ಲಿಂಗನಮಕ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳ! ಹಸಿರುಮಕ್ಕಿ ಲಾಂಚ್ ಪುನರಾರಂಭ

author-image
AS Harshith
Updated On
ಲಿಂಗನಮಕ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳ! ಹಸಿರುಮಕ್ಕಿ ಲಾಂಚ್ ಪುನರಾರಂಭ
Advertisment
  • ಸಾಗರದಿಂದ ಕೊಲ್ಲೂರು, ಕುಂದಾಪುರ ತೆರಳುವವರಿಗೆ ಸಿಹಿ ಸುದ್ದಿ
  • ಶರಾವತಿ ಹಿನ್ನಿರಿನ ಹಸಿರುಮಕ್ಕಿಯಲ್ಲಿ ಲಾಂಚ್ ಸೇವೆ ಇಂದಿನಿಂದ ಆರಂಭ
  • ಸದ್ಯ ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ

ಶಿವಮೊಗ್ಗ: ರಾಜ್ಯದಲ್ಲಿ ಮಳೆ ಆರ್ಭಟಿಸುತ್ತಿದ್ದು, ಇದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದೆ. ಹೀಗಾಗಿ ಇಂದಿನಿಂದ ಹಸಿರುಮಕ್ಕಿ ಲಾಂಚ್ ಪುನರ್ ಆರಂಭಗೊಂಡಿದೆ.

ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ಮಾಹಿತಿ ಹೊರಡಿಸಿದ್ದು, ಶರಾವತಿ ಹಿನ್ನಿರಿನ ಹಸಿರುಮಕ್ಕಿಯಲ್ಲಿ ಲಾಂಚ್ ಸೇವೆ ಇಂದಿನಿಂದ ಪುನರ್ ಆರಂಭ ಎಂದು ಹೇಳಿದೆ.

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದ ಕಾರಣ ಶರಾವತಿ ಹಿನ್ನೀರಿನಲ್ಲಿ ಲಾಂಚ್ ಸೇವೆ ಸ್ಥಗಿತಗೊಂಡಿತ್ತು‌. ಲಾಂಚ್ ಹಾಗೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕಳೆದ ಒಂದು ತಿಂಗಳಿಂದ ಸ್ಥಗಿತಗೊಂಡಿತ್ತು. ನಿಟ್ಟೂರು ಭಾಗದ ಜನರು ಸೇರಿದಂತೆ ಸಾಗರದಿಂದ ಕೊಲ್ಲೂರು, ಕುಂದಾಪುರ ತೆರಳುವವರಿಗೆ ಸಾಕಷ್ಟು ಅನಾನುಕೂಲವಾಗಿತ್ತು. ಸದ್ಯ ಲಾಂಚ್ ಸೇವೆ ಆರಂಭದಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 4,50,000 ಗೂಬೆಗಳನ್ನು ಕೊಲ್ಲಲು ಮುಂದಾದ ಸರ್ಕಾರ! ಇದರ ಹಿಂದಿದೆ ಅಚ್ಚರಿಯ ಕಾರಣ!

ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ ಎಷ್ಟಿದೆ?

ಲಿಂಗನಮಕ್ಕಿ ಗರಿಷ್ಠ ಮಟ್ಟ: 1819 ಅಡಿ

ಇಂದಿನ ಮಟ್ಟ: 1890 ಅಡಿ

ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು: 60, 238 ಕ್ಯೂಸೆಕ್.

ಹೊರ ಹರಿವು: 586.24 ಕ್ಯೂಸೆಕ್

ಜಲಾಶಯದ ಗರಿಷ್ಠ ಸಾಮರ್ಥ್ಯ: 151.64 ಟಿಎಂಸಿ

ಇಂದಿನ ಸಂಗ್ರಹ: 27.73 ಟಿಎಂಸಿ.

ಈ ತನಕ ಶೇಕಡಾ 18.29 ಮಾತ್ರ ಸಂಗ್ರಹ.

ಕಳೆದ ವರ್ಷ ಈ ವೇಳೆ: 1741.70 ಅಡಿ ಸಂಗ್ರಹವಾಗಿತ್ತು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment