/newsfirstlive-kannada/media/post_attachments/wp-content/uploads/2025/03/PANDYA-kohli.jpg)
ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸೋಶಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬೆನ್ನಲ್ಲೇ ಪಾಂಡ್ಯ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ಫೋಟೋ ಹೊಸ ಸಂಚಲನ ಸೃಷ್ಟಿ ಮಾಡಿದೆ.
ಏನದು..?
ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಟೀಂ ಇಂಡಿಯಾ ಆಟಗಾರರು ಎತ್ತಿ ಹಿಡಿದು ಸಂಭ್ರಮಿಸಿದರು. ಅವರಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಒಬ್ಬರಾಗಿದ್ದರು. 2024ರಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಾಗ, ಕಪ್ ಪಿಚ್ನಲ್ಲಿ ಇಟ್ಟು, ಇಟಲಿಯ ಸೋಶಿಯಲ್ ಮೀಡಿಯಾ ಸ್ಟಾರ್ ಕಾಬಿ ಲೇಮ್ (Khaby Lame) ಸ್ಟೈಲ್ನಲ್ಲಿ ಪೋಸ್ ನೀಡಿದ್ದರು. ಇದೇ ಪೋಸ್ ಅನ್ನು ಚಾಂಪಿಯನ್ಸ್ ಟ್ರೋಫಿ ಗೆದ್ದಾಗಲೂ ಮರುಸೃಷ್ಟಿಸಿದ್ದರು. ಈ ಫೋಟೋವನ್ನು ಹಾರ್ದಿಕ್ ಪಾಂಡ್ಯ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದರು.
ಇದನ್ನೂ ಓದಿ:ಮತ್ತೆ ವಿಘ್ನ.. ಕೊನೆ ಸೆಕೆಂಡ್ನಲ್ಲಿ ಕೈಕೊಟ್ಟ ಮಷಿನ್; ಸುನಿತಾ ವಿಲಿಯಮ್ಸ್ ಭೂಮಿಗೆ ಬರೋದು ಮತ್ತೆ ವಿಳಂಬ!
ಕೊಹ್ಲಿ ದಾಖಲೆ ಉಡೀಸ್..!
ಪಾಂಡ್ಯ ಪೋಸ್ಟ್ ಮಾಡಿದ ಕೇವಲ 6 ನಿಮಿಷದಲ್ಲಿ ಒಂದು ಮಿಲಿಯನ್ ಲೈಕ್ಸ್ ಬಂದಿದೆ. ಈ ಹಿಂದೆ ಟಿ20 ವಿಶ್ವಕಪ್ ಗೆದ್ದಾಗ ವಿರಾಟ್ ಕೊಹ್ಲಿ ಸಂಭ್ರಮಿಸಿದ ಫೋಟೋವನ್ನು ಶೇರ್ ಮಾಡಿದ್ದರು. ಅದು 7 ನಿಮಿಷದಲ್ಲಿ ಒಂದು ಲಕ್ಷ ಲೈಕ್ಸ್ ಬಂದಿತ್ತು. ಇದೀಗ ಕೊಹ್ಲಿ ಅವರ ಆ ದಾಖಲೆಯನ್ನು ಹಾರ್ದಿಕ್ ಪಾಂಡ್ಯ ಮುರಿಯುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ತಾವೂ ಕೂಡ ಪ್ರಭಾವಶಾಲಿ ಎಂದು ತೋರಿಸಿದ್ದಾರೆ.
HARDIK PANDYA - THE FASTEST INDIAN TO HIT 1M LIKE ON INSTRAGRAM. 🤯
- 1M Like In just 6 minutes....!!!! 🔥 pic.twitter.com/llCQGK8XJ4— Mufaddal Vohra (@mufaddal_vohra) March 12, 2025
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್