/newsfirstlive-kannada/media/post_attachments/wp-content/uploads/2025/04/Hardik_Pandya_Jasmin_Walia.jpg)
ಹಾರ್ದಿಕ್ ಪಾಂಡ್ಯ -ಜಾಸ್ಮಿನ್ ವಾಲಿಯಾ ಇವರಿಬ್ಬರ ನಡುವೆ ಕುಚ್-ಕುಚ್ ನಡೀತಾ ಇದೆ ಅನ್ನೋ ಸುದ್ದಿ ಕ್ರಿಕೆಟ್ ವಲಯದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಗ್ರೀಸ್ ಪ್ರವಾಸದೊಂದಿಗೆ ಶುರುವಾದ ಈ ಲವ್ ಗಾಸಿಪ್ ಇದೀಗ ಐಪಿಎಲ್ ಅಂಗಳದವರೆಗೆ ಬಂದು ನಿಂತಿದೆ. ಇಷ್ಟೇ ಅಲ್ಲ, ಇಷ್ಟು ದಿನ ಗಾಸಿಪ್ ಆಗಿದ್ದ ಸುದ್ದಿಗೆ ಇದೀಗ ಬಹುತೇಕ ಅಧಿಕೃತ ಮುದ್ರೆ ಬಿದ್ದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18ನಲ್ಲಿ ಬ್ಯಾಟ್-ಬಾಲ್ ವಾರ್ ಜೋರಾಗಿ ನಡೀತಿದೆ. ಬೌಂಡರಿ, ಸಿಕ್ಸರ್ಗಳ ಭರಾಟೆಯಲ್ಲಿ ಅಭಿಮಾನಿಗಳು ಮಿಂದೆಳ್ತಿದ್ದಾರೆ. ಕಲರ್ಫುಲ್ ಕ್ರಿಕೆಟ್ ಲೀಗ್ ಫೀವರ್ ಕ್ರಿಕೆಟ್ ಲೋಕವನ್ನ ಆವರಿಸಿದೆ. ಎಲ್ಲೆಡೆ ಇದೇ ಐಪಿಎಲ್ ದರ್ಬಾರ್ ನಡೀತಿದೆ. ಈ ಅಬ್ಬರದ ನಡುವೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಪ್ರೇಮ್ ಕಹಾನಿ ಮತ್ತೆ ಸೌಂಡ್ ಮಾಡ್ತಿದೆ. ಇಷ್ಟು ದಿನ ಗಾಸಿಪ್ ರೂಪದಲ್ಲಿದ್ದ ಸುದ್ದಿಗೆ ಇದೀಗ ಬಹುತೇಕ ಅಧಿಕೃತ ಮುದ್ರೆ ಬಿದ್ದಿದೆ.
ಗ್ರೀಸ್ ಆಯ್ತು, ದುಬೈ ಆಯ್ತು, ಈಗ ಮುಂಬೈನಲ್ಲಿ ಬ್ರಿಟಿಷ್ ಬ್ಯೂಟಿ.!
ಹಾರ್ದಿಕ್ ಪಾಂಡ್ಯ-ಜಾಸ್ಮಿನ್ ವಾಲಿಯಾ ಇವರಿಬ್ಬರ ನಡುವೇ ಸಮ್ಥಿಂಗ್, ಸಮ್ಥಿಂಗ್ ನಡೀತಿದೆ ಅನ್ನೋ ಸುದ್ದಿ ಕಳೆದ ಕೆಲ ತಿಂಗಳಿನಿಂದ ಕ್ರಿಕೆಟ್ ಲೋಕದಲ್ಲಿ ಆಗಾಗ ಸುದ್ದಿಯಾಗ್ತಿರೋ ವಿಚಾರ. ಇಡೀ ಐಪಿಎಲ್ ಟೂರ್ನಿಯಲ್ಲೂ ಇವರಿಬ್ಬರು ಲವ್ ಕಹಾನಿಯ ಗುಸುಗುಸು ಸೌಂಡ್ ಮಾಡ್ತಿದೆ. ಬ್ರಿಟಿಷ್ ಬ್ಯೂಟಿ ಜಾಸ್ಮಿನ್ ವಾಲಿಯಾ ಐಪಿಎಲ್ ಅಖಾಡದಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಮುಂಬೈ ಇಂಡಿಯನ್ಸ್ ಹೋಮ್ಗ್ರೌಂಡ್ ವಾಂಖೆಡೆ ಸ್ಟೇಡಿಯಂನ ಸ್ಟ್ಯಾಂಡ್ನಲ್ಲಿ ಜಾಸ್ಮಿನ್ ಕಾಣಿಸಿಕೊಂಡಿದ್ದಾರೆ.
ಹಾರ್ದಿಕ್ - ಜಾಸ್ಮಿನ್, ಡೇಟಿಂಗ್ ಗುಟ್ಟು ಮುಂಬೈನಲ್ಲಿ ರಟ್ಟು..!
ಈ ಸೀಸನ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಮೊದಲ ಹೋಮ್ ಗೇಮ್ ಆಡ್ತು. ಈ ಪಂದ್ಯದ ವೇಳೆ ಸ್ಟ್ಯಾಂಡ್ನಲ್ಲಿ ಜಾಸ್ಮಿನ್ ವಾಲಿಯಾ ಕಾಣಿಸಿಕೊಂಡರು. ಜಾಸ್ಮಿನ್ ವಾಲಿಯಾ ಸ್ಟ್ಯಾಂಡ್ನಲ್ಲಿದ್ದು ತಂಡಕ್ಕೆ ಚಿಯರ್ ಮಾಡಿ ಹೋಗಿದ್ರೆ ಮತ್ತೊಮ್ಮೆ ಗಾಸಿಪ್ ಸುದ್ದಿಯಾಗ್ತಿತ್ತು ಅಷ್ಟೇ, ಆದ್ರೆ, ಪಂದ್ಯ ಮುಗಿಸಿ ಹೋಗುವಾಗ ಜಾಸ್ಮಿನ್ ವಾಲಿಯಾ ಮುಂಬೈ ಇಂಡಿಯನ್ಸ್ ಟೀಮ್ ಬಸ್ನಲ್ಲಿ ಪ್ರಯಾಣಿಸಿದರು. ಈ ಪ್ರಯಾಣ ಇವರಿಬ್ಬರ ಡೇಟಿಂಗ್ ಗಾಸಿಪ್ಗೆ ಅಧಿಕೃತ ಮುದ್ರೆ ಒತ್ತಿದೆ.
ಇಂಡೋ-ಪಾಕ್ ಪಂದ್ಯದಲ್ಲೂ ಕಾಣಿಸಿಕೊಂಡಿದ್ದ ಜಾಸ್ಮಿನ್.!
ಕಳೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಜಾಸ್ಮಿನ್ ವಾಲಿಯಾ ಕಾಣಿಸಿಕೊಂಡಿದ್ರು. ಇಂಡೋ-ಪಾಕ್ ಪಂದ್ಯದ ವೇಳೆ ಗ್ಯಾಲರಿಯಲ್ಲಿ ಅಕ್ಷರ್ ಪಟೇಲ್ ಮಡದಿ ಜೊತೆ ಕುಳಿತಿದ್ದ ಜಾಸ್ಮಿನ್ ವಾಲಿಯಾ ಟೀಮ್ ಇಂಡಿಯಾಗೆ ಚೀಯರ್ ಮಾಡ್ತಿದ್ರು. ಹಾರ್ದಿಕ್ಗೆ ವಿಕೆಟ್ ಬಿದ್ದಾಗೆಲ್ಲ ಸಂಭ್ರಮದಲ್ಲಿ ತೇಲಾಡುತ್ತಿದ್ದರು. ಪ್ಲೈಯಿಂಗ್ ಕಿಸ್ ನೀಡಿಯೂ ಸಂಭ್ರಮಿಸಿದ್ರು.
ಇಂಡೋ-ಪಾಕ್ ಮ್ಯಾಚ್ ಬಳಿಕ ಬೀಚ್ನಲ್ಲಿ ಸುತ್ತಾಟ..!
ಇಷ್ಟೇ ಅಲ್ಲ.. ಇಂಡೋ-ಪಾಕ್ ಪಂದ್ಯ ಅಂತ್ಯವಾದ ಬಳಿಕ ಇನ್ಸ್ಟಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ರು. ಬೀಚ್ನಲ್ಲಿ ಎಂಜಾಯ್ ಮಾಡ್ತಿರೋ ಫೋಟೋಗಳನ್ನ ಪ್ರತ್ಯೇಕವಾಗಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ಶೇರ್ ಮಾಡಿದ್ದ ಫೋಟೋಗಳಲ್ಲಿ ಎಲ್ಲೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಆದ್ರೆ, ಫೋಟೋ ಬ್ಯಾಕ್ಗ್ರೌಂಡ್ ಮಾತ್ರ ಒಂದೇ ಆಗಿತ್ತು.
ಗ್ರೀಸ್ ಪ್ರವಾಸದ ಫೋಸ್ಟ್ಗಳು ಹೇಳಿತ್ತು ಡೇಟಿಂಗ್ ಕಥೆ
ಕಳೆದ ವರ್ಷ ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಹಾರ್ದಿಕ್ ಪಾಂಡ್ಯ, ಗ್ರೀಸ್ ಟ್ರಿಪ್ಗೆ ತೆರಳಿದ್ರು. ಆಗ ಜಾಸ್ಮಿನ್ ವಾಲಿಯಾ ಕೂಡ ಗ್ರೀಸ್ನಲ್ಲೇ ಇದ್ರು. ಜಾಸ್ಮಿನ್ ಹಾಗೂ ಹಾರ್ದಿಕ್ ಶೇರ್ ಮಾಡಿದ್ದ ಟ್ರಿಪ್ನ ಫೋಟೋಗಳು, ವಿಡಿಯೋಗಳು ಡೇಟಿಂಗ್ ಕಥೆ ಹೇಳ್ತಿದ್ವು. ಯಾಕಂದ್ರೆ, ಆಗಲೂ ಇಬ್ಬರೂ ಹಂಚಿಕೊಂಡಿದ್ದ ಫೋಟೋಗಳು, ವಿಡಿಯೋಗಳ background ಒಂದೇ ಆಗಿತ್ತು.
ಇದನ್ನೂ ಓದಿ:ಅಮೆರಿಕಾದಿಂದ ಶುರುವಾಗಿರುವ ಸುಂಕದ ಸಮರ.. ಐಫೋನ್ಗಳು ಮತ್ತಷ್ಟು ದುಬಾರಿ ಆಗುವುದು ಪಕ್ಕಾ!
ಯಾರು ಈ ಬ್ರಿಟಿಷ್ ಬ್ಯೂಟಿ ಜಾಸ್ಮಿನ್ ವಾಲಿಯಾ.?
29 ವರ್ಷದ ಈ ಜಾಸ್ಮಿನ್ ವಾಲಿಯಾ.. ಭಾರತೀಯ ಮೂಲದ ಬ್ರಿಟಿಷ್ ಸಿಂಗರ್. ತನ್ನ ಮಾದಕ ಧ್ವನಿಯಿಂದಲೇ ಸಂಗೀತ ಪ್ರೀಯರನ್ನ ಮೋಡಿ ಮಾಡಿರೋ ಈಕೆ, ಇಂಗ್ಲೆಂಡ್ನ ಎಸೆಕ್ಸ್ ಮೂಲದವರು. 2010ರಲ್ಲಿ ಬ್ರಿಟಿಷ್ ರಿಯಾಲಿಟಿ ಟಿವಿ ಸರಣಿ ದಿ ಓನ್ಲಿ ವೇ ಈಸ್ ಎಸೆಕ್ಸ್ನಲ್ಲಿ ಕಾಣಿಸಿಕೊಂಡಿದ್ದ ಈ ಮಾದಕ ಬೆಡಗಿ, ಆ ಬಳಿಕ ಸಿಂಗರ್ ಆಗಿ ಪ್ರಖ್ಯಾತಿ ಪಡೆದಿದ್ದಾರೆ.
ಮ್ಯೂಸಿಕ್ ಅಲ್ಬಮ್, ಕವರ್ ಸಾಂಗ್ಸ್ಗಳ ಮೂಲಕ ರಂಜಿಸುವ ಜಾಸ್ಮಿನ್, ಬಾಲಿವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡಿದ ಬೂಮ್ ಡಿಗ್ಗಿ ಹಾಡಿಗೂ ಧ್ವನಿಯಾಗಿದ್ದರು. ಕಳೆದೊಂದು ವರ್ಷದಿಂದ ಕದ್ದು ಮುಚ್ಚಿ ಡೇಟಿಂಗ್, ಮೀಟಿಂಗ್ ಅಂತೆಲ್ಲಾ ಇವರಿಬ್ಬರು ಯಾರಿಗೂ ಗೊತ್ತಿಲ್ಲ ಎಂಬಂತೆ ಓಡಾಡ್ತಿದ್ದಾರೆ. ಆದ್ರೆ, ಇವರಿಬ್ಬರ ಗಪ್ಚುಪ್ ಪ್ರೇಮ ಜಗತ್ತಿಗೆ ಗೊತ್ತಿರೋ ಓಪನ್ ಸೀಕ್ರೆಟ್ ಆಗಿದೆ. ಅದ್ರಲ್ಲೂ, ಜಾಸ್ಮಿನ್ ಮುಂಬೈ ಟೀಮ್ ಬಸ್ ಹತ್ತಿದ ಬಳಿಕ ಗಾಸಿಪ್ ರೂಪದಲ್ಲಿದ್ದ ಈ ಸುದ್ದಿಗೆ ಅಧಿಕೃತ ಮುದ್ರೆಯೂ ಬಿದ್ದಂತಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ