newsfirstkannada.com

ಹರಿಹರ ನಗರ ಸಭೆಯಲ್ಲಿ ಭಾರೀ ಅಕ್ರಮ ಆರೋಪ; ಕಾಮಗಾರಿ ಮಾಡದೇ ಹಣ ಲಪಟಾಯಿಸಿರುವ ಅಧಿಕಾರಿಗಳು

Share :

Published February 1, 2024 at 9:08am

  50ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಕುಡಿಯುವ ನೀರಿನಕಾಮಗಾರಿ

  ಅಧಿಕಾರಿಗಳು, ಇಂಜಿನಿಯರ್​ ಹಣ ಲಪಟಾಯಿಸಿರೋ ಆರೋಪ

  ಲೋಕಾಯುಕ್ತ ಅಧಿಕಾರಿಗಳಿಂದಲೂ ಸತತ ಎರಡು ದಿನ ಪರಿಶೀಲನೆ

ದಾವಣಗೆರೆ: ಇಲ್ಲಿನ ಹರಿಹರ ನಗರ ಸಭೆಯಲ್ಲಿ ಭಾರೀ ಅಕ್ರಮ ನಡೆದಿದ್ದು ಅಧಿಕಾರಿಗಳು ಕಾಮಗಾರಿ ಮಾಡದೇ ಹಣ ಲಪಟಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹರಿಹರ ನಗರಸಭೆಯಿಂದ 50ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ 2019 ರಲ್ಲಿ ಕುಡಿಯುವ ನೀರಿನ 19 ಕಾಮಗಾರಿ ಕೈಗೊಳ್ಳಲಾಗಿತ್ತು. ಅದರಲ್ಲಿ ನೀರಿನ ಟ್ಯಾಂಕರ್, ಪೈಪ್ ಲೈನ್, ವ್ಯವಸ್ಥೆ ಚರಂಡಿ ವ್ಯವಸ್ಥೆಗೆ ಅಂತ ಹಣ ವ್ಯಯಿಸಲಾಗಿತ್ತು. ಆದರೆ ಕಾಮಗಾರಿ ಮಾಡದೇ, ಅಧಿಕಾರಿಗಳು, ಇಂಜಿನಿಯರ್​ಗಳು ಹಣ ಲಪಟಾಯಿಸಿರೋ ಆರೋಪ ಕೇಳಿಬಂದಿದೆ.

2019 ರಲ್ಲಿ ಆಯುಕ್ತೆ ಆಗಿದ್ದ ಲಕ್ಷ್ಮಿ, ಇತರೆ ಇಂಜಿನಿಯರ್​ಗಳು ಸೇರಿ ಅಕ್ರಮ ಎಸಗಿದ್ದಾರೆ ಎನ್ನಲಾಗ್ತಿದೆ. ಮಾಡಿದ ಕಾಮಗಾರಿಯೂ ಕೂಡ ಕಳಪೆ ಗತಿಯಲ್ಲಿ ಮಾಡಿದ್ದಾರಂತೆ. ಈ ಬಗ್ಗೆ ಗುತ್ತೆದಾರ ಮಜರ್ ಲೋಕಾಯುಕ್ತ ಅಧಿಕಾರಿಗಳಿಗೂ ದೂರು ನೀಡಿದ್ದು, ಲೋಕಾಯುಕ್ತ ಅಧಿಕಾರಿ ಯೋಗಿಶ್​ರಿಂದ ಕೂಡ ಸ್ಥಳಕ್ಕೆ ಭೇಟಿ ಸತತ ಎರಡು ದಿನ ಪರಿಶೀಲನೆ ನಡೆಸಿದ್ದಾರೆ.

ಅಕ್ರಮ ಮಾಡಿರೋ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು. ಲೂಟಿ ಮಾಡಿರೋ ಹಣ ವಾಪಸ್ ಪಡಿಬೇಕು ಅಂತ ದೂರುದಾರ ಮಜರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹರಿಹರ ನಗರ ಸಭೆಯಲ್ಲಿ ಭಾರೀ ಅಕ್ರಮ ಆರೋಪ; ಕಾಮಗಾರಿ ಮಾಡದೇ ಹಣ ಲಪಟಾಯಿಸಿರುವ ಅಧಿಕಾರಿಗಳು

https://newsfirstlive.com/wp-content/uploads/2024/02/Davanagere.jpg

Load More