/newsfirstlive-kannada/media/post_attachments/wp-content/uploads/2025/03/Dr-Willie-Soon-1.jpg)
ದೇವರ ಅಸ್ತಿತ್ವದ ಬಗ್ಗೆ ನಮ್ಮಲ್ಲಿ ಆಗಾಗ ಪರ ವಿರೋಧದ ಚರ್ಚೆಗಳು ಆಗುತ್ತಲೇ ಇರುತ್ತವೆ. ದೇವನಿದ್ದಾನೆ. ನಮ್ಮ ನಡುವೆ ಒಂದ ಸುಪ್ರೀಂ ಎನರ್ಜಿ ಇದೆ. ಅದೇ ದೇವರು ಎಂದು ಕೆಲವು ವಾದಿಸಿದರೆ ದೇವರು ಕೇವಲ ಮನುಷ್ಯನ ಸೃಷ್ಟಿ ಎಂದು ನಾಸ್ತಿಕವಾದದ ಪರಂಪರೆ ಹೇಳುತ್ತದೆ. ಇದರ ನಡುವೆ ಅನೇಕ ಸಾಧಕರು ದೇವರ ಅಸ್ತಿತ್ವದ ಬಗ್ಗೆ. ಇರುವಿಕೆಯ ಬಗ್ಗೆ ಸಾಬೀತು ಮಾಡಿದ್ದಾರೆ. ಈಗ ಹಾರ್ವರ್ಡ್ ವಿಶ್ವ ವಿದ್ಯಾಲಯದ ವಿಜ್ಞಾನಿಯೊಬ್ಬರು ದೇವರು ಇರುವುದು ನಿಜ ಎಂದು ಸೂತ್ರದ ಮೂಲಕ ಸಾಬೀತು ಪಡಿಸಿದ್ದಾರೆ.
ವಿಜ್ಞಾನ ಮತ್ತ ಧರ್ಮ ಒಂದೇ ರೇಖೆಯಲ್ಲಿ ಸಾಗುವುದಿಲ್ಲ. ಅವುಗಳದ್ದು ಯಾವಗಲೂ ಭಿನ್ನಪಥವೇ. ಆದರೂ ಕಳೆದ ವರ್ಷ ಒಂದಿಷ್ಟು ವಿಜ್ಞಾನಿಗಳು two of the miracles Jesus performed in the Bible ನಲ್ಲಿರುವುದು ನಿಜಕ್ಕೂ ಸತ್ಯ ಎಂದು ವಾದಿಸಿದ್ದರು. ವಿಜ್ಞಾನ ಮತ್ತು ದೇವರ ವಿಚಾರದಲ್ಲಿ ಅತ್ಯಂತ ಸ್ಪಷ್ಟವಾದ ವಾದವನ್ನು ಮುಂದಿಟ್ಟ ಹೆಸರು ಅಮದ್ರೆ ಅದು ಪ್ರೊಫೇಸರ್ ಸ್ಟೀಫಕ್ ಹಾಕಿನ್ಸ್ ಧರ್ಮದ ಮೇಲಿರುವ ಅವರ ಸ್ಪಷ್ಟವಾದ ವಿಚಾರಧಾರೆಯನ್ನು ಅವರ ದೃಷ್ಟಿಕೋನದಲ್ಲಿ ವಿವರಿಸಿದ್ದರು. ಈಗ ಮತ್ತೊಬ್ಬ ವಿಜ್ಞಾನಿ ದೇವರು ಇರುವುದು ನಿಜ ಎಂದು ವಾದಿಸುತ್ತಿದ್ದಾರೆ ಅವರ ಹೆಸರು ಡಾ. ವಿಲ್ಲಿ ಸೂನ್
Dr Willie Soon explains the climate scam! WATCH: pic.twitter.com/QEFqsM9uwY
— Scott Adams (@scottadamsshow)
Dr Willie Soon explains the climate scam! WATCH: pic.twitter.com/QEFqsM9uwY
— Scott Adams (@scottadamsshow) September 20, 2024
">September 20, 2024
ಡಾ. ವಿಲ್ಲಿ ಸೂನ್ ಒಬ್ಬ ಖಗೋಳ ಬೌತಶಾಸ್ತ್ರಜ್ಞ ಹಾಗೂ ಬಾಹ್ಯಾಕಾಶದ ಎಂಜನಿಯರ್. ಬಹಳ ವರ್ಷಗಳಿಂದ ಹಾರ್ವರ್ಡ್ ಹಾಗೂ ಸ್ಮಿತ್ಸೊನಿಯಾ ಸೆಂಟರ್ಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇತ್ತೀಚೆಗೆ ಟಕರ್ ಕಾರ್ಲಸನ್ ನೆಟ್ವರ್ಕ್ನಲ್ಲಿ ಮಾತನಾಡಿದ ಡಾ. ಸೂನ್. ದೇವರ ಇರುವಿಕೆಯ ಬಗ್ಗೆ ಒಂದು ಸರಳ ಸೂತ್ರದೊಂದಿಗೆ ಸಾಕ್ಷಿಸಮೇತ ಸಾಬೀತು ಮಾಡಿದ್ದಾರೆ. ಡಾ.ಸೂನ್ ಫೈನ್ ಟ್ಯೂನಿಂಗ್ ಆರ್ಗ್ಯೂಮೆಂಟ್ ವಿಚಾರದಲ್ಲಿ ತುಂಬಾ ಆಳವಾಗಿ ಅಧ್ಯಯನ ಮಾಡಿದ್ದಾರೆ. ಸೃಷ್ಟಿಯ ಸ್ಥಿತಿ ಮತ್ತು ಬೌತಿಕ ಕಾನೂನುಗಳು ಜೀವಗಳ ಅಸ್ತಿತ್ವಕ್ಕೆ ಬುನಾದಿ. ಮತ್ತು ಈ ಒಂದು ಕಾನೂನು ಸಂಪೂರ್ಣವಾಗಿ ಸೃಷ್ಟಿಯಾಗಿದ್ದು ಬಿಗ್ ಬ್ಯಾಂಗ್ ಮೂಲಕ
ಇದನ್ನೂ ಓದಿ:6 ಕೋಟಿ ಮೌಲ್ಯದ ವಜ್ರದ ಇಯರ್ರಿಂಗ್ ನುಂಗಿ ಓಡಿ ಹೋದ ಭೂಪ! ಆಮೇಲಾಗಿದ್ದೇನು?
ಉದಾಹರಣೆಗೆ ಗುರುತ್ವಾಕರ್ಷಣ ಬಲ ಕೊಂಚ ಬಲಹೀಣಗೊಂಡಿದ್ದರೆ. ಗ್ರಹಗಳ ಸೃಷ್ಟಿಯೇ ಆಗುತ್ತಿರಲಿಲ್ಲ. ಅದು ಈಗೀರುವುದಕ್ಕಿಂತ ಮತ್ತಷ್ಟು ಬಲಿಷ್ಠವಾಗಿದ್ದರೆ, ಗ್ರಹಗಳನ್ನು ಸಂಪೂರ್ಣವಾಗಿ ಬ್ಲ್ಯಾಕ್ ಹೋಲ್ಗಳ ಸರ್ವನಾಶ ಮಾಡುತ್ತಿದ್ದವು.
ಸೂನ್ ಕಂಡು ಹಿಡಿದಿರುವ ಫಾರ್ಮುಲಾ ಮೂಲವಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರಜ್ಞ ಪೌಲ್ ಡಿರಕ್ ಅವರದ್ದು. ಅವರನ್ನು ಫಾದರ್ ಆಫ್ ಆ್ಯಂಟಿಮ್ಯಾಟರ್ ಎಂದೇ ಕರೆಯಲಾಗುತ್ತಿತ್ತು.
ಇದನ್ನೂ ಓದಿ:ಈ ದೇಶದಲ್ಲಿ ಹುಡುಕಿದರೂ ಒಂದೇ ಒಂದು ಆಸ್ಪತ್ರೆ ಸಿಗಲ್ಲ.. 96 ವರ್ಷಗಳಿಂದ ಇಲ್ಲಿ ಒಂದೇ ಒಂದು ಮಗುವು ಹುಟ್ಟಿಲ್ಲ!
1963ರಲ್ಲಿ ಅವರು ಬರೆದ ಪ್ರಕಾರ ಸೃಷ್ಟಿಯ ಮೂಲಭೂತ ವೈಶಿಷ್ಟ್ಯಗಳು ಹಾಗೂ ಮೂಲಭೂತ ಬೌತಿಕ ಕಾನೂನುಗಳನ್ನು ಅವರು ಗಣಿತಶಾಸ್ತ್ರದ ಸಿದ್ಧಾಂತದ ಮೂಲಕ ಸರ್ವಶ್ರೇಷ್ಠ ಸೌಂದರ್ಯ ಹಾಗೂ ಶಕ್ತಿ ಎಂದು ಬಣ್ಣಿಸಿದ್ದರು. ನಿಮಗೆ ಆಶ್ಚರ್ಯವಾಗಬಹುದು. ಯಾಕೆ ಈ ಸೃಷ್ಟಿಯೂ ಒಂದು ರೇಖೆಯಲ್ಲಿ ನಿರ್ಮಾಣಗೊಂಡಿದೆ ಎಂಬುದನ್ನು ಕೇಳಿದೆ. ಆದರೆ ಇದಕ್ಕೆ ಒಂದೇ ಉತ್ತರ ಸೃಷ್ಟಿ ಒಂದು ನಿರ್ಮಾಣಗೊಂಡಿದ್ದು. ಇದನ್ನು ನಾವು ಎಲ್ಲರೂ ಒಪ್ಪಲೇಬೇಕು ಎಂದು ಹೇಳಿದ್ದಾರೆ.
ದೇವರು ಒಬ್ಬ ಅಪರಮಿತ ಎತ್ತರದ ಅದ್ಭುತ ಗಣಿತಶಾಸ್ತ್ರಜ್ಞ ಅವನು ಸೃಷ್ಟಿ ರಚನೆಗೆ ತುಂಬಾ ಅತ್ಯಾಧುನಿಕವಾದ ಗಣಿತಶಾಸ್ತ್ರವನ್ನು ಬಳಕೆ ಮಾಡಿದ್ದಾನೆ ಎಂದು ಸೂನ್ ಹೇಳುತ್ತಾರೆ. ಡಿರಿಕ್ ಅವರ ಈ ಒಂದು ಸಿದ್ಧಾಂತವೇ ದೇವರು ಇರುವುದರ ಬಗ್ಗೆ ದೊಡ್ಡ ಸಾಕ್ಷಿ ಎನ್ನುತ್ತಾರೆ. ಇದರ ಜೊತೆ ಹಲವಾರು ಉದಾಹರಣೆಗಳು ಕೂಡ ಇವೆ. ದೇವರು ನಮಗೆ ಬೆಳಕು ಕೊಟ್ಟಿದ್ದಾನೆ. ನಾವು ಆ ಬೆಳಕನ್ನೇ ಬೆನ್ನಟ್ಟಿಕೊಂಡು ನಡೆಯಬೇಕು ಮತ್ತು ಉತ್ತಮವಾದದ್ದನ್ನು ಕೊಡಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ