/newsfirstlive-kannada/media/post_attachments/wp-content/uploads/2025/06/Haryana_Wife_2.jpg)
ಚಂಡೀಗಢ: ಹೆಂಡತಿ ಹಾಗೂ ಆಕೆಯ ಪ್ರಿಯಕರ ಕಾನ್ಸ್ಟೆಬಲ್ನ ಕಿರುಕುಳ ತಾಳಲಾರದೇ ಗಂಡ ನೇಣು ಬಿಗಿದುಕೊಂಡು ಜೀವ ಬಿಟ್ಟಿರುವ ಘಟನೆ ಹರಿಯಾಣದ ರೋಹ್ಟಕ್ನ ದೊಭಾ ಗ್ರಾಮದಲ್ಲಿ ನಡೆದಿದೆ. ಜೀವ ಕಳೆದುಕೊಳ್ಳುವ ಮೊದಲು ತನ್ನ ಹೆಂಡತಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದಾನೆ ಎಂದು ಹೇಳಲಾಗಿದೆ.
ಮಗನ್ ಪ್ರಾಣ ಕಳೆದುಕೊಂಡಿರುವ ವ್ಯಕ್ತಿ. ಮಗನ್ ಮತ್ತು ದಿವ್ಯಾ ದಂಪತಿಗೆ ಒಂದು ಗಂಡು ಮಗುವಿದೆ. ಹೆಂಡತಿ ದಿವ್ಯಾ ಹಾಗೂ ಈಕೆಯ ಪ್ರಿಯಕರ ಮಹಾರಾಷ್ಟ್ರ ಮೂಲದ ಕಾನ್ಸ್ಟೆಬಲ್ ದೀಪಕ್ ಆರೋಪಿಗಳು ಆಗಿದ್ದಾರೆ. ಮಗನ್ ಪ್ರಾಣ ಕಳೆದುಕೊಳ್ಳುವಾಗ ಮಾಡಿದ್ದ ವಿಡಿಯೋ ವೈರಲ್ ಆದ್ಮೇಲೆ ಅವರ ಕುಟುಂಬಸ್ಥರು ಹುಡುಕಲು ಹೋದಾಗ ಅದಗಾಲೇ ಅವರು ಉಸಿರು ನಿಂತು ಹೋಗಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಅಮಾನವೀಯ ಘಟನೆ.. ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ನೊಂದು ಜೀವ ಬಿಟ್ಟ ವೃದ್ಧ ದಂಪತಿ
ತಂದೆಯ ಜೀವ ತಗೆದು ಅವರ ಆಸ್ತಿಗಳನ್ನು ಮಾರಾಟ ಮಾಡಿ, 5 ಲಕ್ಷ ರೂಪಾಯಿ ಕೊಡು ಎಂದು ಹೆಂಡತಿ ದಿವ್ಯಾ ಕಿರುಕುಳ ನೀಡಿದ್ದಳು. ಈ ದುಡ್ಡನ್ನು ತನ್ನ ಪ್ರಿಯಕರ ಪೊಲೀಸ್ ಕಾನ್ಸ್ಟೆಬಲ್ ಆಗಿದ್ದರಿಂದ ಲಂಚ ಕೊಟ್ಟು ಹುದ್ದೆಯಲ್ಲಿ ಬಡ್ತಿ ಪಡೆಯಲು ಯೋಜನೆ ರೂಪಿಸಿದ್ದರು. ಇಷ್ಟೇ ಅಲ್ಲದೇ, ಇಬ್ಬರು ಮುಂಬೈನಲ್ಲಿ ನೆಲೆಸಲು ಈಗಾಗಲೇ ಯೋಜನೆ ರೂಪಿಸಿದ್ದರು ಎಂದು ವಿಡಿಯೋದಲ್ಲಿ ಮಗನ್ ಆರೋಪಿಸಿದ್ದಾನೆ.
ಗೋದಿ ಮಾರಾಟ ಮಾಡಿದರಿಂದ ಬಂದ ಹಣದಲ್ಲಿ ಹೆಂಡತಿಗೆ 5 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದೇನೆ. ಜೊತೆಗೆ ನನ್ನ ಬ್ರೇಸ್ಲೇಟ್ ಮಾರಾಟ ಮಾಡಿ 2 ಲಕ್ಷ ರೂಪಾಯಿ ನೀಡಿದ್ದೇನೆ. ಇಷ್ಟೇಲ್ಲಾ ಕೊಟ್ಟರೂ ಇನ್ನು ಒಂದೂವರೆ ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದರು. ನಾನು ಹಣ ಕೊಟ್ಟಿರುವ ಬಗ್ಗೆ ಮನೆಯಲ್ಲಿ ದಾಖಲೆಗಳು ಇವೆ. ಯಾವುದೇ ಕಾರಣಕ್ಕೂ ನಾನು ನನ್ನ ತಂದೆಯ ಜೀವ ತೆಗೆಯಲು ಸಾಧ್ಯವಿಲ್ಲ. ಅದಕ್ಕಾಗಿ ನನ್ನ ಪ್ರಾಣವನ್ನೇ ತೆಗೆದುಕೊಳ್ಳುತ್ತಿದ್ದೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ