/newsfirstlive-kannada/media/post_attachments/wp-content/uploads/2025/07/MND-HARISEVE-13.jpg)
ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಆಬಲವಾಡಿ ತೋಪಿನಲ್ಲಿ ‘ತಿಮ್ಮಪ್ಪನ ಹರಿಸೇವೆ’ ಆರಂಭವಾಗಿದೆ. ತಾವರೆ ಎಲೆಯಲ್ಲಿ ಸಾವಿರಾರು ಭಕ್ತರು ಊಟ ಮಾಡಿ ಪಾವನರಾಗುತ್ತಿದ್ದಾರೆ.
ಏನಿದರ ವಿಶೇಷತೆ..?
ಪುರಾಣ ಪ್ರಸಿದ್ಧ ತೋಪಿನ ತಿಮ್ಮಪ್ಪನ ಹರಿಸೇವೆ ಇದು. ಶ್ರೀನಿವಾಸನ ದರ್ಶನಕ್ಕೆ ಬಂದ ಎಲ್ಲಾ ಭಕ್ತರಿಗೂ ತಾವರೆ ಎಲೆಯಲ್ಲಿ ಊಟ ನೀಡಲಾಗುತ್ತದೆ. ಭಕ್ತರಿಗೆ ತಾವರೆ ಎಲೆಯಲ್ಲಿ ಪ್ರಸಾದ ನೀಡುವುದೇ ಹರಿಸೇವೆಯ ವಿಶೇಷ. ಗ್ರಾಮಸ್ಥರು ಕೊಪ್ಪರಿಕೆಗಳಲ್ಲಿ ಪ್ರಸಾದ ತಯಾರಿಸಿ ಟ್ರ್ಯಾಲಿ, ಟ್ಯಾಂಕರ್ ಮೂಲಕ ಭಕ್ತರಿಗೆ ಅನ್ನ, ಸಾಂಬರ್ ಬಡಿಸುತ್ತಿದ್ದಾರೆ. ವಿಶೇಷ ಅಂದರೆ ಬರೋಬ್ಬರಿ ಕೊಪ್ಪರಿಕೆಗಳಲ್ಲಿ ಬರೋಬ್ಬರಿ 12 ಟನ್ ಅನ್ನ ತಯಾರು ಮಾಡಲಾಗಿದೆ.
ಇದನ್ನೂ ಓದಿ: ಕೇವಲ ಒಂದು ರನ್​ ಅಂತರದಲ್ಲಿ 3 ವಿಕೆಟ್ ಪತನ.. ಮೊದಲ ಇನ್ನಿಂಗ್ಸ್​ ಟೈನಲ್ಲಿ ಅಂತ್ಯ..!
20 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವಿತರಣೆ..
ದೇವಸ್ಥಾನದ ಮುಂಭಾಗ ಒಮ್ಮೆಗೆ 20 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವಿತರಣೆ ನೀಡಲು ವ್ಯವಸ್ಥೆ ಇದೆ. ಸಹಪಂಕ್ತಿ ಭೋಜನ ಮಾಡಿದ ಬಳಿಕ ಎಲೆಯಲ್ಲಿ ಸ್ಪಲ್ಪ ಅನ್ನ ಬಿಡಬೇಕು. ಹಾಗೆ ಬಿಟ್ಟರೆ ಇಷ್ಟಾರ್ಥ ನೆರವೇರುತ್ತದೆ ಅನ್ನೋದು ನಂಬಿಕೆ. ಊಟ ಮಾಡಿದ ಎಲೆಗಳನ್ನ ಯಾರೂ ಎತ್ತುವುದಿಲ್ಲ. ಆ ಎಲೆಗಳು ಮಾಯವಾಗುತ್ತದೆ ಎಂಬ ನಂಬಿಕೆ ಇದೆ.
ಪುರಾಣದ ಕತೆ ಏನು..?
ಇಂದು ಮುಂಜಾನೆಯಿಂದಲೇ ಪೂಜಾ ಕೈಂಕರ್ಯ ಆರಂಭವಾಗಿದೆ. ಮಂಡ್ಯ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಸಹಸ್ರಾರು ಭಕ್ತರು ಆಗಮಿಸಿದ್ದಾರೆ. ಸಾಕ್ಷಾತ್ ವಿಷ್ಣು ಪಾದಸ್ಪರ್ಶ ಮಾಡಿದ ಸ್ಥಳದಲ್ಲಿ ದೇಗುಲ ನಿರ್ಮಾಣವಾಗಿದೆ. ವಿಷ್ಣು ಅಂದು ಲಕ್ಷ್ಮೀ ದೇವಿಯನ್ನ ಹುಡುಕಿಕೊಂಡು ಭೂಮಿಗೆ ಬಂದಿದ್ದ. ಆಗ ಹುಣಸೆ ಮರದ ತೋಪಿನಲ್ಲಿ ತಾವರೆ ಎಲೆಗೆ ಹುಣಸೆ ಹಣ್ಣು ಹಾಕಿಕೊಂಡು ತಿಂದಿದ್ದ. ಬಳಿಕ ಅಲ್ಲಿಂದ ವಿಷ್ಣು ತಿರುಪತಿಗೆ ತೆರಳಿದ್ದ ಎಂಬ ಪುರಾಣದ ಕಥೆಯಿದೆ. ಹೀಗಾಗಿ ನೂರಾರು ವರ್ಷಗಳಿಂದ ಹರಿಸೇವೆ ಮಾಡಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ಇಬ್ಬರು ಪುಟಾಣಿ ಹೆಣ್ಮಕ್ಕಳು, ಒಂದು ಬೆಕ್ಕು! ಗೋಕರ್ಣದ ದಟ್ಟ ಕಾಡಿನ ಪುಟ್ಟೆ ಗುಹೆಯಲ್ಲಿ ರಷ್ಯಾ ಮಹಿಳೆ ವಾಸ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ