/newsfirstlive-kannada/media/post_attachments/wp-content/uploads/2024/07/hartik.jpg)
ಭಾರತ ತಂಡದ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ ಮತ್ತು ಪತ್ನಿ ನತಾಶಾ ನಡುವೆ ಬಿರುಕು ಉಂಟಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಈ ಬಗ್ಗೆ ಖುದ್ದು ಈ ಸ್ಟಾರ್​ ಜೋಡಿ​​​ ಹಾರ್ದಿಕ್​ ಪಾಂಡ್ಯ, ನಟಿ ನತಾಶಾ ಸ್ಟಾಂಕೋವಿಕ್ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಡಿವೋರ್ಸ್​ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಪುಣೆಯಲ್ಲಿ ಶರದ್ ಪವಾರ್ ಪಕ್ಷದ ನಾಯಕನ ಮಗನಿಂದ ಭೀಕರ ಕಾರು ಅಪಘಾತ; ಈ ಪಟ್ಟಣಕ್ಕೆ ಏನಾಗ್ತಿದೆ..?
ಕಳೆದ ಮೂರು ತಿಂಗಳ ಹಿಂದೆಯಷ್ಟೇ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​ಗಾಗಿ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್ಸಿಯಿಂದ ರೋಹಿತ್​ ಶರ್ಮಾರನ್ನು ಕಿತ್ತು ಹಾರ್ದಿಕ್​ ಪಾಂಡ್ಯರಿಗೆ ಪಟ್ಟ ಕಟ್ಟಲಾಯ್ತು. ಅಂದಿನಿಂದಲೂ ಹಾರ್ದಿಕ್​ ಪಾಂಡ್ಯ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ. ಐಪಿಎಲ್​ನಲ್ಲೂ ಹೇಳಿಕೊಳ್ಳುವ ಪ್ರದರ್ಶನ ನೀಡದ ಹಾರ್ದಿಕ್​​​ ನಿಂದನೆಗೆ ಗುರಿಯಾದ್ರು. ಈಗ ತಮ್ಮ ದಾಂಪತ್ಯ ಜೀವನದಲ್ಲೂ ಬಿರುಕು ಮೂಡಿದೆ. ಯೆಸ್​​​​, ಟಿ20 ವಿಶ್ವಕಪ್​​ಗೆ ತಯಾರಿ ನಡೆಸುತ್ತಿರುವ ಹೊತ್ತಲ್ಲೇ ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯಗೆ ಸಂಕಷ್ಟ ಎದುರಾಗಿದೆ.
ಸರ್ಬಿಯಾದ ಮಾಡೆಲ್ ಸ್ಟಾಂಕೋವಿಕ್ ಇತ್ತೀಚೆಗಷ್ಟೇ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಪಾಂಡ್ಯ ಎಂಬ ಹೆಸರನ್ನು ತೆಗೆದುಹಾಕಿದ್ದರು. ಇದಾದ ಬಳಿಕ ಇಬ್ಬರು ತಮ್ಮ ಫೋಟೋಗಳನ್ನು ಎಲ್ಲೂ ಶೇರ್​ ಮಾಡಿಲ್ಲ. ಅದರಲ್ಲೂ ಮಾರ್ಚ್​​ 4ನೇ ತಾರೀಕು ನತಾಶಾ ಸ್ಟಾಂಕೋವಿಕ್ ಬರ್ತಡೇ. ಅಂದು ಹಾರ್ದಿಕ್​​​​​ ಹೆಂಡತಿಗೆ ಒಂದು ಸ್ಟೇಟಸ್​ ಹಾಕಿ ವಿಶ್​ ಮಾಡಿಲ್ಲ. ಇತ್ತೀಚೆಗೆ ಈ ಬಗ್ಗೆ ಮೀಡಿಯಾದವ್ರು ಪ್ರಶ್ನೆ ಮಾಡಿದಾಗಲೂ ನತಾಶಾ ಯಾವುದೇ ರಿಯಾಕ್ಟ್​ ಮಾಡಿರಲಿಲ್ಲ.
/newsfirstlive-kannada/media/post_attachments/wp-content/uploads/2024/05/Hardik-Pandya_Team-India.jpg)
ಆಸ್ತಿ ಕಳೆದುಕೊಳ್ಳುವ ಭೀತಿಯಲ್ಲಿ ಪಾಂಡ್ಯ
ಮೂಲಗಳ ಪಾಂಡ್ಯ ತಮ್ಮ ಪತ್ನಿಯಿಂದ ಡಿವೋರ್ಸ್​ ಪಡೆದಿದ್ದು, 70% ಆಸ್ತಿ ಜೀವನಾಂಶ ಕೊಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.
ನತಾಶಾ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತಾ?
ನತಾಶಾ ಸರ್ಬಿಯಾ ಮೂಲದ ಮಾಡೆಲ್​​. ಇವರು ಮಾಡೆಲ್​ ಆಗಿ ಆ್ಯಡ್​ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಆಸ್ತಿ ಕೂಡ 20 ಕೋಟಿಗೂ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಅವರ ತಂದೆ ಸಾವಿರಾರು ಕೋಟಿ ಆಸ್ತಿ ಹೊಂದಿದ್ದು, ಇದರ ಸಂಪೂರ್ಣ ಪಾಲು ನತಾಶಾಗೆ ಸೇರಲಿದೆ. ಹಾಗಾಗಿ ನಿಜವಾಗಲ್ಲೂ ನತಾಶಾ ಹಾರ್ದಿಕ್​ ಪಾಂಡ್ಯ ಬಳಿ ಇರೋ ಆಸ್ತಿ ಪಡೆಯುತ್ತಾರಾ? ಅನ್ನೋದು ಚರ್ಚೆ ಶುರುವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us