Advertisment

Haryana election ರೋಚಕ ಫಲಿತಾಂಶದಲ್ಲಿ ವಿನೇಶ್ ಫೋಗಟ್‌ಗೆ ಮುನ್ನಡೆ!

author-image
admin
Updated On
Haryana election ರೋಚಕ ಫಲಿತಾಂಶದಲ್ಲಿ ವಿನೇಶ್ ಫೋಗಟ್‌ಗೆ ಮುನ್ನಡೆ!
Advertisment
  • ಹರಿಯಾಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜಿದ್ದಾಜಿದ್ದಿನ ಹೋರಾಟ
  • ಜೂಲಾನಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ವಿನೇಶ್ ಫೋಗಟ್‌ ಸ್ಪರ್ಧೆ
  • ಒಲಿಂಪಿಕ್ಸ್‌ ಸೋಲಿನ ಬಳಿಕ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸದಲ್ಲಿ ವಿನೇಶ್‌!

ಹರಿಯಾಣ ವಿಧಾನಸಭೆಯ ಚುನಾವಣಾ ಫಲಿತಾಂಶ ರೋಚಕ ಹಂತ ತಲುಪಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜಿದ್ದಾಜಿದ್ದಿನ ಹೋರಾಟ ಕಂಡು ಬಂದಿದ್ದು, ಮತದಾರನ ತೀರ್ಪು ತೀವ್ರ ಕುತೂಹಲ ಕೆರಳಿಸಿದೆ. ಕಾಂಗ್ರೆಸ್‌ ಅನ್ನು ಹಿಂದಿಕ್ಕಿರುವ ಬಿಜೆಪಿ ಮುನ್ನಡೆ ಸಾಧಿಸಿದ್ರೆ ಚುನಾವಣಾ ಫಲಿತಾಂಶದಲ್ಲಿ ಹಾವ-ಏಣಿ ಆಟ ಇನ್ನೂ ಮುಂದುವರೆದಿದೆ.

Advertisment

90 ಸ್ಥಾನಕ್ಕೆ ನಡೆದಿರುವ ಚುನಾವಣೆಯಲ್ಲಿ 46 ಮ್ಯಾಜಿಕ್ ನಂಬರ್. ಸದ್ಯದ ಮತ ಎಣಿಕೆಯಲ್ಲಿ ಬಿಜೆಪಿಗೆ 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಕೂಡ 35 ಕ್ಷೇತ್ರಗಳಲ್ಲಿ ಗೆಲುವಿಗಾಗಿ ಹೋರಾಡುತ್ತಿದ್ದಾರೆ. INLD ಮೂರು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

ಇದನ್ನೂ ಓದಿ: ವಡಾ ಪಾವ್​ ಮಾರಿ ತಿಂಗಳಿಗೆ 2 ಲಕ್ಷ ದುಡಿತಾನೆ ಈ ವ್ಯಕ್ತಿ! MBA ಪದವೀಧರನಿಗಿಂತ ಈತನ ಆದಾಯವೇ ಜಾಸ್ತಿ! 

ಮತ ಎಣಿಕೆಯ ಪ್ರಾರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 45ಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ದರು. ಇದರಿಂದ ಹರಿಯಾಣದಲ್ಲಿ ಈ ಭಾರಿ ಕಾಂಗ್ರೆಸ್‌ಗೆ ಅಧಿಕಾರದ ಗದ್ದುಗೆ ಸಿಗುವ ಮುನ್ಸೂಚನೆ ಸಿಕ್ಕಿತ್ತು. ಆದರೆ ಈಗ ಕಾಂಗ್ರೆಸ್ ಲೆಕ್ಕಾಚಾರ ಸಂಪೂರ್ಣ ತಲೆ ಕೆಳಗಾಗಿದೆ. ಬಿಜೆಪಿ ಪಕ್ಷ ಮ್ಯಾಜಿಕ್ ನಂಬರ್ ತಲುಪಿದ್ರೆ ಹ್ಯಾಟ್ರಿಕ್ ಗೆಲುವು ಪಕ್ಕಾ ಅನ್ನೋ ಲೆಕ್ಕಾಚಾರದಲ್ಲಿದೆ.

Advertisment

publive-image

ಅಗ್ನಿ ಪರೀಕ್ಷೆಯಲ್ಲಿ ವಿನೇಶ್‌ ಫೋಗಟ್!
ಮಾಜಿ ಕುಸ್ತಿಪಟು ವಿನೇಶ್‌ ಫೋಗಟ್ ಅವರು ಹರಿಯಾಣದ ಜೂಲಾನಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಜೂಲಾನಾ ಕ್ಷೇತ್ರ ಹೈವೋಲ್ಟೇಜ್ ಅಖಾಡವಾಗಿದ್ದು ವಿನೇಶ್ ಫೋಗಟ್ ಅವರು ಸಹ ಆರಂಭದಲ್ಲಿ ಹಿನ್ನಡೆ ಸಾಧಿಸಿದ್ದು ಆಘಾತ ಎದುರಾಗಿತ್ತು. ಆದರೆ 10ನೇ ಸುತ್ತಿನ ಮತ ಎಣಿಕೆಯಲ್ಲಿ ಫೋಗಟ್ ಅವರು 4000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಜೂಲಾನಾ ಕ್ಷೇತ್ರದಲ್ಲಿ ವಿನೇಶ್ ಫೋಗಟ್ ಅವರ ವಿರುದ್ಧ ಬಿಜೆಪಿಯ ಯೋಗೇಶ್ ಕುಮಾರ್ ಅವರು ಹಿನ್ನಡೆ ಅನುಭವಿಸಿದ್ದಾರೆ. ಮತ ಎಣಿಕೆಯಲ್ಲಿ ಇನ್ನೂ ಹಾವು-ಏಣಿಯಾಟ ಮುಂದುವರಿದಿದ್ದು, ವಿನೇಶ್ ಫೋಗಟ್ ಸೋಲು, ಗೆಲುವು ತೀವ್ರ ಕುತೂಹಲ ಕೆರಳಿಸಿದೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಅವರು ಕೇವಲ 100 ಗ್ರಾಂ ತೂಕದಿಂದ ಚಿನ್ನದ ಪದಕವನ್ನು ಕಳೆದುಕೊಂಡಿದ್ದರು. ಪ್ಯಾರಿಸ್‌ನಿಂದ ಭಾರತಕ್ಕೆ ಬಂದ ಬಳಿಕ ಕುಸ್ತಿಗೆ ನಿವೃತ್ತಿ ಘೋಷಿಸಿ ಸಕ್ರಿಯ ರಾಜಕೀಯ ಪ್ರವೇಶಿಸಿದ್ದಾರೆ. ಇದೀಗ ಚುನಾವಣಾ ರಾಜಕೀಯದ ಅಗ್ನಿ ಪರೀಕ್ಷೆಯಲ್ಲಿ ವಿನೇಶ್ ಫೋಗಟ್ ಗೆಲ್ತಾರಾ.. ಸೋಲ್ತಾರಾ ಅನ್ನೋದು ಪ್ರಮುಖವಾಗಿದೆ. ಮತದಾರರು ನನ್ನ ಕೈ ಹಿಡಿದಿದ್ದು, ಗೆದ್ದೇ ಗೆಲ್ಲುವ ವಿಶ್ವಾಸವನ್ನು ಫೋಗಟ್ ವ್ಯಕ್ತಪಡಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment