/newsfirstlive-kannada/media/post_attachments/wp-content/uploads/2025/07/CAR.jpg)
ಕೆಲವು ದಿನಗಳಿಂದ ಗಂಡ, ಹಂಡ್ತಿಯಿಂದ ಕಿರುಕುಳಕ್ಕೆ ಒಳಗಾದ ಸುದ್ದಿಗಳು ಹೆಚ್ಚು ಸೌಂಡ್ ಮಾಡ್ತಿವೆ. ಗಂಡು ಮಕ್ಕಳ ಜೀವಕ್ಕೆ ಬೆಲೆಯೇ ಇಲ್ಲ. ಪತ್ನಿಯೊಂದಿಗೆ ಇದ್ದಾಗಲೂ ಪತಿಯ ಜೀವ ಸುರಕ್ಷಿತವೇ..? ಆತನಿಗೆ ರಕ್ಷಣೆ ಇದೆಯೇ..? ನಂಬಬಹುದಾ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಅದಕ್ಕೆ ಕಾರಣ ಇತ್ತೀಚೆಗೆ ನಡೆಯುತ್ತಿರುವ ಕೆಲವು ಅಹಿತಕರ ಘಟನೆಗಳು!
ಅಂತೆಯೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಭಾರೀ ಸದ್ದು ಮಾಡ್ತಿದೆ. ಟ್ರಾಫಿಕ್ ಸಿಗ್ನಲ್​​ನಲ್ಲಿ ಕಾರೊಂದು ನಿಂತಿದೆ. ಕಾರಿನ ಹಿಂಬದಿಯಲ್ಲಿ ಡಿಜಿಟಲ್ ಸ್ಟಿಕ್ಕರ್ ಒಂದು ಡಿಸ್​ಪ್ಲೇ ಆಗಿದೆ. ಅದರ ವಿಡಿಯೋವನ್ನು ಟ್ರಿಪ್ಪಿ-ಟ್ವೆಂಟಿ (trippi_twenty) ಎಂಬ ಇನ್​ಸ್ಟಾಗ್ರಾಮ್​ನಲ್ಲಿ ಅಪ್​ಲೋಡ್ ಆಗಿದೆ. ಅದು ಬರೋಬ್ಬರಿ 15.6 ಮಿಲಿಯನ್​ಗಿಂತಲೂ ಹೆಚ್ಚು ವೀವ್ಸ್​ ಪಡೆದುಕೊಂಡಿದೆ. ವಿಡಿಯೋ ಫನ್ನಿ ಆಗಿರಬಹುದು, ಆದರೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.
ವಿಡಿಯೋದಲ್ಲಿ ಏನಿದೆ..?
ಕಾರಿನ ಡಿಜಿಟಲ್ ಸ್ಟಿಕ್ಕರ್​​ನಲ್ಲಿ ಹೀಗೆ ಬರೆಯಲಾಗಿದೆ.. ‘ದಯವಿಟ್ಟು ಅಂತರ ಕಾಪಾಡಿಕೊಳ್ಳಿ.. ಕಾರು ನನಗೆ ಡಿಕ್ಕಿ ಹೊಡೆದರೆ ಹೆಂಡತಿ ನನಗೆ ಹೊಡೆಯುವಳು..’ (Plz keep distance... Car lag gayi toh Biwi mujhe pitegi ) ಎಂಬ ಸಂದೇಶ ಡಿಸ್​​ಪ್ಲೇ ಆಗಿದೆ. ಟ್ರಾಫಿಕ್​​ನಲ್ಲಿ ನಿಂತಿದ್ದ ಇತರೆ ವಾಹನ ಸವಾರರಿಗೆ ಇದು ತುಂಬಾನೇ ಎಂಟರ್ಟೈನ್​​ ನೀಡಿದೆ. ಈ ವಿಡಿಯೋವನ್ನು ನೋಡಿದ ಕೆಲವು ಬಳಕೆದಾರರು ತಮ್ಮದೇ ರೀತಿಯಲ್ಲಿ ಕಮೆಂಟ್ಸ್ ಹಾಕುತ್ತಿದ್ದಾರೆ. ಅಂದ್ಹಾಗೆ ಈ ಕಾರು ಹರಿಯಾಣದ್ದಾಗಿದೆ.
View this post on Instagram
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ