newsfirstkannada.com

ಮೊಮ್ಮಗನನ್ನೇ ಉಚ್ಛಾಟನೆ ಮಾಡಿದ ದೊಡ್ಡಗೌಡ್ರು; ಪ್ರಜ್ವಲ್ ರೇವಣ್ಣ ರಾಜಕೀಯ ಭವಿಷ್ಯ ಖತಂ?

Share :

Published April 29, 2024 at 9:41pm

Update April 29, 2024 at 9:43pm

  ಮೊಮ್ಮಗನನ್ನೇ ಪಕ್ಷದಿಂದ ಉಚ್ಛಾಟನೆ ಮಾಡಿದ ಹೆಚ್​.ಡಿ ದೇವೇಗೌಡರು

  ಪಕ್ಷದ ಉದಯೋನ್ಮುಖ ನಾಯಕ ಅಂತಾನೇ ಗುರುತಿಸಿಕೊಂಡಿದ್ದ ಪ್ರಜ್ವಲ್

  ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಹಾಸನ ಅಶ್ಲೀಲ ವಿಡಿಯೋ ಕೇಸ್

ಹಾಸನ ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣದಲ್ಲಿ ಕೊನೆಗೂ ಸಂಸದ ಪ್ರಜ್ವಲ್ ರೇವಣ್ಣರನ್ನು ಜೆಡಿಎಸ್ ಉಚ್ಛಾಟನೆ ಮಾಡಿದೆ. ಪ್ರಜ್ವಲ್ ಉಚ್ಛಾಟನೆ ಮಾಡುವಂತೆ ಸ್ವಪಕ್ಷೀಯರಿಂದಲೇ ಒತ್ತಡ ಕೇಳಿ ಬಂದ ಬೆನ್ನಲ್ಲೇ ಮುಜುಗರ ತಪ್ಪಿಸಿಕೊಳ್ಳಲು ಜೆಡಿಎಸ್ ವರಿಷ್ಠ ದೇವೇಗೌಡರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಜೆಡಿಎಸ್ ಯುವನಾಯಕ. ಒಂದು ಬಾರಿ ಸಂಸದನಾಗಿ ಆಯ್ಕೆಯಾಗಿದ್ದ ಪ್ರಜ್ವಲ್ 2ನೇ ಬಾರಿಗೆ ಆಯ್ಕೆ ಅಖಾಡದಲ್ಲಿದ್ದಾರೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್.. ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಡಿಸಿ ಸಿ. ಸತ್ಯಭಾಮ!

ಹೆಚ್.ಡಿ.ದೇವೇಗೌಡರ ತರುವಾಯ ಪಕ್ಷದ ಉದಯೋನ್ಮುಖ ನಾಯಕ ಅಂತನೇ ಗುರುತಿಸಿಕೊಂಡಿದ್ದ ಪ್ರಜ್ವಲ್ ಮುಖಕ್ಕೆ ಅಶ್ಲೀಲ ಮಸಿ ಮೆತ್ತಿಕೊಂಡಿದೆ. ಹಾಸನ ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣಗೆ ಜೆಡಿಎಸ್​ ಉಚ್ಛಾಟನೆ ಶಿಕ್ಷೆ ನೀಡಿದೆ. ಕಾಂಗ್ರೆಸ್ ನಾಯಕರು ಹಾಗೂ ಸ್ವಪಕ್ಷೀಯರಿಂದಲೂ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮುಜುಗರ ತಪ್ಪಿಸಿಕೊಳ್ಳಲು ಜೆಡಿಎಸ್ ವರಿಷ್ಠ ಹೆಚ್​.ಡಿ.ದೇವೇಗೌಡರು ಸ್ವತಃ ತಮ್ಮ ಮೊಮ್ಮಗನನ್ನೇ ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಆದೇಶಿಸಿದ್ದಾರೆ.

ಪಕ್ಷಕ್ಕೆ ಶರಣಗೌಡ ಕಂದಕೂರ, ಸಮೃದ್ಧಿ ಮಂಜುನಾಥ್ ಪತ್ರ

ಕಳೆದ ಮೂರ್ನಾಲ್ಕು ದಿನಗಳಿಂದಲೂ ಹಾಸನ ಅಶ್ಲೀಲ ವಿಡಿಯೋ ಹರಿದಾಡುತ್ತಿದೆ. ಹೀಗಾಗಿ ಪ್ರಜ್ವಲ್ ಉಚ್ಛಾಟನೆಗೆ ಆಗ್ರಹಿಸಿ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಪತ್ರ ಬರೆದಿದ್ದರು. ಅಶ್ಲೀಲ ವಿಡಿಯೋದಿಂದ ಪಕ್ಷಕ್ಕೆ ಮುಜುಗರ ಆಗಿದೆ. ಮೇಲ್ನೋಟಕ್ಕೆ ಪ್ರಜ್ವಲ್ ತಪ್ಪಿತಸ್ಥರು ಎಂಬ ಭಾವನೆ ಮೂಡಿರುವುದರಿಂದ ಅವರನ್ನು ಉಚ್ಚಾಟನೆ ಮಾಡ್ಬೇಕು ಅಂತ ಮನವಿ ಮಾಡಿದ್ದರು. ಇತ್ತ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಕೂಡ ಟ್ವೀಟ್ ಮಾಡಿ ಪ್ರಜ್ವಲ್ ಪ್ರಕರಣ ಸಂಬಂಧ ಅಸಮಾಧಾನ ಹೊರ ಹಾಕಿದ್ದರು.

ಇದಕ್ಕೆಲ್ಲಾ ಹೆದರಿ ಓಡುವ ವ್ಯಕ್ತಿ ನಾನಲ್ಲ ಎಂದ ಹೆಚ್.ಡಿ.ರೇವಣ್ಣ

ಇನ್ನು, ವಿಡಿಯೋ ಪ್ರಕರಣ ಎಲ್ಲೆಡೆ ಸದ್ದು ಮಾಡ್ತಿದ್ದಂತೆ ಇವತ್ತು ಹೆಚ್​.ಡಿ.ರೇವಣ್ಣ ಬೆಂಗಳೂರಲ್ಲಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ರು. ದೇವೇಗೌಡರ ನಿವಾಸದ ಬಳಿ ಮಾತ್ನಾಡಿದ ಹೆಚ್.ಡಿ.ರೇವಣ್ಣ ನಾನು ಯಾವುದರ ಬಗ್ಗೆಯೂ ರಿಯಾಕ್ಟ್ ಮಾಡಲ್ಲ. ಇದೆಲ್ಲಾ ರಾಜಕೀಯ, ಸರ್ಕಾರ ಅವರದ್ದಿದ್ರೆ ಏನಾದ್ರು ಮಾಡ್ತಾರೆ. ತನಿಖೆ ನಡೆಸಿಕೊಳ್ಳಲಿ ಕಾನೂನು ರೀತಿ ಏನಿದೆ ಅದಾಗಲಿ. ಇಂಥದ್ದಕ್ಕೆಲ್ಲಾ ಹೆದರಿ ಓಡುವ ವ್ಯಕ್ತಿ ನಾನಲ್ಲ, ಇನ್ನು ನಾನು ಈ ವಿಷಯದ ಬಗ್ಗೆ ದೇವೇಗೌಡರ ಬಳಿ ಚರ್ಚೆ ನಡೆಸಿಲ್ಲ ಅಂತ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸಲ್ಲಿ ಗೌಡ್ರ ಕುಟುಂಬಕ್ಕೆ ಕಾದಿದ್ಯಾ ಆಪತ್ತು? ವಿದೇಶದಿಂದ ಪ್ರಜ್ವಲ್​ ವಾಪಸ್​ ಯಾವಾಗ?

ಎಫ್‌ಐಆರ್‌ ಹಾಕುತ್ತಾರೆ ಅನ್ನೋದು ಅವನಿಗೆ ಗೊತ್ತಿರಲಿಲ್ಲ. ಪ್ರಜ್ವಲ್‌ ರೇವಣ್ಣ ವಿದೇಶ ಪ್ರಯಾಣ ಎಫ್‌ಐಆರ್‌ ಆಗುವ ಮೊದಲೇ ನಿರ್ಧಾರವಾಗಿತ್ತು. ಪ್ರಜ್ವಲ್‌ ರೇವಣ್ಣ ಪ್ರಕರಣದ ಕುರಿತು ನಾನು ಏನು ಹೇಳುವುದಿಲ್ಲ. ಎಸ್‌ಐಟಿಯಿಂದ ತನಿಖೆ ಆಗಲಿ. ದೇವೇಗೌಡರ ಕುಟುಂಬದ ವಿರುದ್ಧ ಷಡ್ಯಂತ್ರ ಹೊಸದೇನಲ್ಲ. ಇಂತಹ ಹಲವು ತನಿಖೆಗಳನ್ನು ನಾವು ಎದುರಿಸಿದ್ದೇವೆ. ದೇವೇಗೌಡರ ಮೇಲೆ ಸಿಒಡಿ ತನಿಖೆ ನಡೆಸಿದ್ದರು, ನಾನು ದೇವೇಗೌಡರ ಬಳಿ ಈ ವಿಷಯ ಮಾತನಾಡಿಲ್ಲ. ಕಾನೂನು ರೀತಿ ಏನಿದೆ ಅದು ನಡೆಯಲಿ.

– ಮಾಜಿ ಸಚಿವ ಎಚ್‌.ಡಿ.ರೇವಣ್ಣ

ಪ್ರಜ್ವಲ್ ವಿದೇಶಕ್ಕೆ ಹೋಗಿರುವ ಬಗ್ಗೆ ರೇವಣ್ಣ ಪ್ರತಿಕ್ರಿಯೆ

ಇನ್ನು, ಪ್ರಕರಣ ಹೊರ ಬರ್ತಿದ್ದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದಾರೆ ಎನ್ನಲಾಗಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರೋ ತಂದೆ ಹೆಚ್.ಡಿ.ರೇವಣ್ಣ ಪ್ರಜ್ವಲ್ ಮಾಮೂಲಿಯಾಗಿ ಹೋಗಬೇಕಿತ್ತು ಹೋಗಿದ್ದಾನೆ. ಅಧಿಕಾರಿಗಳು ತನಿಖೆಗೆ ಕರೆದಾಗ ಬರ್ತಾನೆ. ಇಂಥವೆಲ್ಲವನ್ನ ದೇವೇಗೌಡರ ಕುಟುಂಬ 40 ವರ್ಷಗಳಿಂದ ನೋಡಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊಮ್ಮಗನನ್ನೇ ಉಚ್ಛಾಟನೆ ಮಾಡಿದ ದೊಡ್ಡಗೌಡ್ರು; ಪ್ರಜ್ವಲ್ ರೇವಣ್ಣ ರಾಜಕೀಯ ಭವಿಷ್ಯ ಖತಂ?

https://newsfirstlive.com/wp-content/uploads/2024/04/prajval6.jpg

Load More