newsfirstkannada.com

ಹರಿಯಾಣದಲ್ಲೂ ಹಿಂಸಾಚಾರ.. ಗುಂಡಿನ ದಾಳಿಗೆ 2 ಬಲಿ, ವಾಹನಗಳಿಗೆ ಬೆಂಕಿ, ನಿಷೇಧಾಜ್ಞೆ ಜಾರಿ, 3 ದಿನ ಇಂಟರ್ನೆಟ್ ಸೇವೆ ಸ್ಥಗಿತ

Share :

Published August 1, 2023 at 7:12am

    ಬೆಂಕಿಯಲ್ಲಿ ಧಗಧಗಿಸುತ್ತಿರೋ ರಸ್ತೆಯಲ್ಲಿ ನಿಂತ ವಾಹನಗಳು

    ಮೇವಾತ್​ನಲ್ಲಿ ಮೆರವಣಿಗೆ ಬರುತ್ತಿದ್ದವರ ಮೇಲೆ ಕಲ್ಲೆಸೆತ

    ರಸ್ತೆಯುದ್ದಕ್ಕೂ ಕಾರುಗಳು ಧಗಧಗ.. ದಟ್ಟನೆಯ ಹೊಗೆ

ಮಣಿಪುರ ಹಿಂಸಾಚಾರ ಘಟನೆಗಳು ಮಾಸುವ ಮುನ್ನವೇ ಮತ್ತೊಂದು ಕೋಮು ದಳ್ಳುರಿಗೆ ಭಾರತ ಸಾಕ್ಷಿಯಾಗಿದೆ. ಹರಿಯ ಅರಣ್ಯ ಭೂಮಿ ಹರಿಯಾಣದಲ್ಲಿ ಕೋಮು ಜ್ವಾಲೆ ಧಗಧಗಿಸಿದೆ. ಕಿಡಿಗೇಡಿಗಳ ದ್ವೇಷದ ಜ್ವಾಲೆಗೆ ಬಿಜೆಪಿ ಆಡಳಿತದ ರಾಜ್ಯದಲ್ಲಿ ಹಿಂಸಾಚಾರ ತಾರಕಕ್ಕೇರಿದೆ.

ಕಟ್ಟಡ ಮೇಲ್ಛಾವಣಿಯಿಂದ ಯುವಕರ ಕಲ್ಲು ತೂರಾಟ

ಹರಿಯಾಣ. ಅಂದ್ರೆ ಹರಿಯ ಅರಣ್ಯ ಭೂಮಿ. ಆದ್ರೆ, ನಿನ್ನೆ ಇದೇ ಹರಿಯಾಣ ಭೂಮಿಯಲ್ಲಿ ಹೃದಯ ವಿದ್ರಾವಕ ಘಟನೆಗಳು. ಹಿಂಸಾಚಾರ ಜನರ ಮನಸ್ಸನ್ನು ಛಿದ್ರಗೊಳಿಸಿ. ಜನರ ಎದೆಯನ್ನು ನಡುಗಿಸಿ. ಕೋಮುವಾದಿ ಆಕ್ರಮಣವನ್ನು ಖಂಡಿಸುವಷ್ಟರ ಮಟ್ಟಿಗೆ ಬೆಂಕಿ ಧಗಧಗಿಸಿದೆ. ದ್ವೇಷದ ಜ್ವಾಲೆಯಲ್ಲಿ ಹರಿಯಾಣ ರಾಜ್ಯದ ಗುರುಗ್ರಾಮ್‌ ಬಳಿ ಇರುವ ನುಹ್‌ ಪಟ್ಟಣದಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿದೆ.

ಬೆಂಕಿಯಲ್ಲಿ ಸಂಪೂರ್ಣ ಸುಟ್ಟು ಕರಕಲಾದ ವಾಹನಗಳು

ಹರಿಯಾಣದ ಗುರುಗ್ರಾಮ್‌ ಬಳಿ ಇರುವ ನುಹ್‌ ಪಟ್ಟಣದಲ್ಲಿ ಎರಡು ಕೋಮುಗಳ ನಡುವೆ ಹಿಂಸಾಚಾರ ಭುಗಿಲೆದ್ದಿದೆ. ವಿಶ್ವ ಹಿಂದೂ ಪರಿಷತ್ ಮೆರವಣಿಗೆಯನ್ನು ತಡೆಯಲು ಯುವಕರ ಗುಂಪೊಂದು ಯತ್ನಿಸಿತು. ಇದು ಹಿಂಸಾಚಾರಕ್ಕೆ ಮುಖ್ಯ ಕಾರಣವಾಗಿದ್ದು, ಗಲಭೆಯಲ್ಲಿ ಇಬ್ಬರು ಹೋಮ್‌ ಗಾರ್ಡ್‌ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡುವ ಹಂತಕ್ಕೂ ತಲುಪಿದೆ. ಹಿಂಸಾಚಾರದ ಸಮಯದಲ್ಲಿ ಕಲ್ಲು ತೂರಾಟ ನಡೆಸಲಾಗಿದೆ. ಕಾರು ಹಾಗೂ ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ನುಹ್‌ ಹಿಂಸಾಚಾರವು ಗುರುಗ್ರಾಮ, ಪರೀದಾಬಾದ್‌ ಪಲ್ವಾಲ್‌ಗಳಿಗೆ ಹರಡಿಕೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 ನಿಷೇಧಾಜ್ಞೆ ಜಾರಿ.. ಇಂಟರ್ನೆಟ್ ಸೇವೆ ಸ್ಥಗಿತ

ಇನ್ನೂ ಕಿಡಿಗೇಡಿಗಳನ್ನ ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಈ ವೇಳೆ ನುಹ್‌ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಹೀಗಾಗಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಕೋಮು ಗಲಭೆಯಾದ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ನಿಯಂತ್ರಿಸಲು ಆಗಸ್ಟ್‌ 2ರವರೆಗೆ ಅಂದ್ರೆ ನಾಳೆಯವರೆಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ  ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೇ ನೆರೆಯ ಜಿಲ್ಲೆಗಳಿಂದ ಸರ್ಕಾರ ಹೆಚ್ಚುವರಿ ಪಡೆಗಳನ್ನು ರವಾನಿಸಿದೆ.

ಬಂದೋಬಸ್ತ್​ಗೆ ಬಂದಿದ್ದ ಪೊಲೀಸ್​ ವಾಹನಗಳಿಗೂ ಬೆಂಕಿ

ವಿಶ್ವ ಹಿಂದೂ ಪರಿಷತ್​ನ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯನ್ನು ನುಹ್‌ನ ಖೇಡ್ಲಾ ಮೋಡ್ ಬಳಿ ಯುವಕರ ಗುಂಪೊಂದು ತಡೆದಿದೆ. ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿ. ಮೆರವಣಿಗೆಯಲ್ಲಿ ಭಾಗಿಯಾಗಿದ್ದವರ ಕಾರುಗಳಿಗೆ ಹಾಗೂ ಬಂದೋಬಸ್ತ್​ಗೆ ಬಂದಿದ್ದ ಪೊಲೀಸ್​ ವಾಹನಗಳಿಗೂ ಬೆಂಕಿ ಹಚ್ಚಿ, ಹಾನಿಯುಂಟು ಮಾಡಿದ್ದಾರೆ. ಇನ್ನೂ ಘರ್ಷಣೆ ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಪ್ರಯೋಗಿಸಿ ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯ್ರಂತ್ರಣಕ್ಕೆ ತಂದಿದ್ದಾರೆ. ಘಟನೆಯಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದಾರೆ.

ಉದ್ವಿಗ್ನತೆಯ ಗಲಭೆಗೆ ಕಾರಣ ಆಕ್ಷೇಪಾರ್ಹ ವಿಡಿಯೋ ಪೋಸ್ಟ್​

ಇನ್ನು ಬಲ್ಲಭಗಢದಲ್ಲಿ ಬಜರಂಗದಳದ ಕಾರ್ಯಕರ್ತನೊಬ್ಬ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾನೆ. ಯಾತ್ರೆಯ ಸಮಯದಲ್ಲಿ ಮೇವಾತ್‌ಗೆ ಬರೋದಾಗಿ ಬಹಿರಂಗವಾಗಿ ಸವಾಲು ಹಾಕಿದ್ದನಂತೆ. ಹೀಗಾಗಿ ಪ್ರತೀಕಾರ ತೀರಿಸಿಕೊಳ್ಳಲು ಹೀಗೆ ಗಲಭೆ ಎಬ್ಬಿಸಿದ್ದಾರೆ ಎನ್ನಲಾಗಿದೆ.

ತಪ್ಪಿತಸ್ಥರನ್ನ ಬಿಡಲ್ಲ, ಕಠಿಣ ಕ್ರಮ ಎಂದ ಸಿಎಂ ಲಾಲ್ ಖಟ್ಟರ್

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಹಿಂಸಾಚಾರಕ್ಕೆ ಕಾರಣವಾಗಿರೋ ತಪ್ಪಿತಸ್ಥರನ್ನು ಬಿಡುವುದಿಲ್ಲ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಅದೇನೆ ಇರಲಿ ನಿನ್ನೆ ನಡೆದ ಕೋಮು ಗಲಭೆಯಿಂದ ಹರಿಯಾಣ ಹೊತ್ತಿ ಉರಿದಿದೆ. ಇಲ್ಲಿನ ಒಂದೊಂದು ದೃಶ್ಯವೂ ಮತ್ತೊಂದು ಮಣಿಪುರದಂತೆ ಕಂಡಿದ್ದಂತೂ ಸತ್ಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹರಿಯಾಣದಲ್ಲೂ ಹಿಂಸಾಚಾರ.. ಗುಂಡಿನ ದಾಳಿಗೆ 2 ಬಲಿ, ವಾಹನಗಳಿಗೆ ಬೆಂಕಿ, ನಿಷೇಧಾಜ್ಞೆ ಜಾರಿ, 3 ದಿನ ಇಂಟರ್ನೆಟ್ ಸೇವೆ ಸ್ಥಗಿತ

https://newsfirstlive.com/wp-content/uploads/2023/08/hariyana.jpg

Load More