newsfirstkannada.com

ಮೋದಿ ಕಾಲದಲ್ಲಿ CM ಕುರ್ಚಿ ಕಳ್ಕೊಂಡ 7ನೇ ನಾಯಕ ಖಟ್ಟರ್; ಮೂರೇ ದಿನಕ್ಕೆ ಪಟ್ಟ ತ್ಯಜಿಸಿದ್ದ ಯಡಿಯೂರಪ್ಪ..!

Share :

Published March 12, 2024 at 4:24pm

Update March 12, 2024 at 4:50pm

    ಲೋಕಸಭೆ ಚುನಾವಣೆ ಹೊತ್ತಲ್ಲೇ ಹರಿಯಾಣದಲ್ಲಿ ಮೈತ್ರಿ ಸರ್ಕಾರ ಪತನ

    ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಮನೋಹರ್ ಲಾಲ್ ಖಟ್ಟರ್

    ಮೋದಿ ಅವಧಿಯಲ್ಲಿ ಸಿಎಂ ಸ್ಥಾನ ಕಳೆದುಕೊಂಡ ಆ 7 ನಾಯಕರು ಯಾರು?

ಲೋಕಸಭೆ ಚುನಾವಣೆಯಲ್ಲಿ 370ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಗೆಲ್ಲುವ ಕನಸಿನೊಂದಿಗೆ ತಿರುಗಾಡುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಇಂದು ದೊಡ್ಡ ಹೊಡೆತ ಬಿದ್ದಿದೆ. ಹರಿಯಾಣದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಪತನಗೊಂಡಿದೆ. 2019ರಲ್ಲಿ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 41 ಸ್ಥಾನಗಳನ್ನ ಗೆದ್ದು, ಜನನಾಯಕ್ ಜನತಾ ಪಾರ್ಟಿ (JJP) ಜೊತೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿತ್ತು. ಇದೀಗ ಜೆಜೆಪಿ ಜೊತೆ ಮೈತ್ರಿ ಕಡಿದುಕೊಂಡಿರುವ ಬಿಜೆಪಿ ಹೊಸ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಪರಿಣಾಮ ಮನೋಹರ್ ಲಾಲ್ ಖಟ್ಟರ್ ಅವರ ಆಡಳಿತಕ್ಕೆ ತೆರೆ ಬಿದ್ದಿದೆ.

ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಆಡಳಿತದ ಕಾಲದಲ್ಲಿ ಮುಖ್ಯಮಂತ್ರಿ ಗಾದೆ ಕಳೆದುಕೊಂಡವರ ಸಂಖ್ಯೆ 7ಕ್ಕೆ ಏರಿಕೆ ಆಗಿದೆ. ಖಟ್ಟರ್​​ಗಿಂತ ಮೊದಲು 6 ನಾಯಕರು CM ಹುದ್ದೆಯನ್ನು ಕಳೆದುಕೊಂಡಿದ್ದರು.

ತಿರಥ್ ಸಿಂಗ್ ರಾವತ್ (ಎಡದಲ್ಲಿ ಹೂ ಗುಚ್ಚ ಪಡೆಯುತ್ತಿರುವರು)

ತ್ರಿವೇಂದ್ರ ಸಿಂಗ್ ರಾವತ್
ಉತ್ತರಾಖಂಡದ ತ್ರಿವೇಂದ್ರ ಸಿಂಗ್ ರಾವತ್ (Trivendra Singh Rawat) ಕೂಡ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡವರಲ್ಲಿ ಒಬ್ಬರು. ಇವರು ಮಾರ್ಚ್ 18, 2017 ರಂದು ಮುಖ್ಯಮಂತ್ರಿಯಾಗಿದ್ದರು. ಆದರೆ ತ್ರಿವೇಂದ್ರ ಸಿಂಗ್ ರಾವತ್​​ಗೆ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ರಾವತ್ ಅವರು ಮೂರು ವರ್ಷಗಳ ಕಾಲ ಆಡಳಿತ ನಡೆಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ನಂತರ ತಿರಥ್ (Tirath Singh Rawat) ಸಿಂಗ್ ರಾವತ್ ಅವರನ್ನು ಬಿಜೆಪಿ ಮುಖ್ಯಮಂತ್ರಿಯನ್ನಾಗಿ ಮಾಡಿತು.

ತಿರತ್ ಸಿಂಗ್ ರಾವತ್
ಉತ್ತರಾಖಂಡದಲ್ಲಿ ತಿರತ್ ಸಿಂಗ್ ರಾವತ್ ಕೂಡ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಚುನಾವಣೆ ಹತ್ತಿರದಲ್ಲಿದ್ದಾಗಲೇ ಕುರ್ಚಿಯನ್ನು ಬಿಡಬೇಕಾದ ಪರಿಸ್ಥಿತಿ ಬಂತು. ತಿರತ್ ಸಿಂಗ್ ರಾವತ್ ಕೇವಲ 116 ದಿನಗಳ ಕಾಲ ಸಿಎಂ ಆಗಿ ಸೇವೆ ಸಲ್ಲಿಸಿದರು. ಬಳಿಕ ಬಿಜೆಪಿ ಪುಷ್ಕರ್ ಸಿಂಗ್ ಧಾಮಿಗೆ ಪಟ್ಟ ಕಟ್ಟಿ ಅಚ್ಚರಿ ಮೂಡಿಸಿತು.

ಆನಂದಿ ಬೆನ್ ಪಟೇಲ್
2014ರಲ್ಲಿ ಮೋದಿ ಅವರು ದೇಶದ ಪ್ರಧಾನಿಯಾದ ಬೆನ್ನಲ್ಲೇ ಗುಜರಾತ್​​ಗೆ ನೂತನ ಸಾರಥಿ ನೇಮಕವಾಗಿತ್ತು. ಆನಂದಿಬೆನ್ ಪಟೇಲ್ ಮೋದಿ ಅವರ ಉತ್ತರಾಧಿಕಾರಿಯಾಗಿ ಪ್ರತಿಜ್ಞಾವಿಧಿ ಸ್ವಿಕರಿಸಿದರು. ಆದರೆ ಅವರು ಹೆಚ್ಚು ದಿನ ಮುಖ್ಯಮಂತ್ರಿ ಹುದ್ದೆಯಲ್ಲಿ ಇರಲಿಲ್ಲ. 2 ವರ್ಷ ಮತ್ತು 77 ದಿನಗಳ ಕಾಲ ಮುಖ್ಯಮಂತ್ರಿಯಾಗಿ ನಂತರ ಪಟ್ಟವನ್ನು ತ್ಯಜಿಸಿದರು. ಆನಂದಿಬೆನ್ ಪಟೇಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಜಯ್ ರೂಪಾನಿಗೆ ಬೆಂಬಲ ನೀಡಿದರು.

ವಿಜಯ್ ರೂಪಾನಿ
ಮುಂದೆ ಎದುರಾದ ಚುನಾವಣೆಯಲ್ಲಿ ವಿಜಯ್ ರೂಪಾನಿ ನೇತೃತ್ವದ ಗುಜರಾತ್​ ಬಿಜೆಪಿ, ಬಹುಮತ ಪಡೆದುಕೊಂಡಿತು. ಆದರೆ ವಿಜಯ್ ರೂಪಾನಿ ಅವರಿಗೆ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. 13 ಮತ್ತು 14ನೇ ವಿಧಾನಸಭೆಯ ಅವಧಿ ಸೇರಿದಂತೆ ಒಟ್ಟು 5 ವರ್ಷ 37 ದಿನಗಳ ಕಾಲ ಸಿಎಂ ಕುರ್ಚಿಯಲ್ಲಿ ಕಳೆದ ನಂತರ ಬಿಜೆಪಿ ಹೈಕಮಾಂಡ್ ಭೂಪೇಂದ್ರ ಪಟೇಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು.

ಬಿ.ಎಸ್.ಯಡಿಯೂರಪ್ಪ..!
2018ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ನಡೆದ ಘಟನೆಗಳು ಎಲ್ಲರಿಗೂ ಗೊತ್ತೇ ಇದೆ. ಚುನಾವಣೆ ಫಲಿತಾಂಶ ಬೆನ್ನಲ್ಲೇ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾದರು. ಬದಲಾದ ರಾಜಕೀಯ ಸನ್ನಿವೇಶದಿಂದ ಯಡಿಯೂರಪ್ಪ ಅವರು ಕೇವಲ ಮೂರೇ ದಿನಕ್ಕೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕಾಯಿತು. ಬಹುಮತ ಇಲ್ಲದ ಕಾರಣ ಯಡಿಯೂರಪ್ಪ ಖುರ್ಚಿ ತ್ಯಜಿಸಿದರು.

ಯಡಿಯೂರಪ್ಪ ಅವರ ಸರ್ಕಾರ ಪತನಗೊಳ್ತಿದ್ದಂತೆ, ಕಾಂಗ್ರೆಸ್​ ಸಹಕಾರದಲ್ಲಿ ಕುಮಾರಸ್ವಾಮಿ ಸರ್ಕಾರ ರಚನೆ ಮಾಡಿದರು. 15ನೇ ವಿಧಾನಸಭೆ ಅವಧಿಯನ್ನೂ ಕುಮಾರಸ್ವಾಮಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಂತರ ಮತ್ತೆ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾದರು.

ಯಡಿಯೂರಪ್ಪ ಅವರು ಅಧಿಕಾರವನ್ನು ಕಳೆದುಕೊಂಡು ಒಂದು ವರ್ಷದ 61 ದಿನಗಳು ಕಳೆಯುತ್ತಿದ್ದಂತೆಯೇ ಮತ್ತೆ ಮುಖ್ಯಮಂತ್ರಿಯಾಗುವ ಭಾಗ್ಯ ಒಲಿಯಿತು. ಆದರೂ ಯಡಿಯೂರಪ್ಪಗೆ ಪೂರ್ಣಾವಧಿವರೆಗೆ ಮುಖ್ಯಮಂತ್ರಿಯಾಗಿ ಉಳಿಯಲು ಬಿಜೆಪಿ ಹೈಕಮಾಂಡ್ ಅವಕಾಶ ಮಾಡಿಕೊಡಲಿಲ್ಲ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಿ 2 ವರ್ಷದ 2 ದಿನ ಪೂರೈಸುತ್ತಿದ್ದಂತೆಯೇ ಬಸವರಾಜ್ ಬೊಮ್ಮಾಯಿಗೆ ಬಿಜೆಪಿ ಪಟ್ಟ ಕಟ್ಟಿತು. ಬೊಮ್ಮಾಯಿ ಅವರು 15ನೇ ವಿಧಾನಸಭೆಯ ಅವಧಿ ಮುಗಿಯುವವರೆಗೂ ರಾಜ್ಯದ ಮುಖ್ಯಮಂತ್ರಿ ಆಡಳಿತ ನಡೆಸಿದರು.

ದೇವೇಂದ್ರ ಫಡ್ನವೀಸ್..!
2014ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಗೆಲುವು ಸಾಧಿಸಿದ್ದ ಬಿಜೆಪಿ, ದೇವೇಂದ್ರ ಫಡ್ನವೀಸ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಫಡ್ನವಿಸ್ ಈ ಅವಧಿಯನ್ನು ಪೂರ್ಣಗೊಳಿಸಿದರು. ಆದರೆ ಮುಂದಿನ ಅವಧಿಯ ಅಧಿಕಾರ ಅವರಿಗೆ ಒಲಿಯಲಿಲ್ಲ. 2019ರ ನವೆಂಬರ್​ನಲ್ಲಿ ತರಾತುರಿಯಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಕೇವಲ ಐದು ದಿನಗಳಲ್ಲಿ ಫಡ್ನವಿಸ್ ಮುಖ್ಯಮಂತ್ರಿ ಸ್ಥಾನವನ್ನು ತೊರೆಯಬೇಕಾಯಿತು. ಫಡ್ನವಿಸ್ ಅವರ ರಾಜೀನಾಮೆ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಮಹಾಘಟಬಂಧನ್ ಸರ್ಕಾರ ರಚನೆ ಆಯಿತು. ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದರು, ಶಿವಸೇನೆಯ ಠಾಕ್ರೆಗೆ ಕಾಂಗ್ರೆಸ್​, ಎನ್​ಸಿಪಿ ಬೆಂಬಲ ನೀಡಿದ್ದವು. ನಂತರದ ದಿನಗಳಲ್ಲಿ ಠಾಕ್ರೆ ಸರ್ಕಾರ ಕೂಡ ಪತನಗೊಂಡಿರೋದು ಇತಿಹಾಸ.

ವಿಶೇಷ ವರದಿ: ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಕಾಲದಲ್ಲಿ CM ಕುರ್ಚಿ ಕಳ್ಕೊಂಡ 7ನೇ ನಾಯಕ ಖಟ್ಟರ್; ಮೂರೇ ದಿನಕ್ಕೆ ಪಟ್ಟ ತ್ಯಜಿಸಿದ್ದ ಯಡಿಯೂರಪ್ಪ..!

https://newsfirstlive.com/wp-content/uploads/2024/03/HARIYANA-2.jpg

Load More