Advertisment

ಹಾರ್ದಿಕ್ ಪಾಂಡ್ಯ ಒಟ್ಟು ಆಸ್ತಿ ಎಷ್ಟು ಕೋಟಿ? ಅಮ್ಮನ ಹೆಸರಲ್ಲಿರೋದು ನಿಜಾನಾ?

author-image
admin
Updated On
ಹಾರ್ದಿಕ್ ಪಾಂಡ್ಯ ಒಟ್ಟು ಆಸ್ತಿ ಎಷ್ಟು ಕೋಟಿ? ಅಮ್ಮನ ಹೆಸರಲ್ಲಿರೋದು ನಿಜಾನಾ?
Advertisment
  • ಮುಂಬೈನಲ್ಲಿ 30 ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್ ಒಡೆಯ
  • 4 ವರ್ಷದ ದಾಂಪತ್ಯ ಜೀವನಕ್ಕೆ ಈ ಸ್ಟಾರ್ ಜೋಡಿ ಫುಲ್ ಸ್ಟಾಪ್‌
  • ಐಪಿಎಲ್‌ನಿಂದಲೇ ಬರೋಬ್ಬರಿ 74.3 ಕೋಟಿ ರೂಪಾಯಿ ಸಂಪಾದನೆ

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್​​​ ಹಾರ್ದಿಕ್​ ಪಾಂಡ್ಯ, ನಟಿ ನತಾಶಾ ಸ್ಟಾಂಕೋವಿಕ್ ಡಿವೋರ್ಸ್ ಅಧಿಕೃತವಾಗಿದೆ. 4 ವರ್ಷದ ದಾಂಪತ್ಯ ಜೀವನಕ್ಕೆ ಈ ಸ್ಟಾರ್ ಜೋಡಿ ಕೊನೆಗೂ ಫುಲ್ ಸ್ಟಾಪ್ ಇಟ್ಟಿದೆ. ಇಬ್ಬರ ಈ ಡಿವೋರ್ಸ್​ ಬಗ್ಗೆ ಖುದ್ದು ಹಾರ್ದಿಕ್​ ಪಾಂಡ್ಯ ಹಾಗೂ ನತಾಶಾ ಅವರೇ ಸ್ಪಷ್ಟನೆ ನೀಡಿದ್ದಾರೆ.

Advertisment

ಇದನ್ನೂ ಓದಿ: ಮುರಿದು ಬಿದ್ದ ಸ್ಟಾರ್​ ಕ್ರಿಕೆಟರ್​ ​ಮದುವೆ.. ಅಧಿಕೃತವಾಗಿ ಡಿವೋರ್ಸ್​ ಮಾಡಿಕೊಂಡ ಹಾರ್ದಿಕ್​, ನತಾಶಾ! 

ಹಾರ್ದಿಕ್ ಪಾಂಡ್ಯ ಆಸ್ತಿ ಎಷ್ಟು?
ಕೆಲವು ವರದಿಗಳ ಪ್ರಕಾರ ಹಾರ್ದಿಕ್‌ ಪಾಂಡ್ಯ ಒಟ್ಟಾರೆ 165 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರಂತೆ. ಮುಂಬೈನಲ್ಲಿ 30 ಕೋಟಿ ರೂಪಾಯಿಗೆ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಇದರೊಂದಿಗೆ ಅವರು ವಡೋದರಾದಲ್ಲಿ ದುಬಾರಿ ಬೆಲೆಯ ವಿಲ್ಲಾ ಹೊಂದಿದ್ದಾರೆ. ವಡೋದರಾ ವಿಲ್ಲಾದ ಮೌಲ್ಯ 3.1 ಕೋಟಿ ರೂಪಾಯಿ ಎನ್ನಲಾಗಿದೆ. ಟ

ಟೀಂ ಇಂಡಿಯಾದ ಆಲ್‌ರೌಂಡರ್‌ ಐಪಿಎಲ್‌-2024ರವರೆಗೆ ಬರೋಬ್ಬರಿ 74.3 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ.

Advertisment

ಇದನ್ನೂ ಓದಿ: ಅಬ್ಬಬ್ಬಾ.. ಹಾರ್ದಿಕ್​​​ ಪಾಂಡ್ಯ ಮಾಜಿ ಹೆಂಡತಿ ನತಾಶಾ ಬಳಿ ಇರೋ ಆಸ್ತಿ ಎಷ್ಟು ಸಾವಿರ ಕೋಟಿ ಗೊತ್ತಾ? 

ಇದಿಷ್ಟೇ ಅಲ್ಲದೇ ಹಾರ್ದಿಕ್ ಅವರು ಗಲ್ಫ್ ಆಯಿಲ್, ಸ್ಟಾರ್ ಸ್ಪೋರ್ಟ್ಸ್, ಜಿಲೆಟ್, ಬೋಟ್, ಡ್ರೀಮ್ 11, ಅಮೆಜಾನ್ ಮತ್ತು ಒಪ್ಪೋ ಕಂಪನಿಗಳ ಜಾಹೀರಾತಿಗಳಲ್ಲಿ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಇದಕ್ಕಾಗಿ ಒಂದೊಂದು ಬ್ರಾಂಡ್‌ಗೂ 1 ಕೋಟಿ ರೂಪಾಯಿ ತೆಗೆದುಕೊಂಡಿದ್ದಾರೆ.

Advertisment


">July 18, 2024

ಅಮ್ಮನ ಹೆಸರಿಗೆ ಆಸ್ತಿ ಮಾಡಿದ್ದೇಕೆ?
ಸ್ಟಾರ್ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಡಿವೋರ್ಸ್ ಸುದ್ದಿ ವೈರಲ್ ಆಗೋದಕ್ಕೂ ಮುಂಚೆಯೇ ಒಂದು ಸತ್ಯ ಬಯಲಾಗಿತ್ತು. ಹಾರ್ದಿಕ್ ಪಾಂಡ್ಯ ಅವರು ಡಿವೋರ್ಸ್ ಕೊಟ್ರೆ ಶೇಕಡಾ 60ರಷ್ಟು ನತಾಶಾಗೆ ಜೀವನಾಂಶ ಕೊಡಬೇಕಾಗುತ್ತದೆ ಅನ್ನೋ ಚರ್ಚೆಯಾಗಿತ್ತು. ಆಗ ಹಾರ್ದಿಕ್ ಪಾಂಡ್ಯ ಅವರು ನನ್ನ ಆಸ್ತಿಯೆಲ್ಲಾ ನನ್ನ ಅಮ್ಮನ ಹೆಸರಲ್ಲೇ ಇದೆ ಎಂದು ಹೇಳಿದ್ದರು. ಹಾರ್ದಿಕ್ ಪಾಂಡ್ಯ ಅವರು ಆಸ್ತಿಯ ಬಗ್ಗೆ ಬಾಯ್ಬಿಟ್ಟಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು. ಇದೀಗ ಡಿವೋರ್ಸ್ ಬಳಿಕ ಹಾರ್ದಿಕ್ ಪಾಂಡ್ಯ ಆಸ್ತಿ ಬಗ್ಗೆ ಮತ್ತೆ ಚರ್ಚೆ ಜೋರಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment