/newsfirstlive-kannada/media/post_attachments/wp-content/uploads/2024/12/DIVORCE-PARTY.jpg)
ಇತ್ತೀಚೆಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಡಿವೋರ್ಸ್ ಪಾರ್ಟಿಗಳು ಹೆಚ್ಚಾಗುತ್ತಿವೆ. ಈಗ ಅದೊಂದು ಟ್ರೆಂಡೇ ಆಗಿ ಹೋಗಿದೆ. ವಿಚ್ಛೇಧನ ಪಡೆಯುವವರು ಮದುವೆಯಲ್ಲಿ ಮಾಡಿದಂತೆ ಅಲಂಕಾರ ಮಾಡಿಕೊಂಡು ಕೇಕ್ ಕಟ್ ಮಾಡಿ. ಕೊನೆಗೆ ಪಾರ್ಟಿ ಮಾಡಿ ಮಜವಾಗಿ ವಿದಾಯ ಹೇಳುವ ಒಂದು ನೂತನ ಸಂಸ್ಕೃತಿ ಇತ್ತೀಚೆಗೆ ಪ್ರಸಿದ್ಧ ರಾಷ್ಟ್ರಗಳಲ್ಲಿ ಕಾಲಿಟ್ಟಿದೆ. ಈಗ ಹರಿಯಾಣದಲ್ಲಿಯೂ ಕೂಡ ಅಂತಹುದೇ ಒಂದು ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯ ಪ್ರತಿಮೆ ಪಕ್ಕ ನಿಂತು ಹೆಗಲಿನ ಮೇಲೆ ಕೈ ಹಾಕಿಕೊಂಡು ಕೇಕ್​ ಎದುರಿಟ್ಟುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾನೆ. ಹಿಂದೆ ಬ್ಯಾನರ್​ನಲ್ಲಿ ಮದುವೆಯಾದ ದಿನಾಂಕ ಹಾಗೂ ಡಿವೋರ್ಸ್ ಮಾಡಿಕೊಳ್ಳುವ ದಿನಾಂಕವನ್ನು ಬರೆಯಲಾಗಿದೆ ಜೊತೆಗೆ ಮದುವೆಯ ಫೋಟೋ ಕೂಡ ಅಲ್ಲಿ ಕಂಡು ಬಂದಿದೆ.
ಇದನ್ನೂ ಓದಿ:ವಿಶ್ವದ ಅತ್ಯುತ್ತಮ ಆಹಾರ ಪ್ರದೇಶಗಳ ಪಟ್ಟಿ​; ಭಾರತದ ಈ 6 ಪ್ರಮುಖ ನಗರಗಳಿಗೆ ಸ್ಥಾನ
ಈ ಒಂದು ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮನ್ಜೀತ್ ಎಂಬ ವ್ಯಕ್ತಿ 2020ರಲ್ಲಿ ಕೋಮಲಾ ಎನ್ನುವ ಯುವತಿಯ ಜೊತೆ ಮದುವೆ ಮಾಡಿಕೊಂಡಿದ್ದ. ಆದರೆ ದುರಾದೃಷ್ಟವಷಾತ್ ಅವರ ಮದುವೆ ವಿಚ್ಛೇಧನದೊಂದಿಗೆ ಕೊನೆಯಾಯ್ತು. ಅವರ ದಾಂಪತ್ಯಕ್ಕೊಂದು ಸಮಾರೋಪ ಸಮಾರಂಭ ಏರ್ಪಡಿಸಿದ ಮನ್ಜಿತ್ ಡಿವೋರ್ಸ್ ಪಾರ್ಟಿಯನ್ನು ಆಯೋಜಿಸಿದ್ದ. ಅದು ಕೂಡ ವಿಭಿನ್ನವಾಗಿ. ಪತ್ನಿಯನ್ನು ಹೋಲುವ ಪ್ರತಿಮೆಯನ್ನು ಮಾಡಿಸಿ. ವಿಭಿನ್ನವಾದ ಬ್ಯಾನರ್ ರೆಡಿ ಮಾಡಿ ಅದರಲ್ಲಿ ಮದುವೆಯ ದಿನಾಂಕ ಮತ್ತು ಡಿವೋರ್ಸ್ ಆಗುತ್ತಿರುವ ದಿನಾಂಕ ನಮೂದಿಸಿ ಅದರಲ್ಲಿ ತನ್ನ ಮದುವೆಯ ಫೋಟೋ ಕೂಡ ಹಾಕಿದ್ದಾನೆ. ಪತ್ನಿಯ ಪ್ರತಿಮೆಯ ಜೊತೆ ನಿಂತು ಫೋಟೋ ತೆಗೆಸಿಕೊಂಡು ಅದನ್ನು ಆನ್​ಲೈನ್​ನಲ್ಲಿ ಅಪ್​ಲೋಡ್​ ಮಾಡಿದ್ದು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ.
View this post on Instagram
ಇದನ್ನೂ ಓದಿ: 99 ಪ್ರತಿಶತ ಪುರುಷರದ್ದೇ ತಪ್ಪು -ಬೆಂಗಳೂರು ಟೆಕ್ಕಿ ಕೇಸ್​ಗೆ ಕಂಗನಾ ಟೀಕೆ
ಬಗೆ ಬಗೆಯಾದ ಪ್ರತಿಕ್ರಿಯೆಗಳು ಈ ಒಂದು ವಿಡಿಯೋಗೆ ಇನ್​ಸ್ಟಾಗ್ರಾಮ್​ನಲ್ಲಿ ಹರಿದು ಬರುತ್ತಿವೆ. ವಿಪರೀತ ಹತಾಶೆಗಳು ಮನುಷ್ಯನನ್ನು ಈ ವಿಪರೀತಕ್ಕೆ ನೂಕುತ್ತವೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಹರಿಯಾಣದಲ್ಲಿ ನಡೆದ ಈ ಒಂದು ಘಟನೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us