/newsfirstlive-kannada/media/post_attachments/wp-content/uploads/2025/06/HSN_HEART_ATTACK.jpg)
ಹಾಸನ: ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು ಇದುವರೆಗೆ ಐವರು ಉಸಿರು ಚೆಲ್ಲಿದ್ದರು. ಇದೀಗ ಇನ್ನೊಬ್ಬರು ಹಾರ್ಟ್​ ಅಟ್ಯಾಕ್​ನಿಂದ ಬಲಿಯಾಗಿದ್ದಾರೆ. ಇವರನ್ನು ಸೇರಿ ಹೃದಯಾಘಾತದಿಂದ ಹಾಸನ ಜಿಲ್ಲೆಯಲ್ಲಿ ಆರು ಜನರು ಜೀವ ಕಳೆದುಕೊಂಡಂತೆ ಆಗಿದೆ.
ಬೇಲೂರು ಪಟ್ಟಣದ ಸಮಾಜ ಸೇವಕ ನಿಶಾದ್ ಅಹಮ್ಮದ್ (35) ಹೃದಯಾಘಾತದಿಂದ ಸಾವು. ಇವರು ಜೀವನ ನಿರ್ವಹಣೆಗಾಗಿ ಪಟ್ಟಣದಲ್ಲಿ ಟೀ ಕ್ಯಾಂಟೀನ್ ಒಂದನ್ನು ನಡೆಸುತ್ತಿದ್ದರು. ಜೊತೆಗೆ​ ಸಮಾಜ ಸೇವಕ ಎಂದು ಗುರುತಿಸಿಕೊಂಡಿದ್ದರು. ಕರೊನಾ ಸಮಯದಲ್ಲಿ 80ಕ್ಕೂ ಹೆಚ್ಚು ಶವಸಂಸ್ಕಾರ ಮಾಡಿದ್ದರು. ಹಲವಾರು ಅನಾಥ ಶವಗಳಿಗೆ ನಿಶಾದ್ ಅಹಮ್ಮದ್ ಮುಕ್ತಿ ನೀಡಿದ್ದರು.
/newsfirstlive-kannada/media/post_attachments/wp-content/uploads/2025/05/HSN_-Heart_attack.jpg)
ಹಾಸನದಲ್ಲಿ ಹೃದಯಾಘಾತದಿಂದ ಪ್ರಾಣ ಬಿಟ್ಟವರು
ಜಿಲ್ಲೆಯಲ್ಲಿ ಒಟ್ಟು 6 ಜನರು ಹೃದಯಾಘಾತದಿಂದಲೇ ಜೀವ ಕಳೆದುಕೊಂಡಿದ್ದಾರೆ. ಆತಂಕಕಾರಿ ಸಂಗತಿ ಎಂದರೆ ಎಲ್ಲರೂ ಯುವಕರೇ ಆಗಿದ್ದಾರೆ. ಇತ್ತೀಚೆಗೆ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಕೆಲವತ್ತಿ ಗ್ರಾಮದ ಕವನ ಕೆ.ವಿ ಹಾರ್ಟ್​ ಅಟ್ಯಾಕ್​ನಿಂದ ಸಾವನ್ನಪ್ಪಿದ್ದರು. ಇದಾದ ಮೇಲೆ ಕೆಲವೇ ದಿನಗಳಲ್ಲಿ ಜಿಲ್ಲೆಯ 2 ಪ್ರತ್ಯೇಕ ಘಟನೆಗಳಲ್ಲಿ ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ಯುವತಿ ಸಂಧ್ಯಾ ಹಾಗೂ ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಯುವಕ ಅಭಿಷೇಕ್ ಕೊನೆಯುಸಿರೆಳೆದಿದ್ದರು.
/newsfirstlive-kannada/media/post_attachments/wp-content/uploads/2025/06/HSN_YOUTH-1.jpg)
ಇವರ ಬೆನ್ನಲ್ಲೇ ಹಾಸನ ತಾಲೂಕಿನ ಅಗಲಹಳ್ಳಿ ಕೊಪ್ಪಲು ಗ್ರಾಮದ ನವೀನ್ ಕುಮಾರ್ (21) ಹೃದಯಾಘಾತದಿಂದ ನಿಧನರಾಗಿದ್ದರು. ಹೊಳೆನರಸೀಪುರ ಪಟ್ಟಣದ ನಿವಾಸಿ ಚನ್ನಕೇಶವ ಹಾಗೂ ಜ್ಯೋತಿ ದಂಪತಿಯ ಪುತ್ರ ನಿಶಾಂತ್ (19) ಬೆಂಗಳೂರಿನ ಜೆಪಿ ನಗರದಲ್ಲಿ ಸಾವನ್ನಪ್ಪಿದ್ದರು. ಈಗ ಇವರ ಬೆನ್ನಲ್ಲೇ ನಿಶಾದ್ ಅಹಮ್ಮದ್ (35) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us