ಹರಿಯಾಣ ಸೋಲು ಒಪ್ಪಿಕೊಳ್ಳದ ಕಾಂಗ್ರೆಸ್; ಬೇರೆಯದ್ದೇ ಆರೋಪ ಮಾಡಿದ ನಾಯಕರು..!

author-image
Ganesh
Updated On
ಹರಿಯಾಣ ಸೋಲು ಒಪ್ಪಿಕೊಳ್ಳದ ಕಾಂಗ್ರೆಸ್; ಬೇರೆಯದ್ದೇ ಆರೋಪ ಮಾಡಿದ ನಾಯಕರು..!
Advertisment
  • ಸಮೀಕ್ಷೆ ಉಲ್ಟಾ, ಹರಿಯಾಣದಲ್ಲಿ ಬಿಜೆಪಿಗೆ ಜಯ
  • 3ನೇ ಬಾರಿಗೆ ಗೆಲುವು ಬೆನ್ನಲ್ಲೇ ಜನರಿಗೆ ಮೋದಿ ಧನ್ಯವಾದ
  • ಹಾಲಿ ಸಿಎಂ ನಯಾಬ್ ಸಿಂಗ್ ಸೈನಿಗೆ ಮತ್ತೆ ಸಿಎಂ ಪಟ್ಟ ಸಾಧ್ಯತೆ

ಹರಿಯಾಣದಲ್ಲಿ ಸಮೀಕ್ಷೆಗಳನ್ನೇ ತಲೆಕೆಳಗಾಗಿಸಿ ನಿರೀಕ್ಷೆ ಮೀರಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಹ್ಯಾಟ್ರಿಕ್​ ಗೆಲುವು ಸಾಧಿಸಿದೆ. ಆದ್ರೆ ಸಮೀಕ್ಷೆಯನ್ನ ನಂಬಿದ್ದ ಕಾಂಗ್ರೆಸ್​ಗೆ ಬಿಗ್ ಶಾಕ್ ಆಗಿದೆ. ಬೆನ್ನಲ್ಲೇ ಬಿಜೆಪಿ ಮೋಸದಿಂದ ಗೆಲುವು ಸಾಧಿಸಿದೆ ಎಂದು ಆರೋಪಿಸಿದೆ.

ಹರಿಯಾಣ ಸೋಲು ಒಪ್ಪಿಕೊಳ್ಳದ ಕಾಂಗ್ರೆಸ್

ಹರಿಯಾಣದಲ್ಲಿನ ಚುನಾವಣಾ ಫಲಿತಾಂಶಗಳು ಅನಿರೀಕ್ಷಿತ ಮತ್ತು ಆಘಾತಕಾರಿ. ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌, ಹರಿಯಾಣದ ಫಲಿತಾಂಶಗಳು ಸಂಪೂರ್ಣವಾಗಿ ಅನಿರೀಕ್ಷಿತ, ಆಶ್ಚರ್ಯಕರವಾಗಿದೆ. ಇದು ವಾಸ್ತವಕ್ಕೆ ವಿರುದ್ಧವಾಗಿದೆ ಅಂತ ಹೇಳಿದ್ದಾರೆ.

ಇದನ್ನೂ ಓದಿ:ಗೆಲ್ಲೋ ಮುಂಚೆ ಜಿಲೇಬಿ ಹಂಚಿ ಸಂಭ್ರಮಿಸಿದ್ದ ಕಾಂಗ್ರೆಸ್​ಗೆ ಹೀನಾಯ ಸೋಲು; ರಾಹುಲ್​ ಗಾಂಧಿ ಫುಲ್​ ಟ್ರೋಲ್​​

ಎಲ್ಲರ ನಿರೀಕ್ಷೆ ಇತ್ತು.. ಕಾಂಗ್ರೆಸ್​ ಹರಿಯಾಣದಲ್ಲಿ ಗೆದ್ದೇ ಗೆಲ್ಲುತ್ತೆ ಎಂದು. ನಾನು ಇಷ್ಟನ್ನ ಮಾತ್ರ ಹೇಳುತ್ತೇನೆ.. ಕಾಂಗ್ರೆಸ್ ಪಕ್ಷವನ್ನ ಸೋಲುವಂತೆ ಮಾಡಲಾಗಿದೆ. ಕಾಂಗ್ರೆಸ್ ಸೋತಿಲ್ಲ. ಹರಿಯಾಣದಲ್ಲಿ ಕಾಂಗ್ರೆಸ್ ಸೋಲುವಂತೆ ಮಾಡಲಾಗಿದೆ-ಜೈರಾಮ್‌ ರಮೇಶ್‌, ಕಾಂಗ್ರೆಸ್ ಮುಖಂಡ

ಜನರಿಗೆ ಮೋದಿ ಧನ್ಯವಾದ
ಬಿಜೆಪಿಗೆ ಸತತ ಮೂರನೇ ಬಾರಿಗೆ ಅಧಿಕಾರ ನೀಡಿ ಹರಿಯಾಣ ರಾಜ್ಯ ಇತಿಹಾಸ ಬರೆದಿದೆ ಎಂದು ಪ್ರಧಾನಿ ಮೋದಿ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿಜಯೋತ್ಸವದ ವೇಳೆ ಮಾತನಾಡಿದ ಮೋದಿ, ಸುಳ್ಳಿನ ರಾಶಿಯ ಮೇಲೆ ಅಭಿವೃದ್ಧಿ ಗ್ಯಾರಂಟಿ ಹೊರೆಯಾಯಿತು ಎಂದಿದ್ದಾರೆ.

ಜಿಲೇಬಿ ಕೊಟ್ಟು ರಾಹುಲ್​ ಟ್ರೋಲ್​ ಮಾಡಿ ಬಿಜೆಪಿಗರು
ಹರಿಯಾಣದಲ್ಲಿ ಜಿಲೇಬಿ ವಿಚಾರವಿಟ್ಟು ಬಿಜೆಪಿ ವಿರುದ್ಧ ಹರಿಹಾಯ್ದಿದ್ದ ರಾಹುಲ್ ಗಾಂಧಿಗೆ ಅದೇ ಜಿಲೇಬಿಯನ್ನೇ ಬಳಸಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಪಕ್ಷದ ಗೆಲುವಿನ ಸಿಹಿಯಾಗಿ ಅದೇ ಜಿಲೇಬಿಗಳನ್ನ ಕಾಂಗ್ರೆಸ್ ಕಚೇರಿಗೆ ತಲುಪಿಸಿದ್ದಾರೆ.
ಒಟ್ಟಾರೆ.. ಕಾಂಗ್ರೆಸ್​ ಗ್ಯಾರಂಟಿಗಳಿಗೆ ಮಾರು ಹೋಗದೆ ಹರಿಯಾಣ ಜನ ಬಿಜೆಪಿ ಕೈ ಹಿಡಿದಿದ್ದಾರೆ.. ಹರಿಯಾಣದಲ್ಲಿ ಆಡಳಿತ ವಿರೋಧಿ ಅಲೆ ಸೇರಿದಂತೆ ಎದುರಾಗಿದ್ದ ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ:ರೇಣುಕಾ ಮರ್ಮಾಂಗದ ಫೋಟೋ, ದರ್ಶನ್ ಪ್ಯಾಂಟ್ ಬಿಚ್ಚು ಅಂತ ಹೇಳಿದ್ದಕ್ಕೆ ಸಾಕ್ಷಿ ಇದೆ; SPP ಪ್ರಸನ್ನ ಕುಮಾರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment