/newsfirstlive-kannada/media/post_attachments/wp-content/uploads/2025/04/Hassan-Accident-CCTV.jpg)
ಹಾಸನ: ಮಕ್ಕಳಿಗೆ ಚಾಕ್ಲೆಟ್, ಬಿಸ್ಕೆಟ್ ತರಲು ಅಂಗಡಿಗೆ ಹೋಗುತ್ತಿದ್ದ ತಾಯಿ ಸಾವನ್ನಪ್ಪಿರೋ ದಾರುಣ ಘಟನೆ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ನಡೆದಿದೆ. ರಸ್ತೆ ದಾಟುತ್ತಿದ್ದ ಮಹಿಳೆಗೆ ವೇಗವಾಗಿ ಚಲಿಸುತ್ತಿದ್ದ ಇನೋವಾ ಕಾರು ಡಿಕ್ಕಿಯಾಗಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಮಹಿಳೆ ಚೆಂಡಿನಂತೆ ಮೇಲೆ ಹಾರಿ ಕೆಳಗೆ ಬಿದ್ದಿದ್ದಾರೆ.
ಸಕಲೇಶಪುರದಲ್ಲಿ ನಡೆದಿರೋ ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರು ಡಿಕ್ಕಿಯಾಗಿ ಮೇಲೆ ಹಾರಿದ ಮಹಿಳೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮಹಿಳೆಗೆ ಡಿಕ್ಕಿ ಹೊಡೆದ KA-05-AH-0576 ನಂಬರ್‌ನ ಇನೋವಾ ಕಾರು ಸ್ಥಳದಿಂದ ಎಸ್ಕೇಪ್ ಆಗಿದೆ.
ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದ ಗುಲಾಬಿ ಸಾವನ್ನಪ್ಪಿದ ಮಹಿಳೆ. ಗುಲಾಬಿಯ ಮಕ್ಕಳು ಅಳುತ್ತಿದ್ದರಿಂದ ಚಾಕ್ಲೆಟ್, ಬಿಸ್ಕೆಟ್ ತರಲು ಡಿವೈಡರ್ ದಾಟಿ ಅಂಗಡಿಗೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಹಿಳೆಗೆ ಇನ್ನೊವಾ ಕಾರು ರಭಸವಾಗಿ ಬಂದು ಡಿಕ್ಕಿಯಾಗಿದೆ.
ಇದನ್ನೂ ಓದಿ: ಮದ್ವೆ ಆಗುತ್ತಿರೋ ಹುಡುಗನ ಬಗ್ಗೆ ಗುಟ್ಟು ಬಿಚ್ಚಿಟ್ಟ ನಟಿ; ವೈಷ್ಣವಿ ಗೌಡ ಹೇಳಿದ್ದೇನು?
KA-05-AH-0576 ನಂಬರ್‌ನ ಇನೋವಾ ಕಾರು ಚಾಲಕ ಅಪಘಾತದ ಬಳಿಕ ನಿಲ್ಲಿಸದೆ ಅಮಾನವೀಯ ವರ್ತನೆ ತೋರಿದ್ದಾರೆ. ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ