newsfirstkannada.com

×

ಒಂದೇ ಕಲ್ಲಲ್ಲಿ 3 ಹಕ್ಕಿ ಹೊಡೆಯೋ ಪ್ಲಾನ್​​; ಆರ್​​​ಸಿಬಿ ತಂಡಕ್ಕೆ ಹಾರ್ದಿಕ್​ ಪಾಂಡ್ಯ ಹೊಸ ಕ್ಯಾಪ್ಟನ್​​!

Share :

Published October 14, 2024 at 4:34pm

    ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ

    ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆಯೋ ಪ್ಲಾನ್​​ ಆರ್​​ಸಿಬಿಯದ್ದು!

    ಆರ್​​​ಸಿಬಿ ತಂಡಕ್ಕೆ ಮುಂಬೈ ಇಂಡಿಯನ್ಸ್​ ಸ್ಫೋಟಕ ಬ್ಯಾಟರ್​ ಎಂಟ್ರಿ

ಕಳೆದ 17 ವರ್ಷಗಳಿಂದ ಇಂಡಿಯನ್​ ಪ್ರೀಮಿಯರ್​​ ಲೀಗ್​ ಕಪ್​ ಗೆದ್ದಿಲ್ಲ ಅನ್ನೋ ಕೊರಗು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಕಾಡುತ್ತಲೇ ಇದೆ. ಈ ಬಾರಿ ಆಕ್ಷನ್​​ನಲ್ಲಿ ಸ್ಟಾರ್ ಆಟಗಾರರನ್ನು ಖರೀದಿ ಮಾಡಿ ಕಪ್​ ಗೆಲ್ಲೋ ಯೋಚನೆಯಲ್ಲಿ ಆರ್​​ಸಿಬಿ ಇದೆ. ಹಾಗಾಗಿ ಆರ್​​ಸಿಬಿ ತಂಡಕ್ಕೆ ಒಬ್ಬ ಸ್ಟಾರ್​ ಆಲ್​ರೌಂಡರ್​ ಬೇಕಿದೆ. ಅದರಲ್ಲೂ ಸ್ಟಾರ್​ ಆಲ್​ರೌಂಡರ್​ ತಂಡದ ಕ್ಯಾಪ್ಟನ್​ ಆಗಿದ್ರೆ ಇನ್ನೂ ಒಳ್ಳೆಯದು ಎಂಬುದು ಆರ್​​ಸಿಬಿ ಪ್ಲಾನ್​. ಇದೇ ಕಾರಣಕ್ಕೆ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯಗೆ ಗಾಳ ಹಾಕಲು ಪ್ಲ್ಯಾನ್ ಮಾಡಿಕೊಂಡಿದೆ.

ಆರ್‌ಸಿಬಿಗೆ ಹಾರ್ದಿಕ್‌ ಏಕೆ ಬೇಕು?

ಹಾರ್ದಿಕ್​ ಪಾಂಡ್ಯ ಆರ್​​ಸಿಬಿಗೆ ಬೇಕೇ ಬೇಕು. ಇದಕ್ಕೆ ಕಾರಣ ಪಾಂಡ್ಯ ಅನುಭವ ಆರ್​​ಸಿಬಿ ತಂಡಕ್ಕೆ ಪ್ಲಸ್​ ಆಗಲಿದೆ. ಮೊದಲ ಸೀಸನ್​​ಗೆ ಗುಜರಾತ್​ ಟೈಟನ್ಸ್​ ತಂಡವನ್ನು ಚಾಂಪಿಯನ್​​ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ನಾಯಕತ್ವದ ಗುಣಗಳು ಎಲ್ಲರ ಗಮನ ಸೆಳೆದಿವೆ. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್​ ಮಾಡಬಲ್ಲ ಸಾಮರ್ಥ್ಯ ಇರೋ ಹಾರ್ದಿಕ್​​​ ಆರ್​​ಸಿಬಿಗೆ ಕ್ಯಾಪ್ಟನ್​ ಆದ್ರೆ ಒಳ್ಳೆಯದು.

ಬ್ಯಾಟಿಂಗ್​​ ಮತ್ತು ಬೌಲಿಂಗ್​ನಲ್ಲೂ ಮೋಡಿ!

ಕೇವಲ ಕ್ಯಾಪ್ಟನ್ಸಿ ಮಾತ್ರವಲ್ಲ ಬ್ಯಾಟಿಂಗ್​ ಮತ್ತು ಬೌಲಿಂಗ್​ ವಿಭಾಗದಲ್ಲೂ ಮೋಡಿ ಮಾಡಬಲ್ಲ ಆಟಗಾರ ಹಾರ್ದಿಕ್​ ಪಾಂಡ್ಯ. ಒತ್ತಡದ ಸನ್ನಿವೇಶದಲ್ಲಿ ಬೌಲಿಂಗ್ ಮಾಡುವ ಕಲೆ ಇವರಿಗಿದೆ. ಕೆಲವು ವರ್ಷಗಳಿಂದ ಆರ್​​ಸಿಬಿ ಎದುರಿಸುತ್ತಿರೋ ಬೌಲಿಂಗ್​ಗೆ ಹಾರ್ದಿಕ್​ ಮದ್ದು ಆಗಬಹುದು. ಜತೆಗೆ ಒಳ್ಳೆಯ ಫಿನಿಶರ್​ ಕೂಡ ಹೌದು.

ಹಾರ್ದಿಕ್​​ಗೆ ಮುಂಬೈನಿಂದ ಕೊಕ್​​

ಮುಂದಿನ ಸೀಸನ್​ಗೆ ಹಾರ್ದಿಕ್​ ಪಾಂಡ್ಯಗೆ ಮುಂಬೈ ಇಂಡಿಯನ್ಸ್​ ತಂಡದಿಂದ ಕೊಕ್​ ನೀಡುವ ಸಾಧ್ಯತೆ ಇದೆ. ಇವರ ಬದಲಿಗೆ ಮತ್ತೆ ರೋಹಿತ್​ ಶರ್ಮಾ ಅಥವಾ ಸೂರ್ಯಕುಮಾರ್​ ಯಾದವ್​ಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟಬಹುದು. ಈಗಾಗಲೇ ಮುಂಬೈ ಇಂಡಿಯನ್ಸ್​ ತಂಡದಲ್ಲಿ ಹಲವು ಬದಲಾವಣೆಗಳು ಶುರುವಾಗಿವೆ.

ಇದನ್ನೂ ಓದಿ: ಪಾಂಡ್ಯಗೆ ಮಾಸ್ಟರ್​ ಸ್ಟ್ರೋಕ್; MI ಮೇಜರ್​​ ಸರ್ಜರಿ ಹಿಂದೆ ರೋಹಿತ್ ಶರ್ಮಾ ಪಾತ್ರ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಒಂದೇ ಕಲ್ಲಲ್ಲಿ 3 ಹಕ್ಕಿ ಹೊಡೆಯೋ ಪ್ಲಾನ್​​; ಆರ್​​​ಸಿಬಿ ತಂಡಕ್ಕೆ ಹಾರ್ದಿಕ್​ ಪಾಂಡ್ಯ ಹೊಸ ಕ್ಯಾಪ್ಟನ್​​!

https://newsfirstlive.com/wp-content/uploads/2024/10/Hardik-Pandya_RCB.jpg

Load More