/newsfirstlive-kannada/media/post_attachments/wp-content/uploads/2024/07/harshika-Poonacha.jpg)
ಸ್ಯಾಂಡಲ್​​ವುಡ್​​ ಚಿಟ್ಟೆ ಹರ್ಷಿಕಾ ಪೂಣಚ್ಚ ಮತ್ತು ಭುವನ್​ ಪೊನ್ನಣ್ಣ ದಂಪತಿ ಸಿಹಿ ಸುದ್ದಿ ಹಂಚಿದ್ದಾರೆ. ಶುಕ್ರವಾರದಂದೇ ತಮ್ಮ ಮನೆಗೆ ಮುದ್ದಾದ ಲಕ್ಷ್ಮಿಯನ್ನು ಬರಮಾಡಿಕೊಂಡಿದ್ದಾರೆ.
ಹೌದು. ಹರ್ಷಿಕಾ ಪೂಣಚ್ಚ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇಂದು ಬೆಳಗ್ಗಿನ ಜಾವ 3 ಗಂಟೆಗೆ ಹರ್ಷಿಕಾ ಪೂಣಚ್ಚ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/10/Harshika-Punacha.jpg)
ಮಗಳ ಆಗಮನದಿಂದ ಹರ್ಷಿಕಾ ಹಾಗೂ ಭುವನ್ ಕುಟುಂಬಸ್ಥರು ಸಂತಸಗೊಂಡಿದ್ದಾರೆ. ಖುಷಿಯಲ್ಲಿ ತೇಲುತ್ತಿದ್ದಾರೆ. ಅದರಲ್ಲೂ ಲಕ್ಷ್ಮೀಯೇ ಮನೆಗೆ ಆಗಮಿಸಿದ್ದಾಳೆಂಬ ಸಂತಸದಲ್ಲಿದ್ದಾರೆ.
ಸದ್ಯ ತಾಯಿ ಹರ್ಷಿಕಾ ಮತ್ತು ಮಗು ಆರೋಗ್ಯವಾಗಿದೆ. ಅತ್ತ ತಂದೆ ಭುವನ್ ಮಗಳು ಆಗಮಿಸಿದ ಖುಷಿಯಲ್ಲಿ​ ಆನಂದಭಾಷ್ಪ ಸುರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us