/newsfirstlive-kannada/media/post_attachments/wp-content/uploads/2025/07/Harshvardhn-jain.jpg)
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಕಲಿ ರಾಯಭಾರ ಕಚೇರಿ ( Fake Embassy) ನಡೆಸುತ್ತಿದ್ದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಹರ್ಷವರ್ಧನ್ ಜೈನ್ ( Harshvardhan Jain) ವಿಚಾರಣೆ ತೀವ್ರಗೊಂಡಿದೆ. ತನಿಖೆ ವೇಳೆ ಕೆಲವು ಶಾಕಿಂಗ್ ವಿಚಾರಗಳನ್ನು ಆತ ಬಾಯಿಬಿಟ್ಟಿದ್ದಾನೆ. ಅದನ್ನು ಎಸ್ಟಿಎಫ್ (Uttar Pradesh Special Task Force) ಅಧಿಕಾರಿಗಳು ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ. ಅವಗಳ ವಿವರ ಹೀಗಿದೆ..
ಇದನ್ನೂ ಓದಿ: ಆರ್ಸಿಬಿ ಸ್ಟಾರ್ ಸ್ಫೋಟಕ ಶತಕ.. 11 ಸಿಕ್ಸರ್, 6 ಬೌಂಡರಿ ಬಾರಿಸಿ ದಾಖಲೆ
ಅಸಲಿ ಸತ್ಯ
- 300 ಕೋಟಿಗೂ ಹೆಚ್ಚು ಮೊತ್ತದ ಹಗರಣದಲ್ಲಿ ಭಾಗಿಯಾಗಿರೋ ಜೈನ್
- ವಿದೇಶಗಳಲ್ಲಿ ಸಾಲ ಪಡೆಯುವ ಹೆಸರ ಹಗರಣ ನಡೆದಿರುವ ಆರೋಪ
- ವಿದೇಶ ಸೇರಿ ಒಟ್ಟು 25 ಕಂಪನಿ ಹೊಂದಿರುವ ಹರ್ಷವರ್ಧನ್ ಜೈನ್
- ವಿದೇಶಗಳಲ್ಲಿ ಹಲವಾರು ಬ್ಯಾಂಕ್ ಅಕೌಂಟ್ ಹೊಂದಿರುವ ಆರೋಪಿ
- UAE 06, ಮಾರಿಷಸ್ 01, ಯುಕೆ 03, ಭಾರತದಲ್ಲಿ 1 ಬ್ಯಾಂಕ್ ಖಾತೆ
- ಅಕ್ರಮವಾಗಿ ಎರಡು ಪ್ಯಾನ್ ಕಾರ್ಡ್ ಹೊಂದಿರುವ ಹರ್ಷವರ್ಧನ್
- 10 ವರ್ಷ, 162 ಬಾರಿ ವಿದೇಶ ಪ್ರವಾಸ ಮಾಡಿರೋ ಹರ್ಷವರ್ಧನ್ ಜೈನ್
- 2005-2015ರ ನಡುವೆ 19 ದೇಶಗಳಿಗೆ ಭೇಟಿ ನೀಡಿರುವ ಹರ್ಷವರ್ಧನ್
- 22 ಬಾರಿ ಯುಕೆಗೆ, ಮಾರಿಷಸ್, ಫ್ರಾನ್ಸ್, ಕ್ಯಾಮರೂನ್, ಪೋಲೆಂಡ್
- ಶ್ರೀಲಂಕಾ, ಟರ್ಕಿ, ಇಟಲಿ, ಸೆಬೋರ್ಗೊ, ಇಂಡೋನೇಷ್ಯಾ, ಅರೇಬಿಯಾ
- ಸಿಂಗಾಪುರ, ಮಲೇಷ್ಯಾ, ಜರ್ಮನಿ ಮತ್ತು ಥೈಲ್ಯಾಂಡ್ ಇತ್ಯಾದಿಗಳಿಗೆ ಭೇಟಿ
- 12 ವಿವಿಧ ದೇಶಗಳ ರಾಜತಾಂತ್ರಿಕ ಪಾಸ್ಪೋರ್ಟ್ ಹೊಂದಿರುವ ಜೈನ್
- ಕಳೆದ 8 ವರ್ಷಗಳಿಂದ ಘಾಜಿಯಾಬಾದ್ನಲ್ಲಿ ಫೇಕ್ ರಾಯಭಾರಿ ಕಚೇರಿ
ನಡೆಸ್ತಿದ್ದ ಕಂಪನಿಗಳು
ಸ್ಟೇಟ್ ಟ್ರೇಡಿಂಗ್ ಕಾರ್ಪೊರೇಷನ್ ಲಿಮಿಟೆಡ್, ಈಸ್ಟ್ ಇಂಡಿಯಾ ಕಂಪನಿ ಯುಕೆ ಲಿಮಿಟೆಡ್, ಯುಎಇ ಐಲ್ಯಾಂಡ್ ಜನರಲ್ ಟ್ರೇಡಿಂಗ್ ಸಿಒ LLC, ಮಾರಿಷಸ್‌ನಲ್ಲಿ ಇಂಡಿಯಾ ಓವರ್‌ಸೀಸ್ ಲಿಮಿಟೆಡ್, ಆಫ್ರಿಕಾದ ಕ್ಯಾಮರೂನ್‌ನಲ್ಲಿ ಕ್ಯಾಮೆರಾನ್ ಇಸ್ಪ್ಯಾಟ್ SLRL ಕಂಪನಿ ಹೊಂದಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಹಿಂದೂ ದೇಗುಲಕ್ಕಾಗಿ 2 ಬೌದ್ಧ ದೇಶಗಳ ಮಧ್ಯೆ ಯುದ್ಧ.. ಥೈಲ್ಯಾಂಡ್-ಕಾಂಬೋಡಿಯಾ ನಡುವೆ ಆಗ್ತಿರೋದೇನು..?
2 ಪ್ಯಾನ್ ಕಾರ್ಡ್‌ಗಳು ಇರೋದು ಬೆಳಕಿಗೆ ಬಂದಿವೆ. ಅವುಗಳ ಆಧಾರದ ಮೇಲೆ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದ. ವಿದೇಶಿ ಖಾತೆಗಳ ಆಧಾರದ ಮೇಲೆಯೂ ತನಿಖೆ ನಡೆಸಲಾಗುತ್ತಿದೆ. ಸದ್ಯ ವಿಚಾರಣೆ ನಡೆಸ್ತಿರುವ ಪೊಲೀಸರು ಆರೋಪಿಯನ್ನ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ, ಜಾಬ್ ರಾಕೆಟ್, ಹವಾಲಾ ಮೂಲಕ ಹಣ ಕೊಳ್ಳೆ ಹೊಡೆದ ಆರೋಪ ಇದೆ.
ಇದನ್ನೂ ಓದಿ: ಹರಿದ್ವಾರದ ಮಾನಸ ದೇವಿ ದೇಗುಲದಲ್ಲಿ ಘೋರ ದುರಂತ; 6 ಭಕ್ತರು ಬಲಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ