newsfirstkannada.com

BIG BREAKING: ಮಾಜಿ ಸಚಿವ HD ರೇವಣ್ಣಗೆ ಬಿಗ್ ಶಾಕ್​.. ಜಾಮೀನು ಅರ್ಜಿ ವಜಾ ಮಾಡಿದ ಕೋರ್ಟ್

Share :

Published May 4, 2024 at 6:29pm

Update May 4, 2024 at 6:44pm

    ಕಿಡ್ನಾಪ್​ ಕೇಸ್​ನಲ್ಲಿ ಮಾಜಿ ಸಚಿವ ರೇವಣ್ಣಗೆ ಭಾರೀ ಸಂಕಷ್ಟ

    ಮಹಿಳೆಯನ್ನು ಕಿಡ್ನಾಪ್ ಮಾಡಿದ್ದಕ್ಕೆ ದೂರು ನೀಡಿದ್ದ ವ್ಯಕ್ತಿ

    ನ್ಯಾಯಧೀಶ ಸಂತೋಷ್ ಗಜಾನನ ಅವರು ನೀಡಿದ ಆದೇಶ

ಬೆಂಗಳೂರು: ಮಹಿಳೆಯ ಕಿಡ್ನಾಪ್ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಅವರಿಗೆ ಸಂಕಷ್ಟ ಎದುರಾಗಿದ್ದು ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್​ ವಜಾಗೊಳಿಸಿದೆ. ಹೀಗಾಗಿ ಯಾವುದೇ ಕ್ಷಣದಲ್ಲಾದ್ರೂ ಹೆಚ್​.ಡಿ ರೇವಣ್ಣ ಅವರು ಬಂಧನವಾಗಬಹುದು.

ಹೆಚ್​.ಡಿ ರೇವಣ್ಣ ಅವರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಧೀಶ ಸಂತೋಷ್ ಗಜಾನನ ಅವರು ವಿಚಾರಣೆ ಮಾಡಿದರು. ಈ ವೇಳೆ ಎರಡು ಕಡೆಯ ವಾದ- ಪ್ರತಿವಾದವನ್ನು ಆಲಿಸಿದ ನ್ಯಾಯಧೀಶರು ಜಾಮೀನು ಅರ್ಜಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದರಿಂದ ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರಿಗೆ ಸಂಕಷ್ಟ ಎದುರಾಗಿದ್ದು ಯಾವುದೇ ಸಮಯದಲ್ಲಾದ್ರೂ ಅವರು ಬಂಧನ ಆಗಬಹುದು.

ರೇವಣ್ಣ ಪರ ವಾದ ಏನು..?

ವಿಚಾರಣೆ ಆರಂಭ ಆಗುತ್ತಿದ್ದಂತೆಯೇ ಎಸ್​ಪಿಪಿ ಜಗದೀಶ್​​ ಆಕ್ಷೇಪಣೆಗೆ ಕಾಲಾವಕಾಶ ನೀಡುವಂತೆ ಕೇಳಿಕೊಂಡರು. ಅದಕ್ಕೆ ರೇವಣ್ಣ ಪರ ವಕೀಲರು ಆಕ್ಷೇಪ ಸಲ್ಲಿಸಿದರು. ಇಂದು ಸಂಜೆ ಐದು ಗಂಟೆಯೊಳಗೆ ವಿಚಾರಣೆಗೆ ಹಾಜರಾಗಬೇಕು. ನನಗೆ ನಿರೀಕ್ಷಣಾ ಜಾಮೀನು ಬೇಕಿದೆ ಸ್ವಾಮಿ. ಇನ್ನು ಕೆ.ಆರ್​ ನಗರ ಕೇಸ್​ನಲ್ಲಿ ಏ-2 ಬಂಧನವಾಗಿದೆ. ಈಗ ವಿಚಾರಣೆಗೆ ಹಾಜರಾಗಲು ನನಗೆ ರಕ್ಷಣೆ ಬೇಕು ಎಂದು ರೇವಣ್ಣ ಪರ ವಕೀಲರು ಕೋರ್ಟ್​ಗೆ ಮನವಿ ಮಾಡಿಕೊಂಡರು. ನಿನ್ನೆ ಕೂಡ ರೇವಣ್ಣ ಪರ ವಕೀಲರು ಜಾಮೀನು ನೀಡುವಂತೆ ಕೋರ್ಟ್​ಗೆ ಮನವಿ ಮಾಡಿಕೊಂಡಿದ್ದರು.

ಏನಿದು ಕೇಸ್​?

ತನ್ನ ತಾಯಿಯನ್ನು ಕಿಡ್ನ್ಯಾಪ್​ ಮಾಡಲಾಗಿದೆ ಎಂದು ಹೆಚ್​ಡಿ ರೇವಣ್ಣ ವಿರುದ್ಧ ವ್ಯಕ್ತಿಯೋರ್ವ ಕೇಸ್​ ಮಾಡಿದ್ದ. ಬಿಡುಗಡೆಯಾದ ಅಶ್ಲೀಲ ವಿಡಿಯೊದಲ್ಲಿ ನನ್ನ ತಾಯಿ ಚಿತ್ರವೂ ಇತ್ತು. ಬಳಿಕ ಅವರು ಕಣ್ಮರೆಯಾಗಿದ್ದಾರೆ ಎಂದು ಮೈಸೂರಿನ ಕೆಆರ್​​ ನಗರ ಠಾಣೆಯಲ್ಲಿ ದೂರು ನೀಡಿದ್ರು. ನಾಪತ್ತೆಯಾಗಿರುವ ಮಹಿಳೆ ಪುತ್ರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದಾಗಿದ್ದರು.

ಅಶ್ಲೀಲ ವಿಡಿಯೋ ವಿವಾದದಲ್ಲಿ ನನ್ನ ತಾಯಿಯ ಚಿತ್ರ ಇದೆ. ವಿಡಿಯೋಗಳು ರಿಲೀಸಾದ ಬಳಿಕ ತಾಯಿ ದಿಢೀರ್ ನಾಪತ್ತೆಯಾಗಿದ್ರು ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಅನ್ವಯ ಹೆಚ್​ಡಿ ರೇವಣ್ಣ ವಿರುದ್ಧ ಸೆಕ್ಷನ್ 364/A 365 ಹಾಗೂ 34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರೇವಣ್ಣ ಎ1 ಮತ್ತು ಸತೀಶ್ ಬಾಬು ಎ2 ಎಂದೂ ನಮೂದಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIG BREAKING: ಮಾಜಿ ಸಚಿವ HD ರೇವಣ್ಣಗೆ ಬಿಗ್ ಶಾಕ್​.. ಜಾಮೀನು ಅರ್ಜಿ ವಜಾ ಮಾಡಿದ ಕೋರ್ಟ್

https://newsfirstlive.com/wp-content/uploads/2024/05/hd-revanna1.jpg

Load More