ಮುಂಬೈ ಇಂಡಿಯನ್ಸ್​ ಹಾರ್ದಿಕ್​ ಪಾಂಡ್ಯನಾ ಉಳಿಸಿಕೊಳ್ಳೋಕೆ ಇಲ್ಲಿದೆ 3 ಕಾರಣಗಳು; ಏನದು?

author-image
Ganesh Nachikethu
Updated On
IPL 2025: ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯಗೆ ಬಿಗ್​ ಸ್ಟ್ರೋಕ್​ ಕೊಟ್ಟ ಮುಂಬೈ ಇಂಡಿಯನ್ಸ್​
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​
  • ಮುಂಬೈ ಇಂಡಿಯನ್ಸ್​​ ತಂಡಕ್ಕೆ ಹಾರ್ದಿಕ್​​ ಪಾಂಡ್ಯ ಯಾಕೆ ಬೇಕು..?
  • ಹಾರ್ದಿಕ್​ ಪಾಂಡ್ಯ ಏಕೆ ಬೇಕು ಅನ್ನೋದಕ್ಕೆ ಇಲ್ಲಿದೆ ಮೂರು ಕಾರಣ

2022ರ ಇಂಡಿಯನ್​ ಪ್ರೀಮಿಯರ್​ ಲೀಗ್​​ಗೆ ಮುನ್ನ ಹಾರ್ದಿಕ್​ ಪಾಂಡ್ಯ ಮುಂಬೈ ಇಂಡಿಯನ್ಸ್​ ತಂಡವನ್ನು ತೊರೆದಿದ್ದರು. ಬಳಿಕ 2 ವರ್ಷಗಳ ಕಾಲ ಗುಜರಾತ್​​ ಟೈಟನ್ಸ್​ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್​ ಪಾಂಡ್ಯ ಒಮ್ಮೆ ಕಪ್​​ ಗೆಲ್ಲಿಸಿಕೊಟ್ರು. 2ನೇ ಬಾರಿಗೆ ಹಾರ್ದಿಕ್​ ಪಾಂಡ್ಯ ಗುಜರಾತ್​​ ತಂಡಕ್ಕೆ ರನ್ನರ್ಸ್​ ಸ್ಥಾನ ತಂದುಕೊಟ್ರು. 2024ರ ಸೀಸನ್​ಗೆ ಮುನ್ನ ಮೆಗಾ ಡೀಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡಕ್ಕೆ ಬಂದು ಕ್ಯಾಪ್ಟನ್​​ ಕೂಡ ಆದ್ರು.

ಬರೋಬ್ಬರಿ 5 ಬಾರಿ ಚಾಂಪಿಯನ್​ ಮಾಡಿದ ರೋಹಿತ್​ ಶರ್ಮಾ ಅವರನ್ನೇ ಕೆಳಗಿಳಿಸಿ ಹಾರ್ದಿಕ್​ ಪಾಂಡ್ಯಗೆ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್ಸಿ ಪಟ್ಟ ಕಟ್ಟಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ರೋಹಿತ್​​ ಅಭಿಮಾನಿಗಳಂತೂ ಮುಂಬೈ ಇಂಡಿಯನ್ಸ್​ ವಿರುದ್ಧ ಬಹಿರಂಗ ಆಕ್ರೋಶ ಹೊರಹಾಕಿದ್ರು. ಹಾರ್ದಿಕ್​​ ಪಾಂಡ್ಯಗೆ ಯಾವುದೇ ಬೆಂಬಲ ಸಿಗಲಿಲ್ಲ. ಬದಲಿಗೆ ಕಳಪೆ ಪ್ರದರ್ಶನ ನೀಡಿದ ಕಾರಣ ಕ್ಯಾಪ್ಟನ್‌ ಹಾರ್ದಿಕ್ ಪಾಂಡ್ಯ ಕೂಡ ಸಿಕ್ಕಾಪಟ್ಟೆ ಟ್ರೋಲ್ ಆದ್ರು. ಇದರ ಮಧ್ಯೆ 2025ರ ಸೀಸನ್​ಗೆ ಮುನ್ನ ಹಾರ್ದಿಕ್​​ ಪಾಂಡ್ಯಗೆ ಕೊಕ್​ ನೀಡಲಿದ್ದಾರಾ? ಉಳಿಸಿಕೊಳ್ಳಲಿದ್ದಾರಾ? ಅನ್ನೋ ಚರ್ಚೆ ಜೋರಾಗಿದೆ.

ಮುಂಬೈ ಇಂಡಿಯನ್ಸ್​ ತಂಡಕ್ಕೆ ಹಾರ್ದಿಕ್​ ಪಾಂಡ್ಯ ಏಕೆ ಬೇಕು?

ಕಳೆದ ಸೀಸನ್​​ನಲ್ಲಿ ಹಾರ್ದಿಕ್​ ಪಾಂಡ್ಯ ತಾನು ಆಡಿದ 14 ಪಂದ್ಯಗಳಲ್ಲಿ 216 ರನ್​ ಸಿಡಿಸಿದ್ದು ಮಾತ್ರವಲ್ಲ ಕೇವಲ 11 ವಿಕೆಟ್ ಪಡೆದು ಕಳಪೆ ಪ್ರದರ್ಶನ ನೀಡಿದ್ರು. ಇಷ್ಟಾದ್ರೂ ಹಾರ್ದಿಕ್‌ಗೆ ತಮ್ಮ ಕ್ಯಾಪ್ಟನ್ಸಿ ಸಾಬೀತು ಪಡಿಸಲು ಮತ್ತೊಂದು ಅವಕಾಶ ಕೊಟ್ರೂ ಅಚ್ಚರಿಯೇನಿಲ್ಲ. ಹಾರ್ದಿಕ್‌ ಮುಂದಿನ ಸೀಸನ್​ನಲ್ಲೂ ಕ್ಯಾಪ್ಟನ್ಸಿಯಲ್ಲಿ ವೈಫಲ್ಯ ಕಂಡರೆ ಸೂರ್ಯಕುಮಾರ್‌ ಯಾದವ್‌ ಅಥವಾ ಜಸ್‌ಪ್ರೀತ್‌ ಬುಮ್ರಾ ಕ್ಯಾಪ್ಟನ್​ ಆಗಬಹುದು.

2024ರ ಐಪಿಎಲ್‌ ನಂತರ ನಡೆದ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಟ್ರೋಫಿ ಗೆಲ್ಲುವಲ್ಲಿ ಹಾರ್ದಿಕ್ ಪ್ರಮುಖ ಪಾತ್ರವಹಿಸಿದ್ರು. ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲೂ ಬ್ಯಾಟ್‌-ಬಾಲ್‌ ಮೂಲಕ ಸದ್ದು ಮಾಡಿ ಸರಣಿ ಶ್ರೇಷ್ಠ ಆಟಗಾರ ಎನಿಸಿಕೊಂಡರು ಹಾರ್ದಿಕ್​ ಪಾಂಡ್ಯ. ಹಾಗಾಗಿ ಮುಂಬೈ ಇಂಡಿಯನ್ಸ್​​ ತಂಡಕ್ಕೆ ಹಾರ್ದಿಕ್​ ಪಾಂಡ್ಯ ಬೇಕೇ ಬೇಕು.

ಇದನ್ನೂ ಓದಿ: ನ್ಯೂಜಿಲೆಂಡ್​​ಗೆ ಟೀಮ್​ ಇಂಡಿಯಾದ ಈ ಜೋಡಿಯನ್ನ ಕಂಡ್ರೆ ಭಯ ಎಂದ ರಚಿನ್​​.. ಈ ಬಗ್ಗೆ ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment