/newsfirstlive-kannada/media/post_attachments/wp-content/uploads/2025/05/hasana4.jpg)
ಹಾಸನ: ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆ ಬೇಡ ಎಂದು ವಧು ಶಾಕ್ ಕೊಟ್ಟಿದ್ದ ಕೇಸ್ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಇದನ್ನೂ ಓದಿ: ತಂದೆಯ ‘ಸುಪಾರಿ’ ಆರೋಪಕ್ಕೆ ಸಖತ್ ಟಾಂಗ್ ಕೊಟ್ಟ ಚೈತ್ರಾ ಕುಂದಾಪುರ.. ಏನಂದ್ರು?
ಹೌದು, ಹಾಸನ ನಗರದ ಬೂವನಹಳ್ಳಿಯ ಯುವತಿ ಹಾಗೂ ಆಲೂರು ಸರ್ಕಾರಿ ಶಾಲೆ ಶಿಕ್ಷಕನಿಗೆ ಮದುವೆ ಫಿಕ್ಸ್ ಆಗಿತ್ತು. ಮದುವೆ ಮುನ್ನ ಚಂದವಾಗಿ ಫೋಟೋಶೂಟ್ ಸಹ ಮಾಡಿಸಲಾಗಿತ್ತು. ಅಲ್ಲದೇ ಶಾಪಿಂಗ್ ಅಂತ ಅನೇಕ ಕಡೆಗಳಲ್ಲಿ ಜೊತೆ ಜೊತೆಯಾಗಿ ಓಡಾಡಿದ್ರು. ಮದುವೆ ಶಾಸ್ತ್ರ ನಡೆಯುವಾಗಲೂ ವಿರೋಧಿಸದೆ ಸೈಲೆಂಟ್ ಆಗಿದ್ದ ಯುವತಿ ಇನ್ನೇನು ತಾಳಿಕಟ್ಟೋ ಸಮಯದಲ್ಲಿ ನನಗೆ ಈ ಮದುವೆ ಬಿಲ್ಕುಲ್ ಬೇಡ ಅಂತ ಅಳೋದಕ್ಕೆ ಶುರು ಮಾಡಿದ್ದಳು.
ಇನ್ನೂ, ಮಗಳು ಹೀಗೆ ಏಕೆ ಹೇಳ್ತಾ ಇದ್ದಾಳೆ ಅಂತ ಪೋಷಕರ ಕೂಡ ಗೊಂದಲದಲ್ಲಿದ್ದರು. ಮದುವೆ ಬೇಡವೇ ಬೇಡ ಎಂದು ಹಠ ಹಿಡಿದ ಯುವತಿಯನ್ನು ನೋಡಿದ ವರ ನನಗೂ ಬೇಡ ಅಂತ ಹೇಳಿದ್ದಾರೆ. ಮಗಳು ಮದುವೆ ಬೇಡ ಎಂದಿದ್ದಕ್ಕೆ ಪೋಷಕರು ಕೂಡ ಕಣ್ಣೀರಿಟ್ಟಿದ್ದರು. ಈ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡು ಕಡೆಯವರನ್ನ ಠಾಣೆಗೆ ಕರೆದು ಮಾತುಕತೆ ನಡೆಸಿದ್ರು. ಆದ್ರೆ ಪೊಲೀಸರ ವಿಚಾರಣೆ ಬಳಿಕ ಈ ಮದುವೆಗೆ ಟ್ವಿಸ್ಟ್ ಸಿಕ್ಕಿದೆ. ಸಂಜೆ ಆಗುತ್ತಿದ್ದಂತೆ ಯುವತಿ ತಾನು ಪ್ರೀತಿಸಿದ ಹುಡುಗನ ಜೊತೆಗೆ ಮದುವೆಯಾಗಿದ್ದಾಳೆ. ಎಂ.ಜಿ ರಸ್ತೆಯ ಗಣಪತಿಯ ದೇವಾಲಯದಲ್ಲಿ ಯುವತಿ ಪ್ರಿಯಕನಿಂದ ತಾಳಿ ಕಟ್ಟಿಸಿಕೊಂಡಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ