Advertisment

ವಿವಾದದ ಹೊಗೆ ಹೊತ್ತಿಸಿದ ಬಿಳ್ಕೋಡುಗೆ ಸಮಾರಂಭದ ಸಂಭ್ರಮ.. 70 ವಿದ್ಯಾರ್ಥಿಗಳ ಮೇಲೆ ಎಫ್​ಐಆರ್! ಆಗಿದ್ದೇನು?

author-image
Gopal Kulkarni
Updated On
ವಿವಾದದ ಹೊಗೆ ಹೊತ್ತಿಸಿದ ಬಿಳ್ಕೋಡುಗೆ ಸಮಾರಂಭದ ಸಂಭ್ರಮ.. 70 ವಿದ್ಯಾರ್ಥಿಗಳ ಮೇಲೆ ಎಫ್​ಐಆರ್! ಆಗಿದ್ದೇನು?
Advertisment
  • ನೂರೆಂಟು ಸಂಕಟ ತಂದಿಟ್ಟ ವಿದ್ಯಾರ್ಥಿಗಳ ಸಂಭ್ರಮಚರಣೆ
  • ಬಿಳ್ಕೋಡುಗೆ ಸಮಾರಂಭದಂದು ಏನೆಲ್ಲಾ ಹುಚ್ಚಾಟ ಮೆರೆದರು?
  • 70 ವಿದ್ಯಾರ್ಥಿಗಳ ಮೇಲೆ ಎಫ್​ಐಆರ್ ಹಾಕಿದ್ದೇಕೆ ಪೊಲೀಸರು?

ಕಾಲೇಜು ಬದುಕು ಒಂದು ಎಲ್ಲರ ಬದುಕಲ್ಲಿಯೂ ಒಂದು ಸುವರ್ಣಯುಗ ಬಂದು ಹೋದಂತೆ ಹೋಗುತ್ತದೆ. ಸ್ಟೂಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ಎಂಬ ಮಾತೇ ಇದೆ. ಹೀಗಾಗಿ ಕಾಲೇಜಿನಲ್ಲಿ ನಡೆಯುವ ಹುಡುಗಾಟಗಳು. ಚೆಲ್ಲಾಟಗಳು, ಹುಚ್ಚಾಟಗಳು ಎಲ್ಲವೂ ಕೂಡ ನೆನಪಿನ ಗುಚ್ಛದಲ್ಲಿ ಸದಾ ಉಳಿಯುತ್ತವೆ. ಅದರಲ್ಲೂ ಕಾಲೇಜಿನ ಫೇರ್​ವೆಲ್ ಅಂದ್ರೆ ಒಂದು ಭಾವುಕ ಸಿಹಿ ನೋವಿನ ಕ್ಷಣ. ಬದುಕಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದೇವೆ ಎಂಬ ಖುಷಿ ಹಾಗೂ ಆಡಿ, ಕೀಟಲೆ ಮಾಡಿ, ಓಡಾಡಿದ ಕಾಲೇಜಿನ ಅಂಗಳ ಹಾಗೂ ಗೆಳೆಯರ ಸಾಂಗತ್ಯ ತೊರೆದು ಹೋಗುತ್ತಿದ್ದೇವೆ ಎಂಬ ನೋವು ಎರಡು ಏಕಕಾಲಕ್ಕೆ ಉಂಟಾಗುತ್ತವೆ. ಇಂತಹ ಸಂದರ್ಭದಲ್ಲಿ ಹಲವು ರೀತಿಯ ಸೆಲೆಬ್ರೇಷನ್​ಗಳು ಕೂಡ ನಡೆಯುತ್ತವೆ. ಸಂಭ್ರಮಗಳು ಒಂದು ಹಂತದಲ್ಲಿ ಇದ್ರೆ ಸಂಭ್ರಮ, ಇಲ್ಲವಾದಲ್ಲಿ ಅದು ಸಂಕಟ. ಸಂಭ್ರಮಿಸಲು ಹೋದ ವಿದ್ಯಾರ್ಥಿಗಳು ಸಂಕಟವನ್ನು ತಂದುಕೊಂಡ ಘಟನೆ ಉತ್ತರಾಖಂಡ್​ನ ಹರಿದ್ವಾರದಲ್ಲಿ ನಡೆದಿದೆ.

Advertisment

ಇದನ್ನೂ ಓದಿ:ಬೆಳಗ್ಗೆ ಬೇಟೆ, ಮಧ್ಯಾಹ್ನ ಪ್ರತೀಕಾರ.. ನಕ್ಸಲರಿಂದ ಸೇನಾ ವಾಹನ ಛಿದ್ರ, ಛಿದ್ರ; 9 ಯೋಧರು ಹುತಾತ್ಮ!


">January 5, 2025


ಹರಿದ್ವಾರದ ಪ್ರತಿಷ್ಠಿತ ಕಾಲೇಜುವೊಂದರಲ್ಲಿ ಇಂದು ಬಿಳ್ಕೋಡುಗೆ ಸಮಾರಂಭ ನಡೆದಿತ್ತು. ಈ ಸಮಾರಂಭ ಮುಗಿದ ತಕ್ಷಣ ಒಂದಿಷ್ಟು ವಿದ್ಯಾರ್ಥಿಗಳು ಹುಚ್ಚಾಟ ಮೆರೆದಿದ್ದಾರೆ. ಅವರ ಸಂಭ್ರಮಾಚರಣೆ ಎಲ್ಲಾ ಗಡಿರೇಖೆಗಳನ್ನು ದಾಟಿ ಹೋಗಿದೆ. ಅದರಲ್ಲೂ ಕಾನೂನಿನ ಸೀಮೆಯನ್ನು ದಾಟುವ ಮಟ್ಟಕ್ಕೆ ಸಂಭ್ರಮಿಸಿದ್ದಾರೆ. ತಮ್ಮ ಐಷಾರಾಮಿ ಕಾರ್​ಗಳನ್ನು ತೆಗೆದುಕೊಂಡು ರಸ್ತೆಯಲ್ಲಿ ಮನಬಂದಂತೆ ಓಡಾಡಿಸಿ ಡ್ರಿಫ್ಟ್ ಗಳೆಲ್ಲಾ ಮಾಡಿ ಹುಚ್ಚಾಟ ಮೆರೆದಿದ್ದಾರೆ. ಇನ್ನು ಒಂದು ಹಂತ ಮುಂದಕ್ಕೆ ಹೋಗಿರುವ ವಿದ್ಯಾರ್ಥಿಗಳು ಮನೆಯಿಂದ ತಂದ ಗನ್​ನಿಂದ ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ವಿದ್ಯಾರ್ಥಿಗಳ ಈ ಎಲ್ಲಾ ಮಂಗನಾಟಗಳ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೊಲೀಸರು ಹೀಗೆ ಹುಚ್ಚಾಟ ಮೆರೆದ ವಿಡಿಯೋ ಪೊಲೀಸ್​ ಕ್ರಮಕ್ಕೆ ಮೂಲವಾಗಿದ್ದು ಪೊಲೀಸರು ವಿದ್ಯಾರ್ಥಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

Advertisment

ಇದನ್ನೂ ಓದಿ:ಪ್ರಧಾನಿ ಮೋದಿ ವ್ಯಂಗಿಸುವ ಆ ಶೀಶ್​ ಮಹಲ್ ಯಾವುದು ಗೊತ್ತಾ? ಆ ರಾಣಿ ನಕ್ಷತ್ರ ನೋಡಲೆಂದೇ ಸಿದ್ಧಗೊಂಡಿತ್ತು ಕೋಟೆ!

ಈಗಾಗಲೇ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು. ಘಟನೆಯಲ್ಲಿ ಒಟ್ಟು 70 ವಿದ್ಯಾರ್ಥಿಗಳು ಇದ್ದಿದ್ದು ಕಂಡು ಬಂದಿದೆ. 70 ವಿದ್ಯಾರ್ಥಿಗಳ ಮೇಲೆಯೂ ಎಫ್​ಐಆರ್ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ ಕಾಯ್ದೆ ಅಡಿಯಲ್ಲಿ ಹರಿದ್ವಾರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment