newsfirstkannada.com

ಹಾಸನ ಅಶ್ಲೀಲ ವಿಡಿಯೋ ಕೇಸಲ್ಲಿ ಗೌಡ್ರ ಕುಟುಂಬಕ್ಕೆ ಕಾದಿದ್ಯಾ ಆಪತ್ತು? ವಿದೇಶದಿಂದ ಪ್ರಜ್ವಲ್​ ವಾಪಸ್​ ಯಾವಾಗ?

Share :

Published April 29, 2024 at 8:58pm

Update April 29, 2024 at 8:47pm

    ಹಾಸನ ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಹೆಚ್‌.ಡಿ ರೇವಣ್ಣಗೂ ಸಂಕಷ್ಟ

    ವಿದೇಶದಿಂದ ಪ್ರಜ್ವಲ್‌ನ ವಾಪಸ್ ಕರೆ ತರುತ್ತೇವೆ ಎಂದ ಗೃಹ ಸಚಿವರು

    ಹಾಸನ ಸಂತ್ರಸ್ತರ ರಕ್ಷಣೆ ನಮ್ಮ ಹೊಣೆ ಎಂದ ರಾಜ್ಯ ಮಹಿಳಾ ಆಯೋಗ

ಬೆಂಗಳೂರು: ಹಾಸನದಲ್ಲಿ ಹರಿದಾಡ್ತಿರುವ ಅಶ್ಲೀಲ ವಿಡಿಯೋಗಳು ಇಡೀ ನಾಗರಿಕ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿದೆ. ದೇಶಾದ್ಯಂತ ಹಲ್‌ಚಲ್ ಎಬ್ಬಿಸಿರುವ ಈ ಕೇಸ್‌ನಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಹೆಸರು ತಳುಕು ಹಾಕಿಕೊಂಡಿದೆ. ಮಾಜಿ ಸಚಿವ ಹೆಚ್‌.ಡಿ. ರೇವಣ್ಣ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಇದೀಗ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ರೇವಣ್ಣ ಕುಟುಂಬ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.

ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಹೆಚ್‌.ಡಿ ರೇವಣ್ಣಗೂ ಸಂಕಷ್ಟ
ಎಫ್‌ಐಆರ್‌ಗೆ ತಡೆ ಕೋರಿ ಹೈಕೋರ್ಟ್ ಮೊರೆ ಹೋಗಲು ಸಿದ್ಧತೆ
ಹಾಸನ ಪೆನ್​ಡ್ರೈವ್ ಕೇಸಲ್ಲಿ ನಿನ್ನೆ ಮೊದಲ ಎಫ್​ಐಆರ್ ದಾಖಲಾಗಿತ್ತು. ಹಾಸನ ಸಂಸದ ಪ್ರಜ್ವಲ್ ರೇವಣ್ಣರ ಮನೆ ಕೆಲಸದಾಕೆ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಕೇಸ್‌ ದಾಖಲಿಸಿದ್ದಾರೆ. ಎಫ್​ಐಆರ್​ನಲ್ಲಿ ಮೊದಲ ಆರೋಪಿಯಾಗಿ ಹೆಚ್​.ಡಿ ರೇವಣ್ಣ ಹೆಸರಿದ್ರೆ ಎರಡನೇ ಆರೋಪಿಯಾಗಿ ಪ್ರಜ್ವಲ್​ ರೇವಣ್ಣ ಹೆಸರನ್ನ ಉಲ್ಲೇಖಿಸಲಾಗಿದೆ. ಇದೀಗ ಈ ಎಫ್‌ಐಆರ್‌ಗೆ ತಡೆ ಕೋರಿ ಹೆಚ್‌.ಡಿ ರೇವಣ್ಣ ಹೈಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ. ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಪ್ರಜ್ವಲ್ ಫಾರಿನ್​​ಗೆ ಹೋಗಬೇಕಾಗಿತ್ತು ಹೋಗಿದ್ದಾನೆ, ಇವರೇನು FIR ಹಾಕ್ತಾರೆಂದು ಗೊತ್ತಿತ್ತಾ? -ರೇವಣ್ಣ 

ಯಾವ್ಯಾವ ಸೆಕ್ಷನ್ ಅಡಿ ಕೇಸ್?
ಸೆಕ್ಷನ್ 354 (A) ಅಡಿ ಲೈಂಗಿಕ ಕಿರುಕುಳ ನೀಡಿರುವುದು
ಸೆಕ್ಷನ್ 354 (D) ಅಡಿ ಮಹಿಳೆಗೆ ಮುಜುಗರ ಮಾಡುವುದು
ಸೆಕ್ಷನ್ 506ರ ಅಡಿ ಮಹಿಳೆಗೆ ಬೆದರಿಕೆ ಹಾಕಿರುವುದು
ಸೆಕ್ಷನ್ 509 ಮಹಿಳೆಯ ಮಾನಕ್ಕೆ ಹಾನಿ ಮಾಡಿರುವುದು

ಇದನ್ನೂ ಓದಿ: ‘1 ಲಕ್ಷ ಪೆನ್‌ಡ್ರೈವ್‌ ಗಲ್ಲಿ, ಗಲ್ಲಿಗೆ ಹಂಚಿದ್ದಾರೆ’- ಹಾಸನ ಅಶ್ಲೀಲ ವಿಡಿಯೋ ಕೇಸ್‌ಗೆ HDK ಸ್ಫೋಟಕ ಹೇಳಿಕೆ 

ವಿದೇಶದಿಂದ ಪ್ರಜ್ವಲ್‌ನ ವಾಪಸ್ ಕರೆ ತರುತ್ತೇವೆ ಎಂದ ಪರಂ
ಸಂತ್ರಸ್ತರ ರಕ್ಷಣೆ ನಮ್ಮ ಹೊಣೆ ಎಂದ ರಾಜ್ಯ ಮಹಿಳಾ ಆಯೋಗ
ಹಾಸನದ ಅಶ್ಲೀಲ ವಿಡಿಯೋಗಳ ಕೇಸ್‌ನ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಮಾಹಿತಿ ನೀಡಿದ್ದಾರೆ. ಎಸ್‌ಐಟಿ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದ ಪರಮೇಶ್ವರ್, ಜರ್ಮನಿಗೆ ಹಾರಿರೋ ಪ್ರಜ್ವಲ್ ರೇವಣ್ಣನ ವಾಪಸ್ ಕರೆತರುತ್ತೇವೆ ಎಂದಿದ್ದಾರೆ. ಯಾರೇ ತೊಂದರೆಗೆ ಈಡಾಗಿದ್ರೂ ನಮ್ಮ ಬಳಿ ಬಂದು ದೂರು ನೀಡಬಹುದು ಅಂತ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಅಭಯ ನೀಡಿದ್ದಾರೆ.
ರಾಜ್ಯದೆಲ್ಲೆಡೆ ಅಶ್ಲೀಲ ವಿಡಿಯೋಗಳ ಹಲ್‌ಚಲ್ ಎದ್ದಿದೆ. ಇದೀಗ ವಿಡಿಯೋ ಹಿಂದಿನ ಅಸಲಿಯತ್ತಿನ ಬಗ್ಗೆ ತನಿಖೆ ಆರಂಭವಾಗಿದೆ. ತನಿಖೆಯ ಬಳಿಕವಷ್ಟೇ ವಿಡಿಯೋಗಳ ಸತ್ಯ, ಅಸತ್ಯತೆ ಹೊರಬೀಳಬೇಕಿದೆ.

ಇದನ್ನೂ ಓದಿ: ರೇವಣ್ಣ ಕುಟುಂಬ ಬೇರೆ, ನಮ್ಮ ಕುಟುಂಬ ಬೇರೆ.. ಹೆಚ್​ ಡಿ ಕುಮಾರಸ್ವಾಮಿ ಹೀಗ್ಯಾಕಂದ್ರು?

ಪ್ರಜ್ವಲ್‌ ಮುಂದಿರೋ ಆಯ್ಕೆಗಳೇನು?

  1. ದಾಖಲಾಗಿರುವ FIR ರದ್ದು ಕೊರಲು ಕಾನೂನಿನಲ್ಲಿ ಅವಕಾಶ
    2. ಎಸ್ಐಟಿ‌ ತನಿಖೆಯ ಕಾನೂನು ಮಾನ್ಯತೆಗಳನ್ನ ಪ್ರಶ್ನಿಸಬಹುದು
    3. ಪ್ರಕರಣಕ್ಕೂ ಪ್ರಜ್ವಲ್​​ಗೂ ಸಂಬಂಧ ಇಲ್ಲ ಎಂದು ವಾದಿಸಬಹುದು
    4. ಅನ್ಯಾಯ ಆಗಿದ್ದರೆ ತಡವಾಗಿ ದೂರು ಸಲ್ಲಿಕೆ ಯಾಕೆ ಎಂದು ಪ್ರಶ್ನೆ
    5. AIನಲ್ಲಿ ವಿಡಿಯೋ ಕ್ರಿಯೇಟ್ ಮಾಡಿ ತೇಜೋವಧೆ ಎನ್ನಬಹುದು
    6. ರಾಜಕೀಯ ದ್ವೇಷಕ್ಕೆ ಈ ಪ್ರಕರಣ ಸೃಷ್ಟಿ ಎಂದು ಸಮರ್ಥಿಸಬಹುದು
    7. ಸರ್ಕಾರವೇ ಟಾರ್ಗೆಟ್ ಮಾಡಿ ಆರೋಪ ಮಾಡುತ್ತಿದೆ ಎನ್ನಬಹುದು
    8. ವಿಡಿಯೋ ವೈರಲ್ ಮಾಡಿದ ವ್ಯಕ್ತಿ ವಿರುದ್ಧ ತನಿಖೆಗೆ ಕೇಳಬಹುದು
    9. ವೈರಲ್‌ ಮಾಡಿದವರಿಂದ ಮಹಿಳೆಯರಿಗೆ ಅನ್ಯಾಯ ಎನ್ನಬಹುದು
    10. ಬಲವಂತದ ಕ್ರಮ ಕೈಗೊಳ್ಳದಂತೆ ಮನವಿ ಮಾಡಿಕೊಳ್ಳಬಹುದು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಅಶ್ಲೀಲ ವಿಡಿಯೋ ಕೇಸಲ್ಲಿ ಗೌಡ್ರ ಕುಟುಂಬಕ್ಕೆ ಕಾದಿದ್ಯಾ ಆಪತ್ತು? ವಿದೇಶದಿಂದ ಪ್ರಜ್ವಲ್​ ವಾಪಸ್​ ಯಾವಾಗ?

https://newsfirstlive.com/wp-content/uploads/2024/04/Prajwal-Revanna-JDS-2.jpg

Load More