/newsfirstlive-kannada/media/post_attachments/wp-content/uploads/2024/06/HARDHIK_PANDYA-2.jpg)
- ಇಂಡೋ-ಆಸಿಸ್ ಟಿ20 ವಿಶ್ವಕಪ್ನ ವಾರ್ ಕ್ರೇಜ್ ನೆಕ್ಸ್ಟ್ ಲೆವೆಲ್
- ಇದು ಮ್ಯಾಚ್ ವಿನ್ನರ್ಸ್ ವರ್ಸಸ್ ಮ್ಯಾಚ್ ವಿನ್ನರ್ಸ್ಗಳ ಕಾಳಗ
- ಮದಗಜಗಳಾದ ಭಾರತ- ಆಸಿಸ್ ತಂಡ ಇಂದು ತೊಡೆ ತಟ್ಟಲಿವೆ
ಇಂಡೋ-ಆಸಿಸ್​​ ಫೈಟ್​​​ ಅಂದ್ರೆ ಆ ಪಂದ್ಯ ಕ್ರೇಜ್ ಬೇರೆ ಲೆವೆಲ್​​ನಲ್ಲಿ ಇರುತ್ತೆ. ಅಂತಹ ಕ್ರೇಜ್​​ ಹುಟ್ಟಲು ಕಾರಣ ಮ್ಯಾಚ್ ವಿನ್ನರ್ಸ್​. ಇಂದಿನ ಮೆಗಾ ಬ್ಯಾಟಲ್​​​​ ಕೂಡ ಮ್ಯಾಚ್​ ವಿನ್ನರ್ಸ್​ ವರ್ಸಸ್ ಮ್ಯಾಚ್ ವಿನ್ನರ್ಸ್​ಗಳ ಕಾಳಗ ಎಂದೇ ಬಿಂಬಿತವಾಗಿದೆ.
ಯಾವ ತಂಡಕ್ಕೆ, ಯಾವ ಮ್ಯಾಚ್​​​ ವಿನ್ನರ್​​ಗಳ ಬಲ..?
ಟಿ20 ವಿಶ್ವಕಪ್​​​​ನ ಸೂಪರ್​​​​-8 ಪಂದ್ಯಗಳು ನೋಡುಗರಿಗೆ ಸಖತ್ ಕಿಕ್ ಕೊಡ್ತಿವೆ. ಇಲ್ಲಿತನಕ ನಡೆದ ಪಂದ್ಯಗಳ ತೂಕ ಒಂದಾದ್ರೆ ಇಂದಿನ ಪಂದ್ಯದ ತೂಕವೇ ಮತ್ತೊಂದು. ಯಾಕಂದ್ರೆ ವಿಶ್ವಕಪ್​ ಅಖಾಡದಲ್ಲಿ ಮದಗಜಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ತೊಡೆ ತಟ್ಟಲಿವೆ. ಉಭಯ ತಂಡಗಳ ಸೆಮಿಫೈನಲ್​ ಭವಿಷ್ಯ ನಿರ್ಧರಿಸುವ ಈ ಪಂದ್ಯ ಮ್ಯಾಚ್ ವಿನ್ನರ್ಸ್​ ವರ್ಸಸ್​ ಮ್ಯಾಚ್ ವಿನ್ನರ್ಸ್​ಗಳ ಕದನವಾಗಿ ಮಾರ್ಪಟ್ಟಿದೆ.
ಡೆಡ್ಲಿ ಪೇಸರ್​​ ಬೂಮ್ರಾ-ಸ್ಟಾರ್ಕ್​ ಮೇಲೆ ಎಲ್ಲರ ಕಣ್ಣು..!
ಇವತ್ತಿನ ಪಂದ್ಯದಲ್ಲಿ ಉಭಯ ತಂಡಕ್ಕೂ ಇಬ್ಬರು ಪೇಸ್ ಮ್ಯಾಚ್​​ವಿನ್ನರ್​​ಗಳ ಬಲವಿದೆ. ಅವರೇ ಜಸ್​ಪ್ರೀತ್​ ಬೂಮ್ರಾ ಹಾಗೂ ಮಿಚೆಲ್ ಸ್ಟಾರ್ಕ್​. ವಿಶ್ವಕಪ್​ನಲ್ಲಿ ಇಬ್ಬರ ಹವಾ ಜೋರಾಗಿದ್ದು, ಎಲ್ಲರ ಚಿತ್ತ ಇವರತ್ತ ನೆಟ್ಟಿದೆ.
T20 WC ನಲ್ಲಿ ಬೂಮ್ರಾ-ಸ್ಟಾರ್ಕ್​
ಪ್ರಸಕ್ತ ಟಿ20 ವಿಶ್ವಕಪ್​​​​ನಲ್ಲಿ ಬೆಂಕಿ ಬೌಲರ್​ ಜಸ್​ಪ್ರೀತ್ ಬೂಮ್ರಾ ಆಡಿದ 5 ಪಂದ್ಯಗಳಿಂದ 3.42 ಎಕಾನಮಿಯಲ್ಲಿ 10 ವಿಕೆಟ್ ಕಬಳಿಸಿದ್ದಾರೆ. ಇನ್ನು ಆಸಿಸ್​​ನ ಮಿಚೆಲ್ ಸ್ಟಾರ್ಕ್​ 4 ಪಂದ್ಯಗಳನ್ನಾಡಿದ್ದು, 7.78 ಎಕಾನಮಿಯಲ್ಲಿ 3 ವಿಕೆಟ್​ ಬೇಟೆಯಾಡಿದ್ದಾರೆ.
ಪಂದ್ಯ ಗೆಲ್ಲಿಸಲು ಆಲ್​ರೌಂಡರ್​ ಹಾರ್ದಿಕ್​​​-ಸ್ಟೋಯ್ನಿಸ್​​​​​ ಪಣ..!
ಇಂಡೋ-ಆಸಿಸ್​ ಮೆಗಾ ಬ್ಯಾಟಲ್​​ನಲ್ಲಿ ಆಲ್​ರೌಂಡರ್​ಗಳಾದ ಹಾರ್ದಿಕ್​ ಪಾಂಡ್ಯ ಹಾಗೂ ಮಾರ್ಕಸ್​ ಸ್ಟೋಯ್ನಿಸ್​ ಮ್ಯಾಚ್ ವಿನ್ನಿಂಗ್ ಹಣೆಪಟ್ಟಿ ಹೊತ್ತಿದ್ದಾರೆ. ಇಬ್ಬರಿಗೂ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ತಾಕತ್ತಿದೆ. ಅದು ವಿಶ್ವಕಪ್​​​​​​ನಲ್ಲಿ ಪ್ರೂವ್ ಆಗಿದೆ.
T20 WC ನಲ್ಲಿ ಹಾರ್ದಿಕ್​-ಸ್ಟೋಯ್ನಿಸ್​​​​​
ಈ ವಿಶ್ವಕಪ್​​ನಲ್ಲಿ ಕಮಾಲ್ ಮಾಡ್ತಿರೋ ಹಾರ್ದಿಕ್​ ಪಾಂಡ್ಯ 5 ಪಂದ್ಯಗಳಿಂದ 8 ವಿಕೆಟ್ ಪಡೆದಿದ್ದಾರೆ. 6.47 ಎಕಾನಮಿ ಕಾಯ್ದುಕೊಂಡ್ರೆ, 89 ರನ್ ಸಿಡಿಸಿದ್ದಾರೆ. ಇನ್ನು ಮಾರ್ಕಸ್ ಸ್ನೋಯಿಸ್​​​​​ ಆಡಿದ 6 ಪಂದ್ಯದಲ್ಲಿ 8 ವಿಕೆಟ್ ಕಬಳಿಸಿದ್ದಾರೆ. 7.30 ಬೌಲಿಂಗೆ ಎಕಾನಮಿ ಆದ್ರೆ ಬ್ಯಾಟಿಂಗ್​​​​ನಲ್ಲಿ 167 ರನ್ ಹೊಡೆದಿದ್ದಾರೆ.
ಸ್ಪಿನ್ ಮೋಡಿಯಿಂದ ಪಂದ್ಯ ಗೆಲ್ಲಿಸ್ತಾರೆ ಕುಲ್ದೀಪ್​​​-ಜಂಪಾ..!
ಚೈನಾಮ್ಯಾನ್ ಕುಲ್ದೀಪ್​ ಯಾದವ್​ ಹಾಗೂ ಆ್ಯಡಂ ಜಂಪಾ ಎಂತಹ ಮ್ಯಾಚ್ ವಿನ್ನರ್​ಗಳು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಇವತ್ತು ಕೂಡ ತಮ್ಮ ಸ್ಪಿನ್ ಅಸ್ತ್ರ ಬಳಸಿ ತಂಡಕ್ಕೆ ಗೆಲುವಿನ ಗಿಫ್ಟ್ ಕೊಡಲು ಹವಣಿಸ್ತಿದ್ದಾರೆ.
T20 WC ನಲ್ಲಿ ಕುಲ್​ದೀಪ್​​​-ಜಂಪಾ​​​​​
ಚೈನಾಮ್ಯಾನ್ ಕುಲ್ದೀಪ್​ ಯಾದವ್​ ಪ್ರಸಕ್ತ ವಿಶ್ವಕಪ್​​ನಲ್ಲಿ ಎರಡೇ ಪಂದ್ಯವಾಡಿದ್ದಾರೆ. ಆದರೂ 6.37 ಎಕಾನಮಿಯಲ್ಲಿ 5 ವಿಕೆಟ್​ ಪಡೆದಿದ್ದಾರೆ. ಆಸ್ಟ್ರೇಲಿಯಾದ ಆ್ಯಡಂ ಜಂಪಾ 6 ಪಂದ್ಯವಾಡಿ 13 ವಿಕೆಟ್ ಬೇಟೆಯಾಡಿದ್ದಾರೆ. 6.2 ಬೌಲಿಂಗ್​ ಎಕಾನಮಿ ಆಗಿದೆ. ಈ ಮ್ಯಾಚ್​ ವಿನ್ನರ್​ಗಳ ಉಪಸ್ಥಿತಿಯೇ ಇಂಡೋ-ಆಸಿಸ್ ವಿಶ್ವಕಪ್​​​​​ನ ವಾರ್​​ನ ಕ್ರೇಜ್ ​​​ಅನ್ನ ನೆಕ್ಸ್ಟ್​ ಲೆವೆಲ್​​​​ಗೆ ಕೊಂಡೊಯ್ದಿದೆ. ಆದರೆ ಇಂದಿನ ದಂಗಲ್​​ನಲ್ಲಿ ಮ್ಯಾಚ್ ವಿನ್ನರ್ ಆಗೋದ್ಯಾರು? ಯಾರ ಕೈ ಮೇಲಾಗುತ್ತೆ ? ಯಾರು ಮುಗ್ಗರಿಸ್ತಾರೆ ಅನ್ನೋದನ್ನ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ