/newsfirstlive-kannada/media/post_attachments/wp-content/uploads/2024/10/TEAM-INDIA.jpg)
ಬಾಂಗ್ಲಾ ದೇಶದ ವಿರುದ್ಧದ ಮೂರು ಟಿ-20 ಪಂದ್ಯಗಳ ಸರಣಿಯು ನಾಳೆಯಿಂದ ಆರಂಭವಾಗಲಿದೆ. ಟೆಸ್ಟ್​ ಸರಣಿಯನ್ನು ಕ್ಲೀನ್​ಸ್ವೀಪ್ ಮಾಡಿರುವ ಭಾರತ ತಂಡವು, ಟಿ-20 ಪಂದ್ಯಗಳನ್ನೂ ಗೆದ್ದು ಬೀಗಲು ಹುಮ್ಮಸ್ಸಿನಲ್ಲಿದೆ.
ಅಕ್ಟೋಬರ್ 6, 9 ಹಾಗೂ 12ಕ್ಕೆ ಟಿ-20 ಪಂದ್ಯ ನಡೆಯಲಿದೆ. ಕ್ರಮವಾಗಿ ಗ್ವಾಲಿಯರ್, ದೆಹಲಿ ಹಾಗೂ ಹೈದರಾಬಾದ್​ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಗಳು ಸಜ್ಜಾಗಿವೆ. ಕೊನೆಯ ಹಾಗೂ ಅಂತಿಮ ಟೆಸ್ಟ್ ಪಂದ್ಯವು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಬಿಸಿಸಿಐ, 15 ಸದಸ್ಯರುಳ್ಳ ತಂಡವನ್ನು ಪ್ರಕಟಸಿದೆ. ಈ ಸರಣಿಯಲ್ಲಿ ಅಂತಾರಾಷ್ಟ್ರೀಯ ಟಿ-20ಗೆ ಮೂವರು ಪದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ. ಆದರೆ ಯಾರಿಗೆಲ್ಲ ಅವಕಾಶ ಸಿಗಲಿದೆ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:‘ಏಕಾಂಗಿ ಪಾಂಡ್ಯ’ರ ಭಾವುಕ ಪೋಸ್ಟ್ ಹೇಳ್ತಿದೆ ನೂರು ನೋವಿನ ಕತೆ..!
ಆ ಮೂವರು ಯಾರು..?
ಮಯಾಂಕ್ ಯಾದವ್: ಐಪಿಎಲ್​ನಲ್ಲಿ ಎಲ್​ಎಸ್​ಜಿ ಸ್ಟಾರ್ ಆಗಿರುವ ಇವರು ವೇಗದ ಬೌಲಿಂಗ್ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ. 2024ರ ಐಪಿಎಲ್​ನಲ್ಲಿ ಇವರ ಆಟ ಅದ್ಭುತವಾಗಿತ್ತು. 156.7 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು.
ನಿತಿಶ್ ಕುಮಾರ್ ರೆಡ್ಡಿ: ಐಪಿಎಲ್​ನಲ್ಲಿ ಹೈದರಾಬಾದ್ ತಂಡದ ಪರವಾಗಿ ಆಡುತ್ತಿದ್ದಾರೆ. ಬ್ಯಾಟಿಂಗ್, ಬಾಲಿಂಗ್ ಎರಡನ್ನೂ ನಿಭಾಯಿಸುತ್ತಾರೆ. ಆಲ್​ರೌಂಡರ್ ಕೋಟಾದಡಿ ಕಣಕ್ಕಿಳಿಯಲು ತುದಿಗಾಲಲ್ಲಿ ನಿಂತಿದ್ದಾರೆ. ಪವರ್​ ಹಿಟ್ಟರ್ ಕೂಡ ಹೌದು. ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆ ಆಗಿದ್ದ ಇವರು, ಗಾಯದ ಸಮಸ್ಯೆಯಿಂದ ಸರಣಿಯಿಂದ ಹೊರ ಬಿದ್ದಿದ್ದರು.
ಇದನ್ನೂ ಓದಿ:ಟಿ-20 ವಿಶ್ವಕಪ್​, ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋತ ಕೌರ್ ಪಡೆ
ಹರ್ಷಿತ್ ರಾಣಾ: ಕೋಲ್ಕತ ನೈಡ್ ರೈಡರ್ಸ್ ತಂಡದ ಬೆನ್ನೆಲುಬು ಇವರು. 2024ರ ಐಪಿಎಲ್​ನಲ್ಲಿ ಇಂಪ್ರೆಸೀವ್ ಆಗಿದ್ದಾರೆ. ಮಾತ್ರವಲ್ಲ ದಿಲೀಪ್ ಟ್ರೋಫಿಯಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇವರು ಜಿಂಬಾಬ್ವೆ ವಿರುದ್ಧದ 2 ಪಂದ್ಯಗಳ ಟಿ-20 ಸರಣಿಗೆ ಆಯ್ಕೆ ಆಗಿದ್ದರು. ಜೊತೆಗೆ ಲಂಕಾ ವಿರುದ್ಧದ ಏಕದಿನ ಟೂರ್ನಿಗೂ ಸೆಲೆಕ್ಟ್ ಆಗಿದ್ದರು. ಆದರೆ ಆಡುವ ಅವಕಾಶ ಸಿಕ್ಕಿರಲಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us