newsfirstkannada.com

ಪ್ರೀತಿಸಿಯೂ ಟಾರ್ಚರ್ ಕೊಟ್ಟಳಂತೆ.. ನೊಂದು ಬದುಕನ್ನೇ ತ್ಯಜಿಸಿದ ನವವಿವಾಹಿತ

Share :

Published August 2, 2023 at 11:14am

Update August 2, 2023 at 2:25pm

  ಇಲ್ಲಿ ಕೇಸ್​ ಉಲ್ಟಾ, ಪತ್ನಿ ಕಾಟಕ್ಕೆ ಪತಿ ಸಾವು

  ಪ್ರೀತಿಸಿ ಮದುವೆಯಾದರೂ ಜೊತೆಯಾಗಿರಲಿಲ್ಲ ಪತ್ನಿ

  ವರದಕ್ಷಿಣೆ ಆರೋಪ, ಪತಿಯನ್ನು ಜೈಲಿಗೆ ಕಳುಹಿಸಿದ್ದ ಪತ್ನಿ

ಹಾಸನ: ಪತ್ನಿ, ಆಕೆಯ ಪೋಷಕರ ಕಿರುಕುಳದಿಂದ ನವ ವಿವಾಹಿತ ಮನನೊಂದು ಸಾವಿಗೆ ಶರಣಾದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಕರಿಯಪ್ಪನಗುಡಿ ಗ್ರಾಮದಲ್ಲಿ ನಡೆದಿದೆ.

ಉದಯಪುರ ಗ್ರಾಮದ ನವ ವಿವಾಹಿತ ಕಿರಣ್ ಬಿ.ಬಿ (26) ಮೃತ ದುರ್ದೈವಿ. ದಂಡಿಗನಹಳ್ಳಿ ಹೋಬಳಿಯ ವಗರಹಳ್ಳಿ ಗ್ರಾಮದ ಸ್ಪಂದನಾ (24) ಎನ್ನುವ ಯುವತಿಯನ್ನು ಕಿರಣ್ ಪ್ರೀತಿಸಿದ್ದ. ಕಳೆದ ಫೆಬ್ರವರಿಯಲ್ಲಿ ಆಕೆಯನ್ನು ಮದುವೆ ಕೂಡ ಆಗಿದ್ದ.  ಜೀವನಕ್ಕಾಗಿ ಉದಯಪುರದಲ್ಲೇ ಬೇಕರಿ ನಡೆಸುತ್ತಿದ್ದ. ಆದ್ರೆ ಮದುವೆ ನಂತರ ಕಿರಣ್​ ಜೊತೆಯಾಗಿ ಪತ್ನಿ ಸಂಸಾರ ನಡೆಸಿರಲಿಲ್ಲ ಎನ್ನಲಾಗಿದೆ.

ಮೃತ ಕಿರಣ್ ಬಿ.ಬಿ

ಪತ್ನಿಯ ತಂದೆ ವಾಸು, ತಾಯಿ ಗೀತಾ, ಅಜ್ಜಿ ರತ್ನಮ್ಮ ಅವರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಕಿರಣ್ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದ ಪತ್ನಿ ಜೈಲಿಗೆ ಕೂಡ ಹಾಕಿಸಿದ್ದಳು. ಇಷ್ಟಾದ ಮೇಲೂ ಕೆಲ ದಿನಗಳ ಹಿಂದೆ ಆಕೆಯ ಪೋಷಕರು ಬೇಕರಿ ಬಳಿಗೆ ಬಂದು ಜಗಳವಾಡಿದ್ದರು. ಹೀಗಾಗಿ ಮನನೊಂದ ಕಿರಣ್​ ಸಾವಿಗೆ ಶರಣಾಗಿದ್ದಾನೆ. ಈ ಬಗ್ಗೆ ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿಸಿಯೂ ಟಾರ್ಚರ್ ಕೊಟ್ಟಳಂತೆ.. ನೊಂದು ಬದುಕನ್ನೇ ತ್ಯಜಿಸಿದ ನವವಿವಾಹಿತ

https://newsfirstlive.com/wp-content/uploads/2023/08/HASANA_YOUTH_DIE.jpg

Load More