ಟೀಕೆಗಳನ್ನು ಪಕ್ಕಕ್ಕೆ ಇಡಿ.. ಪಾಂಡ್ಯರ ಈ ರೋಚಕ ಜರ್ನಿ ಬಗ್ಗೆ ನಿಮಗೆಷ್ಟು ಗೊತ್ತು..?

author-image
Ganesh
Updated On
ಟೀಕೆಗಳನ್ನು ಪಕ್ಕಕ್ಕೆ ಇಡಿ.. ಪಾಂಡ್ಯರ ಈ ರೋಚಕ ಜರ್ನಿ ಬಗ್ಗೆ ನಿಮಗೆಷ್ಟು ಗೊತ್ತು..?
Advertisment
  • ODI ವಿಶ್ವಕಪ್ TO​ ಟಿ20 ವಿಶ್ವಕಪ್.. ರೋಚಕ ಜರ್ನಿ
  • 75 ಕೆಜಿಯ ಪಾಂಡ್ಯ 4 ತಿಂಗಳಲ್ಲಿ ಇಳಿಸಿದ್ದು 68 ಕೆಜಿಗೆ
  • ವರ್ಕೌಟ್​ ಮಿಸ್ಸಿಲ್ಲ.. 1 ಗಂಟೆ ಯೋಗ.. ಧ್ಯಾನ

ಹಾರ್ದಿಕ್ ಪಾಂಡ್ಯ! ಟೀಮ್ ಇಂಡಿಯಾದ ಸೂಪರ್ ಸ್ಟಾರ್​. ಟಿ20 ವಿಶ್ವಕಪ್​ ಗೆಲುವಿನ ಹಿಂದಿನ ರಿಯಲ್ ಹೀರೋ. ಈ ಹೀರೋ ಟಿ20 ವಿಶ್ವಕಪ್​ ಅಡಿದ ಕಥೆಯೇ ರೋಚಕವಾಗಿದೆ. ಏಕದಿನ ವಿಶ್ವಕಪ್​ ವೇಳೆ ಗಂಭೀರ ಇಂಜುರಿಯಾಗಿ ಟೀಮ್ ಇಂಡಿಯಾದಿಂದ ದೂರವಾಗಿದ್ದ ಹಾರ್ದಿಕ್, ಟಿ20 ವಿಶ್ವಕಪ್​ ಆಡಲು ಮಾಡಿದ ಕಸರತ್ತು ಅಷ್ಟಿಷ್ಟಲ್ಲ.

ಹಾರ್ದಿಕ್ ಪಾಂಡ್ಯ, ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್. ತಂಡದ ರಿಯಲ್​​ ಗೇಮ್ ಚೇಂಜರ್. ಈ ಹಾರ್ದಿಕ್ ಪಾಂಡ್ಯ ಆಟಕ್ಕಿಂತ ಹೆಚ್ಚು ಸುದ್ದಿಯಾಗಿರೋದೇ ಸಾಲು ಸಾಲು ಇಂಜುರಿಯ ಕಾರಣಕ್ಕೆ. ಈ ಫಿಟ್​ನೆಸ್​ ಕಾರಣದಿಂದಲೇ ಇದೀಗ ಟಿ20 ತಂಡದ ನಾಯಕತ್ವವನ್ನೂ ಕಳೆದುಕೊಂಡಿದ್ದಾರೆ. ಟೀಮ್​ ಇಂಡಿಯಾದ ಟಿ20 ವಿಶ್ವಕಪ್ ಗೆದ್ದಾಗ ಹೀರೋ ಆಗಿ ಮೆರೆದ ಹಾರ್ದಿಕ್, 6 ತಿಂಗಳ ಹಿಂದೆ ತಂಡದಿಂದಲೇ ಗೇಟ್​ಪಾಸ್ ಪಡೆದಿದ್ದರು. ಒಂದೆಡೆ ಟೀಮ್ ಇಂಡಿಯಾದಿಂದ ಹೊರ ಬಿದ್ದಿದ್ದ ಹಾರ್ದಿಕ್​ರ ವೈಯಕ್ತಿಕ ಜೀವನದಲ್ಲೂ ಬಿರುಗಾಳಿ ಎದ್ದಿತ್ತು.

ಇದನ್ನೂ ಓದಿ:ಈ ಹುಡ್ಗಿಯಿಂದಾಗಿ ಪಾಂಡ್ಯ ಡಿವೋರ್ಸ್ ಪಡೆದರಾ​..? ಹಾರ್ದಿಕ್ ಜೊತೆ ತಳುಕು ಹಾಕಿಕೊಂಡ ಬ್ಯೂಟಿ ಇವರೇ..!

ಏಕದಿನ ವಿಶ್ವಕಪ್​ನ ಬಾಂಗ್ಲಾದೇಶ ಎದುರಿನ ಪಂದ್ಯದ ವೇಳೆ ಆ್ಯಂಕಲ್ ಇಂಜುರಿಗೆ ತುತ್ತಾಗಿದ್ದ ಹಾರ್ದಿಕ್ ಒಂದ್ಕಡೆ ಟೂರ್ನಿಯಿಂದ ಹೊರ ಬಿದ್ದಿದ್ದರೆ, ಮತ್ತೊಂದು ಕಡೆ ಪತ್ನಿ ನಟಾಶಾ ಜೀವನದಿಂದ ದೂರವಾಗುವ ನಿರ್ಧಾರಕ್ಕೆ ಬಂದಾಗಿತ್ತು. ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ ಎರಡೂ ಸಂಕಷ್ಟಕ್ಕೆ ಸಿಲುಕಿತ್ತು. ಆ ಸಂಕಷ್ಟದ ಸಂದರ್ಭದಲ್ಲಿ ಹಾರ್ದಿಕ್​​ ಪಣ ತೊಟ್ಟು ಕಮ್​ಬ್ಯಾಕ್​ ಮಾಡಿದ ಕಥೆ ನಿಜಕ್ಕೂ ರೋಚಕ.

ಇಂಜುರಿ ಬಳಿಕ ದೇಹ ತೂಕ
ಇಂಜುರಿ ಬಳಿಕ 75 ಕೆಜಿ ದೇಹ ತೂಕ ಹೆಚ್ಚಿಸಿಕೊಂಡಿದ್ದ ಹಾರ್ದಿಕ್, ನಾಲ್ಕೇ ತಿಂಗಳಲ್ಲಿ 68 ಕೆಜಿಗೆ ತೂಕ ಇಳಿಸಿದ್ದರು. 7 ಕೆ.ಜಿ ತೂಕ ಇಳಿಸಿ ವಿಶ್ವಕಪ್​ಗೆ ಟೂರ್ನಿಗೆ ರೆಡಿಯಾಗಿದ್ದರು. ಏಕದಿನ ವಿಶ್ವಕಪ್ ಇಂಜುರಿಯಿಂದ, ಟಿ20 ವಿಶ್ವಕಪ್​ವರೆಗಿನ 4 ತಿಂಗಳ ಅವಧಿಯಲ್ಲಿ ಪಾಂಡ್ಯ ತಮ್ಮ ದಿನಚರಿಯನ್ನೇ ಬದಲಿಸಿಕೊಂಡಿದ್ರು.

ಇದನ್ನೂ ಓದಿ:ಗಂಭೀರ್ ಮೇಲೆ ಹಳೇ ದ್ವೇಷ ಸಾಧಿಸಿದ ಅನುಮಾನ.. 12 ವರ್ಷಗಳ ಹಿಂದಿನ ನಡೆಗೆ ಇಂದು ರಿವೇಂಜ್..!

ಬೆಳಗ್ಗೆ, ಸಂಜೆ ವರ್ಕೌಟ್​ ಮಿಸ್ಸಿಲ್ಲ
ಇಂಜುರಿ ಬಳಿಕ ಹಾರ್ದಿಕ್​ ದಿನಚರಿ ಬದಲಾಗಿತ್ತು. ಟಿ20 ವಿಶ್ವಕಪ್​​ ಆಡೋ ಕನಸು ಕಾಣ್ತಿದ್ದ ಹಾರ್ದಿಕ್​, ಬೆಳಗ್ಗೆ 7 ಗಂಟೆಗೆ ಎದ್ದು, ತಣ್ಣೀರ ಸ್ನಾನ ಮಾಡಿ 55 ನಿಮಿಷಗಳ ಕಾಲ ಯೋಗ ಮಾಡ್ತಿದ್ರು. 30 ನಿಮಿಷಗಳ ಕಾಲ ಧ್ಯಾನದಲ್ಲಿ ಮಗ್ನರಾಗುತ್ತಿದ್ದರು. ಈ ಬಳಿಕ ಶುರುವಾಗುತ್ತಿದ್ದೇ ಜಿಮ್ ಸೆಷನ್. ಬೆಳಗ್ಗೆ 11.30ರಿಂದ ಮಧ್ಯಾಹ್ನದ ತನಕ ರೋಟಿನ್​​ ವರ್ಕೌಟ್​ನಲ್ಲೇ ಬ್ಯುಸಿಯಾಗುತ್ತಿದ್ದರು. ಬಳಿಕ ಫಿಸಿಯೋ ಮಾರ್ಗದರ್ಶನದಲ್ಲಿ ಸ್ಪೆಷಲ್ ಕೋರ್ಸ್​ನತ್ತ ಚಿತ್ತ ಹರಿಸುತ್ತಿದ್ದರು.

ಬೆಂಗಳೂರಿನ ಎನ್​ಸಿಎನಲ್ಲೇ ಬಹುಪಾಲು ಕಳೆಯುತ್ತಿದ್ದ ಹಾರ್ದಿಕ್ ಪಾಂಡ್ಯ, ಎನ್​ಸಿಎ ಟ್ರೈನರ್ ಮಾರ್ಗದರ್ಶನದಲ್ಲಿ ದಿನಪೂರ್ತಿ ಬೆವರಿಳಿಸುತ್ತಿದ್ದರು. ವರ್ಕೌಟ್ ಮಾತ್ರವೇ ಅಲ್ಲ. ಅಷ್ಟೇ ಸ್ಟ್ರಿಕ್ಟ್​ ಡಯಟ್ ಕೂಡ ಫಾಲೋ ಮಾಡ್ತಿದ್ದರು.

ಹಾರ್ದಿಕ್​​ ಡಯಟ್​ ಪ್ಲಾನ್..!
ಸಣ್ಣವಾಗೋ ಉದ್ದೇಶದೊಂದಿಗೆ ಹಾರ್ಡ್​ ವರ್ಕೌಟ್​ ಸ್ಟಾರ್ಟ್​ ಮಾಡಿದ ಹಾರ್ದಿಕ್​, ಸೇವಿಸೋ ಅಹಾರದ ವಿಚಾರದಲ್ಲೂ ಕಟ್ಟು ನಿಟ್ಟಿನ ಡಯಟ್ ಪ್ಲಾನ್​ ಮಾಡಿದ್ರು. ತೆಂಗಿನ ಕಾಯಿಯ ನೀರು, ಫ್ರೆಶ್ ಜ್ಯೂಸ್, ಹಣ್ಣು ಹಂಪಲುಗಳ ಜೊತೆಗೆ ಕೆನೆ ತೆಗೆದ ಹಾಲನ್ನ ಹಾರ್ದಿಕ್​ ಸೇವಿಸುತ್ತಿದ್ದರು. ಪ್ರೋಟಿನ್​ ಕಾರಣಕ್ಕೆ ಕಡ್ಡಾಯವಾಗಿ ಮೊಟ್ಟೆ, ಚಿಕನ್​ ಹಾಗೂ ಲೋ ಫ್ಯಾಟ್​ನ ಮೊಸರನ್ನ ಸೇವಿಸ್ತಿದ್ರು. ಊಟಕ್ಕೆ ರೋಟಿ, ಧಾನ್ಯಗಳು, ಗ್ರೀನ್​ ಸಲಾಡ್​​ ಹಾಗೂ ಕಡಿಮೆ ಪ್ರಮಾಣದಲ್ಲಿ ಅನ್ನವನ್ನು ಹಾರ್ದಿಕ್​ ಸೇವಿಸ್ತಿದ್ರು.

ಇದನ್ನೂ  ಓದಿ:ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು.. ಕನ್ನಡತಿ ಶ್ರೇಯಂಕಾ ಪಾಟೀಲ್ ಶೈನ್

publive-image

ಹಠದ ಜೊತೆ ನಂಬಿಕೆ!
ಬೊಜ್ಜು ಬೊಜ್ಜಾಗಿದ್ದ ದೇಹ ದಂಡಿಸಿ ಸಿಕ್ಸ್​ ಪ್ಯಾಕ್​ ಮಾಡುವ ಹಿಂದೆ ಟೀಮ್ ಇಂಡಿಯಾಗೆ ಕಮ್​ಬ್ಯಾಕ್ ಮಾಡಬೇಕು, ಉತ್ತಮ ಪ್ರದರ್ಶನ ನೀಡಬೇಕು ಎಂಬ ಹಠವಿತ್ತು. ಆ ಹಠದೊಂದಿಗೆ ನಾನು ಮಾಡಬಲ್ಲೇ ಎಂಬ ನಂಬಿಕೆ ಹಾಗೂ ವಿಶ್ವಾಸ ಕೂಡ ಹಾರ್ದಿಕ್​ ಬದಲಾಗಲು ಪ್ರಮುಖ ಕಾರಣವಾಯ್ತು.

ಹಾರ್ದಿಕ್ ಫಿಟ್ನೆಸ್ ಹಿಂದೆ ಈಕೆ ಪಾತ್ರ ಅಪಾರ
ಯಾಸ್ಮಿನ್ ಕರಾಚಿವಾಲ, ಈಕೆ ಸೆಲೆಬ್ರೆಟಿ ಫಿಟ್ನೆಸ್ ಟ್ರೈನರ್. ಬರೋಬ್ಬರಿ 25 ವರ್ಷಗಳ ಅನುಭವ ಇರುವ ಈಕೆ, ಹಲವು ಸೆಲೆಬ್ರೆಟಿಗಳ ಫೇವರಿಟ್ ಆಗಿದ್ದಾರೆ. ಹಾರ್ದಿಕ್​ಗೂ ಪಾಂಡ್ಯಾಗೂ ಕೂಡ ಇವ್ರೇ ಟ್ರೈನರ್ ಆಗಿದ್ದರು. ಹಾರ್ದಿಕ್ ಫ್ಯಾಟ್​ ಟು ಫಿಟ್ ಆಗಿದ್ದರ ಹಿಂದೆ ಈಕೆಯ ಶ್ರಮವೂ ಅಪಾರವಿದೆ. 4 ತಿಂಗಳುಗಳ ಆಫ್​ ಫೀಲ್ಡ್​ನ ಕಠಿಣ ಪರಿಶ್ರಮದ ಫಲವಾಗಿ ಫ್ಯಾಟ್​ ಆಗಿದ್ದ ಪಾಂಡ್ಯ ಫುಲ್​ ಫಿಟ್​ ಆಗಿ ಆನ್​ಫೀಲ್ಡ್​ಗೆ ಕಮ್​ಬ್ಯಾಕ್​ ಮಾಡಿದ್ದರು. ವಿಶ್ವಕಪ್​ ಟೂರ್ನಿಯಲ್ಲಿ ಕಮಾಲ್​ ಮಾಡಿ, ಭಾರತ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ರು. ಅಸಂಖ್ಯ ಭಾರತೀಯ ಅಭಿಮಾನಿ​ಗಳ ಕನಸನ್ನು ನನಸು ಮಾಡಿದ್ರು.

ಇದನ್ನೂ ಓದಿ:ಗಂಭೀರ್​​ ಆಡಿದ ಗೇಮ್​ಗೆ ಬೆಂಡ್​ ಆದ ಕೊಹ್ಲಿ.. ಆರಂಭದಲ್ಲೇ ಜುಟ್ಟು ಹಿಡಿದು ಬಿಗಿಗೊಳಿಸಿದ ಗೌತಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment