/newsfirstlive-kannada/media/post_attachments/wp-content/uploads/2024/08/JOB_1.jpg)
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಾಸನ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನ ಆಹ್ವಾನಿಸಲಾಗಿದೆ. ಒಟ್ಟು 734 ಹುದ್ದೆಗಳಿದ್ದು ಅರ್ಹ ಮಹಿಳಾ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ:IIT ದೆಹಲಿಯಿಂದ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ.. ಎಷ್ಟು ಮಂದಿಗೆ PhD ನೀಡಿದ್ರು?
ಅಂಗನವಾಡಿ ಕೇಂದ್ರಗಳ ಖಾಲಿ ಇರುವ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡುವುದಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೋಟಿಫಿಕೇಶನ್ ಹೊರಡಿಸಿದೆ. ಈಗಾಗಲೇ ಇದಕ್ಕೆ ಅರ್ಜಿ ಸಲ್ಲಿಸುವುದು ಆರಂಭವಾಗಿದ್ದು ಆಸಕ್ತ ಮಹಿಳಾ ಅಭ್ಯರ್ಥಿಗಳು ಅಪ್ಲೇ ಮಾಡಬಹುದು. ಅಂಗನವಾಡಿ ಕಾರ್ಯಕರ್ತೆಯರ ಒಟ್ಟು ಹುದ್ದೆ 168 ಇದ್ದು ಸಹಾಯಕಿಯರ ಹುದ್ದೆ 566 ಹುದ್ದೆಗಳಿವೆ. ಇವೆಲ್ಲ ಸರ್ಕಾರಿ ಉದ್ಯೋಗವಾಗಿದ್ದು ವೇತನವೂ ಪ್ರತಿ ತಿಂಗಳು 6 ಸಾವಿರದಿಂದ 15 ಸಾವಿರ ರೂಪಾಯಿಗಳವರೆಗೆ ಇರುತ್ತದೆ. ಹಾಸನ ಜಿಲ್ಲೆಯ 8 ತಾಲೂಕುಗಳಲ್ಲಿ ಮಾತ್ರ ಈ ಹುದ್ದೆಗೆ ಅರ್ಜಿಗಳನ್ನ ಆಹ್ವಾನಿಸಲಾಗಿದ್ದು 2024ರ ಸೆಪ್ಟೆಂಬರ್ 4 ರಂದು ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ.
ಇದನ್ನೂ ಓದಿ: ನೀರಜ್ ಚೋಪ್ರಾ, ಮನು ಭಾಕರ್ ಓದಿದ್ದು ಏನು.. ಡಿಗ್ರಿಯಾದರೂ ಮುಗಿಸಿದ್ದಾರಾ..?
- ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅಪ್ಲೇ ಮಾಡಲು ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ಡಿಪ್ಲೋಮಾದಲ್ಲಿ ECCE ಮುಗಿಸಿರಬೇಕು.
- ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಎಸ್ಎಸ್‌ಎಲ್‌ಸಿ ಪಾಸಾಗಿರಬೇಕು ಅಥವಾ ತತ್ಸಮಾನ 10ನೇ ತರಗತಿಯಲ್ಲಿ ಪಾಸ್ ಆಗಿರಬೇಕು.
ಅರ್ಜಿ ಸಲ್ಲಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ-https://karnemakaone.kar.nic.in/abcd/ApplicationForm_JA_org.aspx
ಅಭ್ಯರ್ಥಿಗಳು ಅರ್ಜಿ ಹಾಕಲು 18 ವರ್ಷಗಳಿಂದ 35 ವರ್ಷದೊಳಗಿನವರು ಆಗಿರಬೇಕು. ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ, ಎಸ್‌ಸಿ-ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಅಪ್ಲೇ ಮಾಡಲು ದಾಖಲೆಗಳು ಏನೇನು ಬೇಕು?
- ಆಧಾರ್ ಕಾರ್ಡ್, ವೋಟರ್ ಐಡಿ
- ಆ ಹುದ್ದೆಗೆ ಕೇಳಿರುವ ಪಿಯುಸಿ, ಎಸ್ಎಸ್‌ಎಲ್‌ಸಿ ಅಂಕಪಟ್ಟಿ
- ಆದಾಯ, ಜಾತಿ ಪ್ರಮಾಣ ಪತ್ರ
- ವಾಸಸ್ಥಳ ದೃಢಿಕರಣ ಪತ್ರ,
- ಡಿವೋರ್ಸ್ ಆಗಿದ್ದರೆ ಸರ್ಟಿಫಿಕೆಟ್
- ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ
- ಯೋಜನಾ ನಿರಾಶ್ರಿತರು ಆಗಿದ್ದಲ್ಲಿ ಪ್ರಮಾಣ ಪತ್ರ ಬೇಕು
- ಇವೆಲ್ಲ ಸೇರಿದಂತೆ ಅರ್ಜಿಯಲ್ಲಿ ಕೇಳಿದ ಪ್ರಮಾಣ ಪತ್ರಗಳು ಇರಬೇಕು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ