/newsfirstlive-kannada/media/post_attachments/wp-content/uploads/2025/04/Abhishek_Sharma_1-1.jpg)
ಮುಂಬೈ ಇಂಡಿಯನ್ಸ್ ವಿರುದ್ಧವೂ ಓಪನರ್ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದರು. ಹೈದ್ರಾಬಾದ್ ಪರ ಆರಂಭಿಕರಾಗಿ ಕ್ರೀಸ್ಗೆ ಆಗಮಿಸಿದ ಅಭಿಷೇಕ್ ಶರ್ಮಾ ಬ್ಯಾಟಿಂಗ್ಗೆ ಮುಂಬೈ ಕ್ಯಾಪ್ಟನ್ ಬ್ರೇಕ್ ಹಾಕಿದರು.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್ ಆಯ್ಕೆ ಮಾಡಿ ಎದುರಾಳಿಯನ್ನ ಬ್ಯಾಟಿಂಗ್ಗೆ ಆಹ್ವಾನಿಸಿದರು. ಹೈದ್ರಾಬಾದ್ ಪರ ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಮೊದಲು ತಾಳ್ಮೆ ಬ್ಯಾಟಿಂಗ್ ಪ್ರದರ್ಶನ ಮಾಡಿದರು.
ಇದನ್ನೂ ಓದಿ:ನಾಳೆ RCB ಬೆಂಗಳೂರು ಮ್ಯಾಚ್ಗೆ ಮಳೆ ಅಡ್ಡಿಯಾಗುವ ಆತಂಕ; IMD ಅಲರ್ಟ್!
ಬಳಿಕ ಬ್ಯಾಟಿಂಗ್ ಅಬ್ಬರ ಆರಂಭಿಸಿದ ಅಭಿಷೇಕ್ ಶರ್ಮಾ, ಮುಂಬೈ ಇಂಡಿಯನ್ಸ್ ಬೌಲರ್ಗಳಿಗೆ ಬೆವರಿಳಿಸಿದರು. ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಮ್ಯಾಚ್ ಗೆಲ್ಲಿಸಿದ್ದ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ನಿಂದ ಅಬ್ಬರಿಸಲು ಯೋಜನೆ ಮಾಡಿದರಂತೆ ಕಂಡರು. ಏಕೆಂದರೆ ಪಂದ್ಯದಲ್ಲಿ 7 ಬೌಂಡರಿ ಬಾರಿಸಿದರೂ ಒಂದೂ ಸಿಕ್ಸ್ ಕೂಡ ಸಿಡಿಸಿರಲಿಲ್ಲ.
ತಂಡದ 8ನೇ ಓವರ್ ಮಾಡಲು ಬಂದ ಹಾರ್ದಿಕ್ ಪಾಂಡ್ಯ, ಅಭಿಷೇಕ್ ಶರ್ಮಾರನ್ನ ಟಾರ್ಗೆಟ್ ಮಾಡಿದ್ದರು. ಅದರಂತೆ 3ನೇ ಎಸೆತದಲ್ಲಿ ಅಭಿಷೇಕ್ ಶರ್ಮಾರನ್ನ ಬಲಿ ಪಡೆದರು. ಕೇವಲ 28 ಎಸೆತಗಳಲ್ಲಿ 7 ಬೌಂಡರಿ ಸಮೇತ 40 ರನ್ ಗಳಿಸಿ ಅಭಿಷೇಕ್ ಶರ್ಮಾ ಬ್ಯಾಟ್ ಬೀಸುತ್ತಿದ್ದರು. ಹಾರ್ದಿಕ್ ಪಾಂಡ್ಯ ಹಾಕಿದ ಬೌಲ್ ಅನ್ನು ಜೋರಾಗಿ ಬಾರಿಸಿದರು. ಆದರೆ ಆ ಬಾಲ್ ನೇರವಾಗಿ ಸಬ್ಸ್ಟೂಡ್ ಪ್ಲೇಯರ್ ಆಗಿ ಕಣಕ್ಕೆ ಇಳಿದಿರುವ ರಾಜ್ ಬಾವಾ ಅವರ ಕೈ ಸೇರಿತು. ಅಭಿಷೇಕ್ ಶರ್ಮಾಗೆ ವಿಲ್ಜಾಕ್ಸ್ನಿಂದ ಒಂದು ಜೀವದಾನ ಸಿಕ್ಕರೂ ಅದನ್ನು ಸದುಪಯೋಗ ಮಾಡಿಕೊಳ್ಳಲಿಲ್ಲ. ಇದರಿಂದ ಕೇವಲ 10 ರನ್ಗಳಿಂದ ಅಭಿಷೇಕ್ ಶರ್ಮಾ ಅರ್ಧಶತಕ ಮಿಸ್ ಮಾಡಿಕೊಂಡರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ