/newsfirstlive-kannada/media/post_attachments/wp-content/uploads/2024/11/HSN_HASANAMBE-2.jpg)
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನೋತ್ಸವಕ್ಕೆ ಇಂದು ಮುಂಜಾನೆ ತೆರೆಬಿದ್ದಿದೆ. ಅಶ್ವೀಜ ಮಾಸದ ಮೊದಲನೇ ಗುರುವಾರ ಹಾಸನಾಂಬೆ ಗರ್ಭಗುಡಿಯ ಬಾಗಿಲು ತೆರೆದ್ರೆ, ನಂತರ ಬಲಿಪಾಡ್ಯಮಿಯ ಮಾರನೇಯ ದಿನ ದೇಗುಲವನ್ನು ಶಾಸ್ತ್ರೋಕ್ತವಾಗಿ ಮುಚ್ಚಲಾಗುತ್ತೆ. ನೂರಾರು ವರ್ಷಗಳ ಇತಿಹಾಸವಿರೋ ಹಾಸನಾಂಬೆ ದೇಗುಲ ಇಂದು ಮಧ್ಯಾಹ್ನ ಬಂದ್ ಆಗಲಿದೆ.
ಇದನ್ನೂ ಓದಿ: ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ; ಏನಿದರ ರಹಸ್ಯ?
ವರವ ನೀಡುವ ಮಹಾತಾಯಿ ಹಾಸನಾಂಬೆ ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಶಕ್ತಿದೇವತೆ. 8 ದಿನಗಳ ಕಾಲ ದರುಶನ ನೀಡಿದ ಹಾಸನಾಂಬೆಗೆ ಲಕ್ಷಾಂತರ ಭಕ್ತರಿಂದ ಉಘೇ ಉಘೇ.. ಬೇಡಿದ ವರವ ಕುರುಣಿಸುವ ದೇವಿಯನ್ನ ಭಕ್ತಗಣ ಕಣ್ಣು ತುಂಬಿಕೊಂಡಿದೆ. ನಂಬಿ ಬಂದವರಿಗೆ ಸುಖ, ಸಮೃದ್ಧಿ ಕರುಣಿಸುತ್ತಾಳೆ ಹಾಸನದ ಅಧಿದೇವತೆ.
ಮುಂಜಾನೆ 4 ಗಂಟೆವರೆಗೂ ಹಾಸನಾಂಬೆ ದರ್ಶನ ಪಡೆದ ಭಕ್ತರು
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ಪವಾಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವರ್ಷದ ಹಿಂದೆ ಹಚ್ಚಿಟ್ಟ ದೀಪ ಉರಿಯುತ್ತಲೇ ಇರುತ್ತದೆ. ವರ್ಷದ ಹಿಂದೆ ಹಾಕಿದ್ದ ಹೂವು ಬಾಡದೇ ಹಾಗೆಯೇ ಇರುತ್ತೆ. ಅಕ್ಟೋಬರ್ 24ರಂದು ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಾಗಿತ್ತು. 2ನೇ ದಿನದಿಂದ ಅಂದ್ರೆ ಅಕ್ಟೋಬರ್ 25ರಿಂದ ಇವತ್ತು ಮುಂಜಾನೆ 4 ಗಂಟೆವರೆಗೂ ಭಕ್ತರು ಹಾನಸಾಂಬೆಯ ದರ್ಶನ ಪಡೆದಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಹಾಸನಾಂಬೆ ಗರ್ಭಗುಡಿ ಬಾಗಿಲು ಬಂದ್
ಸದ್ಯ ದೇಗುಲದ ಗರ್ಭಗುಡಿಯಲ್ಲಿ ಪೂಜಾ ವಿಧಿವಿಧಾನಗಳು ಸಂಪ್ರದಾಯದಂತೆ ಜರುಗುತ್ತಿವೆ. ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಶಾಸ್ತ್ರೋಸ್ತ್ರವಾಗಿ ಪೂಜೆಗೈದು ಗರ್ಭಗುಡಿಯ ಬಾಗಿಲು ಹಾಕಲಾಗುತ್ತೆ. ಸಿದ್ದೇಶ್ವರ ಜಾತ್ರೆಯ ಕೊಂಡೋತ್ಸವದ ಬಳಿಕ ಜಿಲ್ಲಾಡಳಿತದ ಸಮ್ಮುಖದಲ್ಲಿ ದೇಗುಲದ ಆಡಳಿತ ಮಂಡಳಿ ಗರ್ಭಗುಡಿಯ ಬಾಗಿಲನ್ನು ಸಂಪ್ರಾದಾಯದ ಪ್ರಕಾರ ಮುಚ್ಚಲಿದೆ.
ಇದನ್ನೂ ಓದಿ:ಹಾಸನಾಂಬೆ ಸನ್ನಿಧಿಯಲ್ಲಿ MLA ಸುರೇಶ್- ಡಿಸಿ ಸತ್ಯಭಾಮ ನಡುವೆ ವಾಗ್ವಾದ.. ಅಸಲಿಗೆ ಆಗಿದ್ದೇನು?
ಒಂದಷ್ಟು ಗೊಂದಲಗಳನ್ನು ಬಿಟ್ಟರೆ ಹಾಸನಾಂಬೆಯ ಜಾತ್ರೋತ್ಸವ ಅದ್ಧೂರಿಯಾಗಿ ನಡೆದಿದೆ. ತಾಯಿಯ ಗರ್ಭಗುಡಿ ಬಾಗಿಲು ಹಾಕಲು ಕ್ಷಣಗಣನೆ ಆರಂಭವಾಗಿದ್ದು, ಹಾಸನಾಂಬೆ ನಾಡಿಗೆ ಒಳಿತು ಮಾಡಲಿ ಅನ್ನೋದು ಅಸಂಖ್ಯ ಭಕ್ತರ ಕೋರಿಕೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ