/newsfirstlive-kannada/media/post_attachments/wp-content/uploads/2024/05/hardik-pandya-6-1.jpg)
ನತಾಶಾ. 2018ರಲ್ಲಿ ಹಾರ್ದಿಕ್​ ಪಾಂಡ್ಯರವರ ಹೃದಯ ಕದ್ದ ಚೆಲುವೆ. ಇಬ್ಬರ ಸ್ನೇಹ ಪ್ರೀತಿಯಾಗಿ, ಬಳಿಕ ಮಗುವಾಗಿ ನಂತರ ವಿವಾಹವಾದ ಜೋಡಿಯ ನಡುವೆ ಈಗ ಮೈಮನಸ್ಸು ಬಂದಿದೆಯಂತೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಈ ಜೋಡಿ ವಿಚ್ಛೇದನವನ್ನು ನೀಡಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಇದರ ಜೊತೆಗೆ ನತಾಶಾ ಹಿನ್ನಲೆ ಏನು ಎಂಬುದನ್ನು ಅನೇಕರು ಹುಡುಕಾಡುತ್ತಿದ್ದಾರೆ. ಆಕೆ ಎಲ್ಲಿಯವಳು? ಹಿನ್ನೆಲೆ ಏನು?. ಹಾರ್ದಿಕ್​ಗೆ ಆಕೆ ಎಲ್ಲಿ ಸಿಕ್ಕಿದಳು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಸೆರ್ಬಿಯಾ ಟು ಬಾಲಿವುಡ್​
ನತಾಶಾ ಸ್ಟಾಂಕೋವಿಕ್. ಮೂಲತಃ ಸೆರ್ಬಿಯಾದವಳು. 1992 ಮಾರ್ಚ್​ 4 ರಂದು ಜನಿಸಿದಳು. ಡ್ಯಾನ್ಸರ್​, ರೂಪರ್ದರ್ಶಿ, ನಟಿಯಾಗಿರುವ ಈ ಚೆಲುವೆ ಸಿನಿಮಾದಲ್ಲೂ ನಟಿಸಿದ್ದಾಳೆ. ಪ್ರಕಾಶ್​​ ಝಾ ನಿರ್ದೇಶನ ಮಾಡಿದ ‘‘ಸತ್ಯಾಗ್ರಹ’’ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ರಾಜಕೀಯ ಪ್ರವೇಶ ಮಾಡಿದಳು. ಮಾತ್ರವಲ್ಲದೆ ‘‘ಬಿಗ್​ ಬಾಸ್​ 8’’ರಲ್ಲೂ ಕಾಣಿಸಿಕೊಂಡಿದ್ದಳು.
/newsfirstlive-kannada/media/post_attachments/wp-content/uploads/2024/05/Natasha.jpg)
‘‘ಸತ್ಯಾಗ್ರಹ’’ ಮಾಡಿದ್ದಳು ಈ ಚೆಲುವೆ
ಗೋರನ್​ ಮತ್ತು ರಾದಮಿಲಾ ಸ್ಟಾಂಕೋವಿಕ್​ ಈಕೆಯ ಜನ್ಮ ನೀಡಿದ ಜನ್ಮದಾತರು. 2012ರಲ್ಲಿ ನತಾಶಾ ದೂರದ ಸೆರಬಿಯಾದಿಂದ ಭಾರತಕ್ಕೆ ಬಂದಳು. ಪ್ರಾರಂಭದಲ್ಲಿ ಜಾನ್ಸನ್​ ಬ್ರಾಂಡ್​ಗಳಿಗೆ ಮಾಡೆಲ್​ ಆಗಿ ವೃತ್ತಿ ಜೀವನ ಪ್ರಾರಂಭಿಸಿದಳು. ಬಳಿಕ 2013ರಲ್ಲಿ ‘‘ಸತ್ಯಾಗ್ರಹ’’ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್​ಗೆ ಕಾಲಿಟ್ಟಳು.
/newsfirstlive-kannada/media/post_attachments/wp-content/uploads/2024/05/Natasha-1.jpg)
‘‘ಡಿಜೆ ವಾಲಿ ಬಾಬು’’ ಹಾಡಿನಿಂದ ಫೇಮಸ್ಸೇ ಫೇಮಸ್ಸು
ನತಾಶಾ ಬಿಗ್​ಬಾಸ್​8ರಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ಬಾದ್​ ಶಾ ಮತ್ತು ಆಸ್ತಾ ಗಿಲ್​​ ಅವರ ‘‘ಡಿಜೆ ವಾಲಿ ಬಾಬು’’ ಹಾಡಿನಲ್ಲಿ ಕಾಣಿಸಿಕೊಂಡ ನಂತರ ಜನಪ್ರಿಯತೆ ಪಡೆದರು. 2016ರಲ್ಲಿ ಸೌರಭ್​ ವರ್ಮಾ ಅವರ ‘‘7 ಅವರ್ಸ್​​ ಟು ಗೋ’’ ಸಿನಿಮಾದಲ್ಲಿ ಕಾಣಿಸಿಕೊಂಡರು.
/newsfirstlive-kannada/media/post_attachments/wp-content/uploads/2024/05/natasaha.jpg)
‘‘ಝಿರೋ’’
2017ರಲ್ಲಿ ಜನಪ್ರಿಯತೆ ಪಡೆದಿದ್ದ ‘‘ಫಕ್ರೀ ರಿಟರ್ನ್’’ ಸಿನಿಮಾದ​ ‘‘ಮೆಹಬೂಬ ಸಿನಿಮಾ’’ ಹಾಡಿನಲ್ಲೂ ಕಾಣಿಸಿಕೊಂಡಿದ್ದರು. 2018ರಲ್ಲಿ ಶಾರುಖ್​ ಖಾನ್​, ಅನುಷ್ಕಾ ಶರ್ಮಾ, ಕತ್ರಿನಾ ಕೈಫ್​ ನಟನೆಯ ‘‘ಝಿರೋ’’ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು.
/newsfirstlive-kannada/media/post_attachments/wp-content/uploads/2024/05/natash.jpg)
ಡಿಜಿಟಲ್​ಗೂ ಕಾಲಿಟ್ಟ ನತಾಶಾ
ನಂತರ ಡಿಜಿಟಲ್​ಗೆ ಪಾದಾರ್ಪಣೆ ಮಾಡಿದ ಆಕೆ. 2019ರಲ್ಲಿ ಅದಾ ಶರ್ಮಾರವರ ‘‘ದಿ ಹಾಲಿಡೇ’’ ವೆಬ್​ ಸಿರೀಸ್​ನಲ್ಲಿ ಕಾಣಿಸಿಕೊಂಡರು.
/newsfirstlive-kannada/media/post_attachments/wp-content/uploads/2024/05/Natasha-3.jpg)
ಮುಂಬೈ ನೈಟ್​ಕ್ಲಬ್​ನಲ್ಲಿ ಸಿಕ್ಕಳು
ಇನ್ನು ಹಾರ್ದಿಕ್​ ಪಾಂಡ್ಯ ಆಕೆ 2018ರಲ್ಲಿ ಸಿಕ್ಕಳು. ಮುಂಬೈ ನೈಟ್​ಕ್ಲಬ್​ನಲ್ಲಿ ಇಬ್ಬರು ಜೊತೆಯಾದರು. ಆ ಬಳಿಕ ಇಬ್ಬರ ನಡುವೆ ಸಂಪರ್ಕ ಹುಟ್ಟಿಕೊಂಡಿತು. ಪರಿಚಯ ಸ್ನೇಹವಾಗಿ ಒಡನಾಟ ಜಾಸ್ತಿಯಾಯಿತು.
/newsfirstlive-kannada/media/post_attachments/wp-content/uploads/2024/05/hardik-pandya-1.jpg)
ಅಗಸ್ತ್ಯನ ಆಗಮನ
2020ರಲ್ಲಿ ತನಗಿಂತ 2 ವರ್ಷ ಹಿರಿಯ ನತಾಶಾಗೆ ಹಾರ್ದಿಕ್​ ಆಕೆಗೆ ಪ್ರಪೋಸ್​ ಮಾಡಿದರು. ಬಳಿಕ ಅದೇ ವರ್ಷ ಮೇ ತಿಂಗಳಿನಲ್ಲಿ ನತಾಶಾ ಗರ್ಭಿಣಿಯಾದಳು. ನಂತರ ಈ ಜೋಡಿ ಅಗಸ್ತ್ಯ ಎಂಬ ಮುಂದಾದ ಮಗನನ್ನು ಜುಲೈ ತಿಂಗಳಿನಲ್ಲಿ ಬರಮಾಡಿಕೊಂಡರು.
/newsfirstlive-kannada/media/post_attachments/wp-content/uploads/2024/05/Natasha-2.jpg)
ಮಗ ಬಂದ ಬಳಿಕ ಮದುವೆ
ಮಗನ ಜನನದ ಬಳಿಕ ಹಾರ್ದಿಕ್​ ಮತ್ತು ನತಾಶಾ ಇಬ್ಬರು ಸಾಂಪ್ರದಾಯಿಕವಾಗಿ ವಿವಾಹವಾಗಲು ಬಯಸುತ್ತಾರೆ. ಫೆಬ್ರವರಿ 14, 2023ರ.ದು ಉಯದಪುರದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗುತ್ತಾರೆ. ಕುಟುಂಬ ಮತ್ತು ಸ್ನೇಹಿತರ ಜೊತೆ ಈ ಜೋಡಿ ವಿವಾಹವಾಗುತ್ತಾರೆ.
/newsfirstlive-kannada/media/post_attachments/wp-content/uploads/2024/05/hardik-pandya.jpg)
ಆದರೀಗ ಈ ಜೋಡಿ ನಡುವೆ ಬಿರುಕು ಉಂಟಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಅದಕ್ಲೆ ತಕ್ಕಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಕೂಡ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಉತ್ತರ ಕ್ರಿಕೆಟಿಗ ಪಾಂಡ್ಯ ಮತ್ತು ಮಾಡೆಲ್​ ನತಾಶಾ ಉತ್ತರ ನೀಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us