/newsfirstlive-kannada/media/post_attachments/wp-content/uploads/2024/05/Pandya-1.jpg)
ಸದ್ಯ ಸಾಮಾಜಿಕ ಜಾಲತಾಣ ತೆರೆದರೆ ಸಾಕು ಹಾರ್ದಿಕ್​ ಪಾಂಡ್ಯ-ನತಾಶಾ ಸ್ಟಾಂಕೋವಿಕ್ ಇಬ್ಬರದ್ದೇ ಸುದ್ದಿ. ಮುಂಬೈ ಇಂಡಿಯನ್ಸ್​ ತಂಡದ ನಾಯಕ ಮತ್ತು ಮಡದಿ ನತಾಶಾ ಸದ್ಯ ಬೇರ್ಪಟ್ಟಿದ್ದಾರೆ ಎಂಬುದು ಸದ್ಯದ ವದಂತಿ. ಇದರ ಜೊತೆಗೆ ಈ ಜೋಡಿ ಸದ್ಯದಲ್ಲೇ ವಿಚ್ಛೇದನ ನೀಡಲಿದ್ದಾರೆ ಎನ್ನಲಾಗುತ್ತಿದೆ. ಅದರ ಜೊತೆ ಜೊತೆಗೆ ಪಾಂಡ್ಯ ತನ್ನ ಬಹುಪಾಲು ಆಸ್ತಿಯನ್ನು ಆಕೆಗೆ ನೀಡಲಿದ್ದಾರೆ ಎಂದು ಹರಿದಾಡುತ್ತಿದೆ.
ಹೌದು. ಸೆಲೆಬ್ರಿಟಿ, ಸ್ಟಾರ್​ಗಳು ಎಂದ ಮೇಲೆ ಕುಂತರು, ನಿಂತರು ಸುದ್ದಿಯಾಗೋದು ನಿಜ. ಆದರೆ ಇಷ್ಟಪಟ್ಟು ವಿವಾಹವಾದ ಪ್ರೇಯಸಿಯನ್ನೀಗ ಹಾರ್ದಿಕ್​ ಪಾಂಡ್ಯ ತೊರೆಯುತ್ತಿದ್ದಾರೆ ಎಂಬ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ವಿಚಾರವಾಗಿ ಪಾಂಡ್ಯ ಅಥವಾ ನತಾಶಾ ಏನು ಹೇಳಿಕೊಂಡಿಲ್ಲ.
/newsfirstlive-kannada/media/post_attachments/wp-content/uploads/2024/05/hardik-pandya-2-1.jpg)
ಇದರ ಜೊತೆ ಜೊತೆಗೆ ಪಾಂಡ್ಯ ಆಸ್ತಿ ಬಗ್ಗೆಯೂ ಪೋಸ್ಟ್​ಗಳು ಹರಿದಾಡುತ್ತಿವೆ. ಹಾರ್ದಿಕ್​ ಪಾಂಡ್ಯ ತನ್ನ ಶೇ.70ರಷ್ಟು ಆಸ್ತಿಯನ್ನು ಆಕೆಗೆ ನೀಡಬೇಕಾಗುತ್ತದೆ. ಕೋಟಿಗಟ್ಟಲೆ ಆಸ್ತಿಯ ಒಡೆಯನಾದ ಪಾಂಡ್ಯ ನತಾಶಾನಿಗೆ ಕೊಡಬೇಕಾಗುತ್ತದೆ ಎಂದು ವೈರಲ್​ ಆಗುತ್ತಿದೆ.
ಪಾಂಡ್ಯ ಎಷ್ಟು ಆಸ್ತಿಯ ಒಡೆಯ?
ಇದಲ್ಲದೆ, ಪಾಂಡ್ಯ ಐಪಿಎಲ್​ನಲ್ಲಿ 15 ಕೋಟಿ ಮೊತ್ತವನ್ನು ಪಡೆಯುತ್ತಾರೆ. ಇದಲ್ಲದೆ ವಡೋದರ ಮತ್ತು ಮುಂಬೈನಲ್ಲಿ ಕೋಟಿ ಮೌಲ್ಯದ ಮನೆಯಿದೆ. ಮಾಹಿತಿ ಪ್ರಕಾರ, ಮುಂಬೈನಲ್ಲಿ 30 ಕೋಟಿಗೆ ಅಪಾರ್ಟ್​ಮೆಂಟ್​ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ವಡೋದರಾದಲ್ಲಿ ಮನೆಯಿದೆಯಂತೆ. ಒಟ್ಟು 91 ಕೋಟಿಯ ಆಸ್ತಿಯ ಒಡೆಯ ಎನ್ನಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/05/hardik-pandya.jpg)
ಪಾಂಡ್ಯಗೆ ಏನಾಯ್ತು?
ಇನ್ನು ಹರಿದಾಡುತ್ತಿರುವ ವದಂತಿಗಳ ಪ್ರಕಾರ, ಪಾಂಡ್ಯ ಮತ್ತು ನತಾಶಾ ಫೆಬ್ರವರಿ 14ರಂದು ಇನ್​ಸ್ಟಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಇದಾದ ನಂತರ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು ಎನ್ನಲಾಗುತ್ತಿದೆ. ಆ ಬಳಿಕ ಪತ್ನಿಯ ಹುಟ್ಟುಹಬ್ಬಕ್ಕೂ ಪಾಂಡ್ಯ ಪೋಸ್ಟ್​ ಹಂಚಿಕೊಂಡಿಲ್ಲ ಅನ್ನೋದು ಅಭಿಮಾನಿಗಳಿಗೆ ಕಾಡಿದ ದೊಡ್ಡ ಪ್ರಶ್ನೆ. ಅಲ್ಲಿಂದ ಇವರಿಬ್ಬರ ಕುರಿತು ಅನುಮಾನ ಹುಟ್ಟಿಕೊಂಡಿದೆ. ಅದಕ್ಕೆಲ್ಲಾ ಈ ಸ್ಟಾರ್​ ಜೋಡಿಗಳು ಉತ್ತರಿಸಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us