newsfirstkannada.com

ಹಾಸನ ವಿಡಿಯೋ ಕೇಸ್; SIT ವಿಚಾರಣೆಗೆ ಹಾಜರಾಗದ ಹೆಚ್‌.ಡಿ ರೇವಣ್ಣ ಮುಂದಿನ ಪ್ಲಾನ್ ಏನು?

Share :

Published May 2, 2024 at 5:47pm

    ಇಂದು ತನಿಖೆಗೆ ಹಾಜರಾಗಲು ನೋಟಿಸ್ ನೀಡಿದ್ದ ಎಸ್ಐಟಿ ಅಧಿಕಾರಿಗಳು

    ಪ್ರಜ್ವಲ್ ರೇವಣ್ಣ ಹಾಗೂ ಹೆಚ್.ಡಿ ರೇವಣ್ಣ ವಿರುದ್ದ ದಾಖಲಾಗಿದ್ದ FIR

    ರಾಜ್ಯಾದ್ಯಂತ ಹಲ್​ಚಲ್ ಎಬ್ಬಿಸಿರುವ ಹಾಸನ ಅಶ್ಲೀಲ ವಿಡಿಯೋ ಕೇಸ್

ಹಾಸನ ಅಶ್ಲೀಲ ವಿಡಿಯೋ ಹಾಗೂ ಪೆನ್ ಡ್ರೈವ್ ಕೇಸ್​ ಹೆಚ್‌.ಡಿ ರೇವಣ್ಣ ಅವರ ಫ್ಯಾಮಿಲಿಗೆ ಸಂಕಷ್ಟ ತಂದಿದೆ. ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಹೆಚ್.ಡಿ ರೇವಣ್ಣ ಅವರು ಇಂದು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಕೇಸ್ ​ಸಂಬಂಧ ಹೆಚ್​.ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣಗೆ ನಿನ್ನೆಯಷ್ಟೇ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ರಿಲೀಸ್​ ಮಾಡಿದ ಕಾರ್ತಿಕ್​ ಮಲೇಷ್ಯಾಗೆ ಹೋದ್ರಾ? HDK ಬಿಚ್ಚಿಟ್ಟ ಸ್ಫೋಟಕ ಮಾಹಿತಿ

ಅಶ್ಲೀಲ ವಿಡಿಯೋ ಕೇಸ್​ನಲ್ಲಿ ಸಂಸದ ಪ್ರಜ್ವಲ್​ ಮತ್ತು ರೇವಣ್ಣ ವಿರುದ್ಧ ಎಫ್​ಐಆರ್​ ದಾಖಲಾಗ್ತಿದ್ದಂತೆ ತನಿಖೆ ಚುರುಕುಗೊಂಡಿದೆ. ಸದ್ಯ ಪ್ರಕರಣವನ್ನ ಕೈಗೆತ್ತಿಕೊಂಡಿರೋ ಎಸ್​ಐಟಿ ತಂಡ ಕೇಸ್​ ಬೇಧಿಸಲು ತನಿಖೆಯ ವೇಗವನ್ನ ಹೆಚ್ಚಿಸಿದೆ. ಆದರೆ ಈ ಮಧ್ಯೆ ಹಾಸನ ಆಶ್ಲೀಲ ವಿಡಿಯೋ ಕೇಸ್​ನಲ್ಲಿ ಮೊದಲ ಆರೋಪಿಯಾಗಿರೋ ಹೆಚ್.ಡಿ.ರೇವಣ್ಣ ಅವರು ಇಂದು ಎಸ್ಐಟಿ ಮುಂದೆ ಹಾಜರಾಗಲು ನೋಟಿಸ್ ನೀಡಲಾಗಿತ್ತು. ಆದರೆ ವಿಚಾರಣೆಗೆ ಹಾಜರಾಗದೆ  ಹೆಚ್.ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಹೆಚ್​.ಡಿ ರೇವಣ್ಣ ಅವರು ತಮ್ಮ ಕುಟುಂಬಕ್ಕೆ ಎದುರಾದ ಸಂಕಷ್ಟದಿಂದ ಪಾರು ಮಾಡುವಂತೆ ದೇವರ ಮೊರೆ ಹೋಗಿದ್ದರು. ಬನಶಂಕರಿಯ ಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದ ರೇವಣ್ಣ ದಂಪತಿ ಸಮೇತ ಹೊಳೇನರಸೀಪುರದ ಮನೆಯಲ್ಲಿ ಹೋಮ ಹವನ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಬೆಂಗಳೂರಿನ ಸೆಷನ್ಸ್ ಕೋರ್ಟ್​ಗೆ ಇಂದು ಹೆಚ್‌.ಡಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ವಿಡಿಯೋ ಕೇಸ್; SIT ವಿಚಾರಣೆಗೆ ಹಾಜರಾಗದ ಹೆಚ್‌.ಡಿ ರೇವಣ್ಣ ಮುಂದಿನ ಪ್ಲಾನ್ ಏನು?

https://newsfirstlive.com/wp-content/uploads/2024/04/dh-revanna.jpg

Load More