿ ಈ ಕಥೆಯೂ ಒಂದು.
ಹಾರ್ದಿಕ್ ಪಾಂಡ್ಯ ವಿಡಿಯೋ ಕಾಲ್​ನಲ್ಲಿ ಓರ್ವ ವ್ಯಕ್ತಿ ಜೊತೆ ಮಾತನಾಡಿದ್ದಾರೆ. ಅವತ್ತು ಆ ಒಬ್ಬ ವ್ಯಕ್ತಿ ನೀಡಿದ್ದ 400 ರೂಪಾಯಿಯೇ ಇವತ್ತು ಹಾರ್ದಿಕ್ ಪಾಂಡ್ಯನ ಸೂಪರ್ ಸ್ಟಾರ್ ಆಗಿ ಮಾಡಿದೆ. ಆ ನಾನ್ನೂರು ರೂಪಾಯಿಯ ಹಿಂದೆ ರೋಚಕ ಕಥೆ ಇದೆ.
ಪಾಂಡ್ಯ ಜೀವನ ಬದಲಿಸಿತು ಆ ವ್ಯಕ್ತಿಯ ಸಹಾಯ..!
ಹಾರ್ದಿಕ್ ಪಾಂಡ್ಯ ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದರು. ಸಣ್ಣ ಸಣ್ಣ ಟೂರ್ನಿಗಳಲ್ಲಿ ಆಡುತ್ತಾ ಬೆಳೆದವರು. ಆರಂಭದಲ್ಲಿ ಬಡತನ ಎಷ್ಟು ಮಟ್ಟಿಗೆ ಕಾಡಿತ್ತು ಅಂದ್ರೆ. ಲೋಕಲ್ ಟೂರ್ನಮೆಂಟ್​​ನ ಎಂಟ್ರಿ ಫೀಸ್​ ಕಟ್ಟೋಕೂ ಕೂಡ ಪಾಂಡ್ಯ ಬ್ರದರ್ಸ್ ಹಣವಿಲ್ಲದೆ ಪರದಾಡಿದ್ದರು. ಹಣವಿಲ್ಲದೆ ನಿರಾಸೆಯಿಂದ ಕುಳಿತಿದ್ದ ಪಾಂಡ್ಯ ಬ್ರದರ್ಸ್ ಪಾಲಿಗೆ ಅಂದು ದೇವರಂತೆ ಬಂದಿದ್ದು ಆ ಒಬ್ಬ ವ್ಯಕ್ತಿ. ಹಾರ್ದಿಕ್​​ ಪಾಂಡ್ಯ ಈಗ ವಿಡಿಯೋ ಕಾಲ್​ನಲ್ಲಿ ಆ ವ್ಯಕ್ತಿ ಜೊತೆ ಮಾತನಾಡುತ್ತಾರೆ.
ಅವತ್ತು ಈ ವ್ಯಕ್ತಿ, 400 ರೂ ಕೊಟ್ಟು ಕೇವಲ ಟೂರ್ನಿಯ ಎಂಟ್ರಿ ಫೀಸ್ ಕಟ್ಟಿದಲ್ಲ, ಭಾರತೀಯ ಕ್ರಿಕೆಟ್​ಗೆ ದೊಡ್ಡ ಕೊಡುಗೆ ನೀಡಿದರು. ಆ 400 ರೂಪಾಯಿ ಪಾಂಡ್ಯ ಬ್ರದರ್ಸ್​ ವೃತ್ತಿ ಜೀವನಕ್ಕೆ ಹಾಕಿದ್ದ ಬಹುದೊಡ್ಡ ಅಡಿಪಾಯವೇ ಆಗಿತ್ತು. ಅದೆ ಟೂರ್ನಿಯಲ್ಲಿ ಅಬ್ಬರಿಸಿದ್ದ ಕೃನಾಲ್ ಪಾಂಡ್ಯಗೆ 500 ರೂಪಾಯಿಯ ಬಹುಮಾನವೂ ಸಿಕ್ಕಿತ್ತು. ಈ ಹಣ ಇತರೆ ಟೂರ್ನಿಗಳಲ್ಲಿ ಆಡಲು ಸಹಕಾರಿ ಆಯಿತು.
ಇದನ್ನೂ ಓದಿ: ಮ್ಯಾಕ್ಸ್ ಸಿನಿಮಾ ಅಮ್ಮನಿಗೆ ತೋರಿಸಬೇಕಿತ್ತು.. ಮಾತಾಡುವಾಗ ಕಿಚ್ಚ ಸುದೀಪ್ ಭಾವುಕ
/newsfirstlive-kannada/media/post_attachments/wp-content/uploads/2024/04/Hardhik-Pandya-Brother.jpg)
ಜೀವನೋಪಾಯಕ್ಕಾಗಿ ಆಟೋ ಓಡಿಸುತ್ತಿದ್ದ ಹಾರ್ದಿಕ್..!
ಪಾಂಡ್ಯ ಬ್ರದರ್ಸ್ ಆರಂಭಿಕ ಜೀವನ ಹೇಳಿಕೊಳ್ಳುವಷ್ಟು ಸುಲಭದಾಗಿರಲಿಲ್ಲ. ಕಲ್ಲು ಮುಳ್ಳಿನ ಹಾದಿಯಲ್ಲಿ ಸಾಗಿಬಂದವರು. ಬುಸಿನೆಸ್​ನಲ್ಲಿ ಹಣ ಕಳೆದುಕೊಂಡ ಅವ್ರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಒಂದೊದಂತ್ತಿನ ಊಟಕ್ಕೂ ಪರದಾಡಿತ್ತು. ಇಂಥ ಕಷ್ಟದಲ್ಲೂ ಕ್ರಿಕೆಟ್​ ತರಬೇತಿ ಬಿಡದ ಪಾಂಡ್ಯ ಸಹೋದರರು 5 ರೂಪಾಯಿ ನೂಡಲ್ಸ್​ ತಿಂದು ಗಂಟೆಗಟ್ಟಲೇ ಅಭ್ಯಾಸ ನಡೆಸುತ್ತಿದ್ದರು. ಬಳಿಕ ಶಾಲೆಯನ್ನು ತೊರೆದ ಪಾಂಡ್ಯ, ಜೀವನೋಪಾಯಕ್ಕಾಗಿ ಆಟೋ ರಿಕ್ಷಾ ಓಡಿಸಲು ಶುರು ಮಾಡಿದರು. ಕಾರ್ ಡೀಲರ್‌ಶಿಪ್‌ಗಳಲ್ಲೂ ಕೆಲಸ ಮಾಡಿದರು.
ಅಂದು ಮಾಡಿದ ಸಹಾಯ ಇಂದಿಗೂ ಮರೆತಿಲ್ಲ ಪಾಂಡ್ಯ..!
ಹಾರ್ದಿಕ್​ ಪಾಂಡ್ಯರ ಸತತ ಪರಿಶ್ರಮ, ಕಠಿಣ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ. ಬಡತನ, ಹಸಿವು, ಆರ್ಥಿಕ ಸಂಕಷ್ಟ ಹೀಗೆ ಎಲ್ಲದರ ವಿರುದ್ಧ ಹೋರಾಡಿದ ಪಾಂಡ್ಯ ಜೀವನವೂ ಬದಲಾಗಿದೆ. ಲೋಕಲ್ ಟೂರ್ನಿಗಳಲ್ಲಿ ಆಡಿ ಮ್ಯಾಚ್ ಗೆಲ್ಲಿಸ್ತಿದ್ದ ಹಾರ್ದಿಕ್, ಈಗ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಆಗಿದ್ದಾರೆ. ಕೋಟಿ ಕೋಟಿ ಹಣವನ್ನು ಸಂಪಾದಿಸ್ತಿದ್ದಾರೆ. ಸಕ್ಸಸ್​​ ಸಿಕ್ಕು, ನೂರಾರು ಕೋಟಿಯ ಒಡೆಯನಾಗಿದ್ದರೂ, ಅವತ್ತಿನ 400 ರೂಪಾಯಿಯ ಬೆಲೆಯನ್ನು ಇಂದಿಗೂ ಮರೆತಿಲ್ಲ. ಇದು ಹಾರ್ದಿಕ್ ಪಾಂಡ್ಯ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಅಭಿಮಾನಿಗಳಲ್ಲಿ ಅಭಿಮಾನವೂ ಹೆಚ್ಚಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us