/newsfirstlive-kannada/media/post_attachments/wp-content/uploads/2024/06/Rohit-Bumrah.jpg)
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ ಅಂತಿಮವಾಗಿ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಆದರೆ ಬೂಮ್ರಾ ಇಲ್ಲ ಎನ್ನುವ ಆತಂಕ ತಂಡವನ್ನು ಕಾಡಿದೆ.
ಬೆನ್ನು ನೋವಿಗೆ ಒಳಗಾಗಿದ್ದ ಜಸ್ಪ್ರೀತ್ ಬೂಮ್ರಾಗೆ ತಂಡದಲ್ಲಿ ಸ್ಥಾನ ನೀಡಲು ಬಿಸಿಸಿಐ ನಿರ್ಧರಿಸಿದೆ. ಅವರ ಬದಲಿಗೆ 23 ವರ್ಷದ ಹರ್ಷಿತ್ ರಾಣಾಗೆ ಚಾನ್ಸ್ ನೀಡಲಾಗಿದೆ. ರಾಣಾ ಸದ್ಯ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಆಡುತ್ತಿದ್ದಾರೆ. ಕೊನೆಯ ಪಂದ್ಯವಾದ ಇವತ್ತೂ ಕೂಡ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: IND vs ENG 3ನೇ ಪಂದ್ಯ; ಇವತ್ತು ಟೀಂ ಇಂಡಿಯಾದ ಈ ಆಟಗಾರರಿಗೆ ಲಾಸ್ಟ್ ಚಾನ್ಸ್..!
ಹರ್ಷಿತ್ ರಾಣಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ. ಹಾಗೆ ನೋಡಿದರೆ ರಾಣಾಗೆ ಏಕದಿನ ಕ್ರಿಕೆಟ್ನಲ್ಲಿ ಯಾವುದೇ ಅನುಭವ ಇಲ್ಲ. ಇವತ್ತು ಆಡುತ್ತಿರುವ ಪಂದ್ಯವನ್ನು ಹೊರತುಪಡಿಸಿದ್ರೆ, ಕೇವಲ 2 ಪಂದ್ಯವನ್ನು ಮಾತ್ರ ಆಡಿದ್ದಾರೆ. ಎರಡು ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದುಕೊಂಡಿದ್ದಾರೆ.
ಅಂತಿಮವಾಗಿ 15 ಸದಸ್ಯರುಳ್ಳ ಬಲಿಷ್ಠ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಆಯ್ಕೆಯಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಔಟ್ ಆಗಿದ್ದಾರೆ. ಅವರ ಬದಲಿಗೆ 33 ವರ್ಷದ ವರುಣ್ ಚಕ್ರವರ್ತಿಗೆ ಬಿಸಿಸಿಐ ಮಣೆ ಹಾಕಿದೆ.
ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ..!
ರೋಹಿತ್ ಶರ್ಮಾ (ಕ್ಯಾಪ್ಟನ್), ಶುಬ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.
ಇದನ್ನೂ ಓದಿ: ಇನ್ವೆಸ್ಟ್ ಕರ್ನಾಟಕ 2025; ಹರಿದು ಬಂದು ಕೋಟಿ ಕೋಟಿ ಬಂಡವಾಳ.. 21 ಯೋಜನೆಗಳಿಗೆ ಅಂಕಿತ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ