ಮುಂಬೈ ಇಂಡಿಯನ್ಸ್​​ ಇಶಾನ್ ಕಿಶನ್ ಕೈ ಬಿಡಲು ಕಾರಣವೇನು? ಹೊರಬಿತ್ತು ಸ್ಫೋಟಕ ಸತ್ಯ!

author-image
Ganesh Nachikethu
Updated On
ಇಂದು IPL ಮೆಗಾ ಹರಾಜು; ಮುಂಬೈನ ಈ ಆಟಗಾರರೇ ಆರ್​​ಸಿಬಿ ಟಾರ್ಗೆಟ್​​
Advertisment
  • 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ
  • ಮುಂಬೈ ಇಶಾನ್​ ಕಿಶನ್​ ಕೈ ಬಿಡಲು ಕಾರಣವೇನು?
  • ಸ್ಫೋಟಕ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ

ಇತ್ತೀಚೆಗೆ ಸೌದಿಯಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೆಗಾ ಹರಾಜಿನಲ್ಲಿ ಸ್ಟಾರ್​ ವಿಕೆಟ್​ ಕೀಪರ್​​ ಬ್ಯಾಟರ್​​ ಇಶಾನ್​ ಕಿಶನ್​​ ಸನ್​ರೈಸರ್ಸ್​ ಹೈದರಾಬಾದ್​​ ತಂಡದ ಪಾಲಾದ್ರು. ಕಳೆದ ಹಲವು ಸೀಸನ್​​ಗಳಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದ ಇಶಾನ್​ ಕಿಶನ್ ಅವರಿಗೆ ಬರೋಬ್ಬರಿ 11.25 ಕೋಟಿ ನೀಡಿ ಸನ್​ರೈಸರ್ಸ್​​ ಹೈದರಾಬಾದ್​ ಖರೀದಿ ಮಾಡಿದೆ. ಮುಂಬೈ ತಂಡದಿಂದ ಇಶಾನ್​​ ಕಿಶನ್​ ಅವರನ್ನು ಕೈ ಬಿಡಲು ಕಾರಣವೇನು? ಎಂದು ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಬಿಚ್ಚಿಟ್ಟಿದ್ದಾರೆ.

ಇಶಾನ್‌ ಕಿಶನ್‌ ಕೈ ಬಿಟ್ಟ ಬಗ್ಗೆ ಏನಂದ್ರು ಹಾರ್ದಿಕ್​?

ಮುಂಬೈ ತಂಡದ ಡೈನಾಮಿಕ್​​ ಪ್ಲೇಯರ್​​ ಇಶಾನ್​ ಕಿಶನ್​​. ತಂಡದ ಪರ ನಿಂತು ಆಡಿದ ಆಟಗಾರ. ಇಶಾನ್‌ ಅವರನ್ನು ಮತ್ತೆ ತಂಡಕ್ಕೆ ಕರೆತರುವುದು ಕಷ್ಟ ಎಂದು ನಮಗೂ ತಿಳಿದಿತ್ತು. ಅವರ ಯಾವ ರೀತಿ ಕೌಶಲ್ಯಗಳು ಹೊಂದಿದ್ದಾರೆ ಎಂದು ನಿಮಗೂ ಗೊತ್ತು. ಅವರು ತಂಡದಲ್ಲಿದ್ದಾಗ ವಾತಾವರಣ ಉತ್ತಮವಾಗಿತ್ತು. ಅವರು ಭಾರೀ ಮೊತ್ತಕ್ಕೆ ಬಿಡ್​ ಆಗಲಿದ್ದಾರೆ ಎಂಬುದು ಗೊತ್ತಿತ್ತು ಎಂದರು ಹಾರ್ದಿಕ್​​.

ಮೆಗಾ ಆಕ್ಷನ್​ಗೆ ಮುನ್ನವೇ ಮುಂಬೈ ಇಂಡಿಯನ್ಸ್​ ತಂಡ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಅವರನ್ನು ಇಂಡಿಯನ್ಸ್‌ ಉಳಿಸಿಕೊಂಡಿತ್ತು. ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ 3.20 ಕೋಟಿವರೆಗೆ ಮಾತ್ರ ಬಿಡ್ ಮಾಡಿ ಹಿಂದೆ ಸರಿಯಿತು.

ಭಾರೀ ಮೊತ್ತಕ್ಕೆ ಸೇಲಾದ ಇಶಾನ್​​

ಈ ಸಲ ಮೆಗಾ ಹರಾಜಿನಲ್ಲಿ ಅನೇಕ ತಂಡಗಳು ದಾಖಲೆ ಮೊತ್ತಕ್ಕೆ ಆಟಗಾರರನ್ನು ಖರೀದಿ ಮಾಡಿವೆ. ಎಡಗೈ ಬ್ಯಾಟರ್‌ ಇಶಾನ್‌ ಕಿಶನ್‌ ಅವರನ್ನು ಸನ್​ರೈಸರ್ಸ್​ ಹೈದರಾಬಾದ್ ತಂಡ ಭಾರೀ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.

ಇಶಾನ್​ ಕಿಶನ್​​ ಐಪಿಎಲ್​ ಸಾಧನೆ

ಇಶಾನ್‌ ಕಿಶನ್‌ ಐಪಿಎಲ್‌ನಲ್ಲಿ 105 ಪಂದ್ಯಗಳನ್ನು ಆಡಿದ್ದು, 135.87ರ ಸ್ಟ್ರೈಕ್‌ ರೇಟ್‌ನಲ್ಲಿ 2644 ರನ್‌ ಸಿಡಿಸಿದ್ದಾರೆ. ಇದರಲ್ಲಿ 16 ಅರ್ಧಶತಕಗಳು ಸೇರಿವೆ. ಇವರು ಮುಂಬೈ ಇಂಡಿಯನ್ಸ್‌ ಪರ ಹಲವು ಕ್ಲಾಸಿಕ್‌ ಇನಿಂಗ್ಸ್‌ ಆಡಿದ್ದಾರೆ.

ಇದನ್ನೂ ಓದಿ:ಸ್ಟಾರ್​ ಆಟಗಾರನಿಗೆ ಬಿಗ್​ ಶಾಕ್​​; ಟೀಮ್​ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್​​​ಗೆ KKR ಕ್ಯಾಪ್ಟನ್ಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment