/newsfirstlive-kannada/media/post_attachments/wp-content/uploads/2025/05/HSN_-Heart_attack.jpg)
ಹಾಸನ: ಜಿಲ್ಲೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ ಯುವಕ, ಯುವತಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ಯುವತಿ ಸಂಧ್ಯಾ ಹಾಗೂ ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಯುವಕ ಅಭಿಷೇಕ್ ಕೊನೆಯುಸಿರೆಳೆದಿದ್ದಾರೆ.
ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ನಿವಾಸಿ ವೆಂಕಟೇಶ್ ಮತ್ತು ಪೂರ್ಣಿಮ ದಂಪತಿಯ ಮಗಳು ಸಂಧ್ಯಾ (19) ಅವರು ಬಾತ್ರೂಂಗೆ ಹೋಗಿದ್ದ ವೇಳೆ ಅಲ್ಲೇ ಕುಸಿದು ಬಿದ್ದಿದ್ದಾರೆ. ಬಹಳ ಸಮಯ ಆಗಿದ್ದರಿಂದ ವಾಪಸ್ ಬರದಿದ್ದಕ್ಕೆ ಮನೆಯವರು ಹೋಗಿ ನೋಡಿದಾಗ ಯುವತಿ ಕುಸಿದು ಬಿದ್ದಿದ್ದರು. ತಕ್ಷಣ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಮನೆಯಲ್ಲಿ ಇರುವಾಗಲೇ ಜೀವ ಹೋಗಿದೆ. ಸಂಧ್ಯಾ ಡಿಪ್ಲೋಮಾ ಪೂರ್ಣಗೊಳಿಸಿದ್ದರು. ಕೆಲ ವರ್ಷಗಳಿಂದ ಬಿಪಿ-ಶುಗರ್‌ನಿಂದ ಬಳಲುತ್ತಿದ್ದರು.
ಇದನ್ನೂ ಓದಿ:Video- ಭೀಕರ ಗಾಳಿ, ಮಳೆ; ಬೈಕ್, ಕಾರುಗಳ ಮೇಲೆ ಬಿದ್ದ ಮರಗಳು.. ಜೀವ ಕಳೆದುಕೊಂಡ 5 ಜನ
ಇನ್ನೊಂದು ಘಟನೆಯಲ್ಲಿ ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಅನಸೂಯ ರಾಮಕೃಷ್ಣ ದಂಪತಿ ಪುತ್ರ ಅಭಿಷೇಕ್.ಕೆ.ಆರ್ (19) ಮೃತರು. ಇವರು ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಬಸವೇಶ್ವರ ನಗರದಲ್ಲಿ ನಿಂತಿದ್ದ ಜಾಗದಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಸ್ಥಳೀಯರು ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಆವಾಗಲೇ ಹಾರ್ಟ್ ಅಟ್ಯಾಕ್ನಿಂದ ನಿಧನ ಹೊಂದಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ