BNYS, ನರ್ಸಿಂಗ್​ನಲ್ಲಿ ಫಸ್ಟ್​.. ಅಗ್ರಿಕಲ್ಚರ್​ನಲ್ಲಿ 6ನೇ RANK.. ಈ ಸಾಧನೆ ಬಗ್ಗೆ ಹರೀಶ್ ರಾಜ್ ಹೇಳಿದ್ದೇನು?

author-image
Veena Gangani
Updated On
BNYS, ನರ್ಸಿಂಗ್​ನಲ್ಲಿ ಫಸ್ಟ್​.. ಅಗ್ರಿಕಲ್ಚರ್​ನಲ್ಲಿ 6ನೇ RANK.. ಈ ಸಾಧನೆ ಬಗ್ಗೆ ಹರೀಶ್ ರಾಜ್ ಹೇಳಿದ್ದೇನು?
Advertisment
  • ವೆಟರ್ನರಿಯಲ್ಲಿ ಹರೀಶ್ ರಾಜ್ ಮೊದಲ ರ್ಯಾಂಕ್
  • ಫಸ್ಟ್​ ರ್ಯಾಂಕ್​ ಬಂದ ಹರೀಶ್ ರಾಜ್ ಹೇಳಿದ್ದೇನು?
  • ನಾರಾಯಣ ಇ ಟೆಕ್ನೋ ಸ್ಕೂಲ್ ವಿದ್ಯಾರ್ಥಿ ಖುಷ್

ಬೆಂಗಳೂರು: 2025/26ನೇ ಸಾಲಿನ CET ಫಲಿತಾಂಶದ ವಿವರವನ್ನು ಉನ್ನತ ಶಿಕ್ಷಣ ಸಚಿವ MC ಸುಧಾಕರ್ ಅವರು ಪ್ರಕಟಿಸಿದ್ದಾರೆ. ಈ ಬಾರಿಯ ಸಿಇಟಿಯಲ್ಲಿ 2 ಲಕ್ಷ 62 ಸಾವಿರದ 195 ಮಂದಿ ಇಂಜಿನಿಯರ್ ರ್ಯಾಂಕಿಂಗ್ ಪಡೆದಿದ್ದಾರೆ.

ಇದನ್ನೂ ಓದಿ:ನಟ ಮಡೆನೂರು ಮನುಗೆ ಬಿಗ್ ಶಾಕ್.. ಪೊಲೀಸ್‌ ವಿಚಾರಣೆಯಲ್ಲಿ ಸಂತ್ರಸ್ತೆ ಸಾಕ್ಷ್ಯ ದಾಖಲು; ಹೇಳಿದ್ದೇನು?

publive-image

ಕರ್ನಾಟಕ ಚೈತನ್ಯ ಟೆಕ್ನೋ ಸ್ಕೂಲ್‌ನ ವಿದ್ಯಾರ್ಥಿ ಭವೇಶ್ ಜಯಂತಿ ಇಂಜಿನಿಯರಿಂಗ್‌ನಲ್ಲಿ ಮೊದಲ ಱಂಕ್​ ಪಡೆದಿದ್ದಾರೆ. ಸಾತ್ವಿಕ್ ಬಿ. ಬಿರಾದರ್ 2ನೇ ಱಂಕ್​ ಗಳಿಸಿದ್ದಾರೆ. ಇನ್ನು ವೆಟರ್ನರಿ ಱಂಕ್​ ಲಿಸ್ಟ್ ನಲ್ಲಿ ಹರೀಶ್ ರಾಜ್ ಫಸ್ಟ್​, ಆತ್ರೇಯ ವೆಂಕಟಾಚಲ ಸೆಕೆಂಡ್​ . ಸಫಲ್ ಎಸ್ ಶೆಟ್ಟಿ 3ನೇ ಱಂಕ್​ ಪಡೆದಿದ್ದಾರೆ. ಅಗ್ರಿಕಲ್ಚರ್ ಱಂಕ್​ ಲಿಸ್ಟ್ ನಲ್ಲಿ ಅಕ್ಷಯ್ ಎಂ ಹೆಗ್ಡೆ ಫಸ್ಟ್​. ಸೈಶ್ ಶ್ರವಣ್ ಪಂಡಿತ್ ಸೆಕೆಂಡ್, ಸುಚಿತ್ ಪ್ರಸಾದ್ 3ನೇ ಸ್ಥಾನ ಪಡೆದಿದ್ದಾರೆ.

ಇನ್ನೂ, ನಾರಾಯಣ ಇ ಟೆಕ್ನೋ ಸ್ಕೂಲ್ ಯಲಹಂಕದ ವಿದ್ಯಾರ್ಥಿ ಹರೀಶ್ ರಾಜ್ ಅವರು ಸಖತ್​ ಖುಷಿಯಲ್ಲಿದ್ದಾರೆ. ಏಕೆಂದರೆ ವೆಟರ್ನರಿ, ಅಗ್ರಿಕಲ್ಚರ್, ನರ್ಸಿಂಗ್​ನಲ್ಲಿ ಪ್ರಥಮ ರ್ಯಾಂಕ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಹರೀಶ್ ರಾಜ್ ನ್ಯೂಸ್​ಫಸ್ಟ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಖುಷಿಯಾಗುತ್ತಿದೆ. ನಾನು ಅಂದುಕೊಂಡಂತೆ ನನಗೆ ಚೆನ್ನಾಗಿ ಅಂಕ ಬರುತ್ತೆ ಅಂತ. ನಮ್ಮ ಟೀಚರ್​ಗಳು ಹೇಳಿದ ಹಾಗೆ ಬರೆದಿದ್ದೆ. ಟೀಚರ್​ಗಳು, ನಾರಾಯಣ ಇ ಟೆಕ್ನೋ ಶಾಲೆಯ ಸಿಬ್ಬಂದಿಗೆ ಧನ್ಯವಾದ ಹೇಳುತ್ತೇನೆ. ನಮ್ಮ ಶಿಕ್ಷಕರು ತುಂಬಾ ಚೆನ್ನಾಗಿ ಹೇಳಿಕೊಡ್ತಾ ಇದ್ದರು. ಇದಕ್ಕೆ ಅವರೇ ಕಾರಣ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment