ಭವಾನಿ ರೇವಣ್ಣಗೂ ಕಾದಿದೆಯಾ ಸಂಕಷ್ಟ.. JDS ಮುಖಂಡರ ಜೊತೆ​ ಮಹತ್ವದ ಚರ್ಚೆ

author-image
Bheemappa
Updated On
ಭವಾನಿ ರೇವಣ್ಣಗೂ ಕಾದಿದೆಯಾ ಸಂಕಷ್ಟ.. JDS ಮುಖಂಡರ ಜೊತೆ​ ಮಹತ್ವದ ಚರ್ಚೆ
Advertisment
  • ಕಿಡ್ನಾಪ್ ಕೇಸ್​ನಲ್ಲಿ ಭವಾನಿ ಕರೆದರು ಅಂತ ಹೇಳಿ ಕಿಡ್ನಾಪ್ ಆರೋಪ
  • ಪ್ರಕರಣ ಸಂಬಂಧ ತೀವ್ರ ತನಿಖೆ ನಡೆಸ್ತಿರೋ ಎಸ್ಐಟಿ ಅಧಿಕಾರಿಗಳು
  • ಈಗಾಗಲೇ ಕೇಸ್​ ಸಂಬಂಧ ಭವಾನಿಗೆ ನೋಟಿಸ್ ನೀಡಿರೋ ಎಸ್ಐಟಿ

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಹಾಗೂ ಕಿಡ್ನಾಪ್​ ಕೇಸ್​ಗೆ ಸಂಬಂಧಿಸಿದಂತೆ ಎಸ್​​ಐಟಿ ಬಳಿ ಇರುವ ಸಂತ್ರಸ್ತೆಯರು ಭವಾನಿ ರೇವಣ್ಣರ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಇದರಿಂದ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ಹಿರಿಯ ಸೊಸೆ ಭವಾನಿ ರೇವಣ್ಣಗೂ ಸಂಕಷ್ಟ ಕಾದಿದೆಯಾ ಎನ್ನುವ ಪ್ರಶ್ನೆ ಮೂಡಿದೆ.

ಒಂದು ಲೈಂಗಿಕ ಕಿರುಕುಳ ಆರೋಪ ಮತ್ತೊಂದು ಕಿಡ್ನಾಪ್ ಕೇಸ್​ಗೆ ಸಂಬಂಧಿಸಿದಂತೆ ಹೊಳೆನರಸೀಪುರ ಶಾಸಕ ಹೆಚ್​.ಡಿ ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಾಲು ಸಾಲು ಆರೋಪಗಳು ಮಾಡಲಾಗಿದೆ. ಸದ್ಯಕ್ಕೆ ಎಸ್​ಐಟಿ ಬಳಿ ಇರುವ ಸಂತ್ರಸ್ತೆಯರು 2 ಕೇಸ್​ನಲ್ಲಿ ಭವಾನಿ ಹೆಸರನ್ನು ಉಲ್ಲೇಖಿಸಿದ್ದಾರೆ. ಇದರಿಂದ ಮಗನ ಕೇಸ್​ನಿಂದ ತಾಯಿಗೆ ಸಂಕಷ್ಟ ಎದುರಾಗುತ್ತಾ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: ಹಿರಿಯ ಅಧಿಕಾರಿಗಳ ಗುಪ್ತ ಸಭೆ; ಪ್ರಜ್ವಲ್ ರೇವಣ್ಣ​ ಕರೆತರಲು ವಿದೇಶಕ್ಕೆ ಹಾರಲಿರುವ ಅಧಿಕಾರಿಗಳು

publive-image

ಭವಾನಿಗೂ ಸಂಕಷ್ಟನಾ?

ಎರಡು ಕೇಸ್​ಗೆ ಸಂಬಂಧಿಸಿದಂತೆ ಭವಾನಿಯವರು ಕರೆದರು ಎಂದು ಹೇಳಿ ಕಿಡ್ನಾಪ್ ಆರೋಪವಿದೆ. ಹೀಗಾಗಿ ಕಿಡ್ನಾಪ್ ಕೇಸ್​ನಲ್ಲಿ ಭವಾನಿಗೆ ಕಾನೂನು ಸಂಕಷ್ಟ ಸಾಧ್ಯತೆ ಇರಬಹುದು. ಈ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ತೀವ್ರ ತನಿಖೆ ನಡೆಸ್ತಿದ್ದಾರೆ. ಈಗಾಗಲೇ ಕೇಸ್​ ಸಂಬಂಧ ಭವಾನಿ ಅವರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಸದ್ಯ ಎರಡೂ ಪ್ರಕರಣ ಸಂಬಂಧ ತೀವ್ರ ತನಿಖೆ ನಡೆಸ್ತಿದ್ದು ಈ ವೇಳೆ ಭವಾನಿ ವಿರುದ್ಧ ಎವಿಡೆನ್ಸ್ ಸಿಕ್ಕರೆ ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment