NHM ನೇಮಕಾತಿ 2025; ಹಾಸನದ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

author-image
Bheemappa
Updated On
Assistant Manager; ವಿಜ್ಞಾನ, ವಾಣಿಜ್ಯ ವಿಭಾಗದ ಅಭ್ಯರ್ಥಿಗಳಿಗೆ ಹಲವು ಉದ್ಯೋಗಗಳು
Advertisment
  • ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು
  • ನಮ್ಮ ಕ್ಲಿನಿಕ್​​ಗಳಿಗೆ ಮಾನವ ಸಂಪನ್ಮೂಲ ನೇಮಕ ಮಾಡಲಾಗ್ತಿದೆ
  • ವಿದ್ಯಾರ್ಹತೆ, ಸಂಬಳ, ವಯಸ್ಸು ಇತ್ಯಾದಿ ಮಾಹಿತಿಗಾಗಿ ಲಿಂಕ್ ಇದೆ

ಹಾಸನ ಜಿಲ್ಲೆಯ ಪಿಎಂಎಬಿಹೆಚ್​​ಐಎಂ ಯೋಜನೆ ಅಡಿಯಲ್ಲಿ ಹೊಸದಾಗಿ 7 ನಮ್ಮ ಕ್ಲಿನಿಕ್​ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಈ 7 ನಮ್ಮ ಕ್ಲಿನಿಕ್​ಗಳಿಗೆ ಅವಶ್ಯಕತೆ ಇರುವ ಮಾನವ ಸಂಪನ್ಮೂಲವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ನೇಮಕಾತಿ ಮಾರ್ಗಸೂಚಿ ಅನ್ವಯ ಗುತ್ತಿಗೆ ಆಧಾರದ ಮೇಲೆ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಒಟ್ಟು 28 ಹುದ್ದೆಗಳನ್ನು ಹೊಸದಾಗಿ ನೇಮಕ ಮಾಡಲಾಗುತ್ತಿದೆ.

ಈ ಹುದ್ದೆಗಳಿಗೆ ಅನುಗುಣವಾಗಿ ಅನ್ವಯಿಸುವ ರೋಸ್ಟರ್ ಕಂ ಮೆರಿಟ್ ಅನ್ವಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಇದಕ್ಕೆ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಆಸಕ್ತರು ಈ ಕೆಳಗಿನ ದಿನಾಂಕದ ಒಳಗಾಗಿ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪ್ರತ್ಯೇಕವಾಗಿ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆಗಾಗಿ ಯಾವುದೇ ಮಾಹಿತಿ ನೀಡಲ್ಲ.

ಇಲಾಖೆಯು ತಿಳಿಸಿದ ದಿನಾಂಕದಂದು ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ ಕಚೇರಿಗೆ ಹಾಜರಾಗಬೇಕು. ಅರ್ಜಿ ಸಲ್ಲಿಕೆ ಮಾಡಿ ದಾಖಲಾತಿ ಪರಿಶೀಲನೆಗೆ ಹಾಜರಾದ ಅಭ್ಯರ್ಥಿಗಳನ್ನು ಗುತ್ತಿಗೆ ನೇಮಕಾತಿ ಪ್ರಕ್ರಿಯೆಗೆ ಪರಿಗಣಿಸುವುದಿಲ್ಲ ಎಂದು ಇಲಾಖೆಯು ಹೇಳಿದೆ.

ಎಷ್ಟು ಹುದ್ದೆಗಳು, ಉದ್ಯೋಗದ ಹೆಸರು?

ಮೆಡಿಕಲ್ ಆಫೀಸರ್- 7
ಸ್ಟಾಫ್ ನರ್ಸ್‌- 07
ಲ್ಯಾಬೋರೇಟರಿ ಟೆಕ್ನೀಷಿಯನ್- 07
ಜೂನಿಯರ್ ಹೆಲ್ತ್‌ ಅಸಿಸ್ಟೆಂಟ್- 07

ಇದನ್ನೂ ಓದಿ: ಅಂಚೆ ಇಲಾಖೆಯ 21,413 ಹುದ್ದೆಗಳು.. ಅರ್ಜಿ ಸಲ್ಲಿಕೆ ಮಾಡಲು ಈ ದಿನಾಂಕ ಕೊನೆ

publive-image

ವಿದ್ಯಾರ್ಹತೆ, ವಯಸ್ಸು, ಸಂಬಳ ಸೇರಿ ಇನ್ನಿತರ ಅರ್ಹತೆಗಾಗಿ ಅಭ್ಯರ್ಥಿಗಳು ಈ ಕೆಳಗೆ ಕೊನೆಯಲ್ಲಿ ನೀಡಿರುವ ನೋಟಿಫಿಕೆಶನ್ ಲಿಂಕ್ ವೀಕ್ಷಿಸಿ

ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ವಿಳಾಸ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಒಳಾಂಗಣ ಕ್ರೀಡಾಂಗಣ ಪಕ್ಕ, ಸಾಲಗಾಮೆ ರಸ್ತೆ, ಹಾಸನ

ಹುದ್ದೆಗೆ ಸಂಬಂಧಿಸಿದ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ- 01 ಮಾರ್ಚ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 15 ಮಾರ್ಚ್ 2025
ದಾಖಲಾತಿ ಪರಿಶೀಲಿಸುವ ದಿನಾಂಕ- 21 ಮಾರ್ಚ್ 2025 ಬೆಳಗ್ಗೆ 10.00 ಗಂಟೆ

ಸಂಪೂರ್ಣ ಮಾಹಿತಿಗಾಗಿ-
https://cdn.s3waas.gov.in/s386b122d4358357d834a87ce618a55de0/uploads/2025/02/2025022859.pdf

ಅರ್ಜಿ ಸಲ್ಲಿಕೆಗೆ ವೆಬ್​ಸೈಟ್- https://hassan.nic.in

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment