Apple; ಕಿಂಗ್ ಕೊಹ್ಲಿ, ರೋಹಿತ್ ಫ್ಯಾನ್ಸ್​ಗೆ ಆಪಲ್ ಎಸೆದ ಯಂಗ್ ಬೌಲರ್​.. ಫುಲ್ ಖುಷ್

author-image
Bheemappa
Updated On
Apple; ಕಿಂಗ್ ಕೊಹ್ಲಿ, ರೋಹಿತ್ ಫ್ಯಾನ್ಸ್​ಗೆ ಆಪಲ್ ಎಸೆದ ಯಂಗ್ ಬೌಲರ್​.. ಫುಲ್ ಖುಷ್
Advertisment
  • ಭಾರತ ತಂಡ ಈ ಪಂದ್ಯ ಗೆದ್ದರೇ ಇಂಗ್ಲೆಂಡ್​ಗೆ ಮುಖಭಂಗ
  • ಗಾಯದಿಂದ ಚೇತರಿಸಿಕೊಂಡಿರುವ ವಿರಾಟ್ ಕೊಹ್ಲಿ ಕಣಕ್ಕೆ
  • ಕಟಕ್​ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯ

ಭಾರತ ಹಾಗೂ ಇಂಗ್ಲೆಂಡ್​ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಇಂಗ್ಲೆಂಡ್ ಕ್ಯಾಪ್ಟನ್ ಜೋಶ್ ಬಟ್ಲರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟೀಮ್ ಇಂಡಿಯಾ ಫೀಲ್ಡಿಂಗ್​ ಮಾಡುತ್ತಿದೆ. ಇದಕ್ಕೂ ಮೊದಲು ಭಾರತ ಯುವ ಬೌಲರ್​ ಹರ್ಷಿತ್​ ರಾಣಾ ಅವರು ಗ್ಯಾಲರಿಯಲ್ಲಿದ್ದ ಮಕ್ಕಳಿಗೆ ಆಪಲ್​ಗಳನ್ನು ಎಸೆದಿದ್ದಾರೆ.

ಒಡಿಶಾದ ಕಟಕ್​ನ ಬಾರಾಬತಿ ಸ್ಟೇಡಿಯಂನ ಬೌಂಡರಿ ಲೈನ್ ಬಳಿ ಇರುವಂತಹ ಪ್ಲೇಯರ್ಸ್​ ಕುಳಿತುಕೊಳ್ಳುವಲ್ಲಿ ಹರ್ಷಿತ್ ರಾಣಾ ಅವರು ಕುಳಿತುಕೊಂಡಿದ್ದರು. ಈ ವೇಳೆ ಪಂದ್ಯ ವೀಕ್ಷಿಸಲು ಬಂದಿದ್ದ ಕೆಲ ಮಕ್ಕಳು ಗ್ಯಾಲರಿಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದರು. ಆಗ ಹರ್ಷಿತಾ ರಾಣಾ ಅವರು ಕುಳಿತುಕೊಂಡಿದ್ದ ಮುಂದಿನ ಟೇಬಲ್​ ಮೇಲಿಟ್ಟಿದ್ದ ಸೇಬು ಹಣ್ಣಗಳ ಮೇಲೆ ಮಕ್ಕಳ ಕಣ್ಣು ಬಿದ್ದಿವೆ. ತಕ್ಷಣ ಆ್ಯಪಲ್​ ಹಣ್ಣುಗಳನ್ನು ಕೊಡುವಂತೆ ಕೇಳಿಕೊಂಡಿದ್ದಾರೆ.

publive-image

ಇದನ್ನೂ ಓದಿ:ರೋಹಿತ್ ಶರ್ಮಾಗೆ ಒಲಿಯದ ಟಾಸ್​.. ಟೀಮ್ ಇಂಡಿಯಾದ ಪ್ಲೇಯಿಂಗ್​- 11ರಲ್ಲಿ ಯಾರಿದ್ದಾರೆ?

ಇದನ್ನ ಕೇಳಿಸಿಕೊಂಡ ಹರ್ಷಿತಾ ರಾಣಾ ಕುಳಿತಲ್ಲಿಂದಲೆ ಒಂದೊಂದಾಗಿ ಆಪಲ್ ಹಣ್ಣಗಳನ್ನು ಮಕ್ಕಳ ಕಡೆಗೆ ಎಸೆದಿದ್ದಾರೆ. ಒಟ್ಟು 5 ಆ್ಯಪಲ್​ಗಳನ್ನು ಎಸೆದಂತೆ ಆಗಿದೆ. ಆದರೆ ವಿಡಿಯೋದಲ್ಲಿ 3 ಮಾತ್ರ ಕಾಣಿಸಿವೆ. ಆಪಲ್​ಗಳನ್ನು ಕ್ಯಾಚ್ ಹಿಡಿದ ಮಕ್ಕಳು ಓಹೋ.. ಎಂದು ಕೂಗಿ ಸಂತಸ ಪಟ್ಟಿದ್ದಾರೆ. ಇನ್ನು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹೆಸರು ಇರುವ ಟೀಮ್ ಇಂಡಿಯಾದ ಜೆರ್ಸಿಯನ್ನು ಮಕ್ಕಳು ಧರಿಸಿದ್ದು ಕಂಡು ಬಂತು. ಅಂದರೆ ರೋಹಿತ್, ಕೊಹ್ಲಿ ಫ್ಯಾನ್ಸ್​ಗೆ ಹರ್ಷಿತಾ ರಾಣಾ ಆಪಲ್​ಗಳನ್ನು ಕೊಟ್ಟಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಕಮೆಂಟ್​ಗಳನ್ನು ಮಾಡುತ್ತಿದ್ದಾರೆ. ಕಟಕ್​ನಲ್ಲಿ ನಡೆಯುತ್ತಿರುವ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ ಸರಣಿ ಕೈವಶ ಆಗಲಿದೆ. ಇಂಗ್ಲೆಂಡ್ ಟಿ20 ಹಾಗೂ ಏಕದಿನ ಎರಡನ್ನೂ ಸೋತಂತೆ ಆಗುತ್ತದೆ. ಪಂದ್ಯ ಮುಗಿದ ಮೇಲೆ ಇದಕ್ಕೆ ಉತ್ತರ ಸಿಗಲಿದೆ.


">February 9, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment