/newsfirstlive-kannada/media/post_attachments/wp-content/uploads/2025/06/HSN_YOUTH-1.jpg)
ಹಾಸನ: ಜಿಲ್ಲೆಯಲ್ಲಿ ಹೃದಯಾಘಾತದಿಂದ ಇದುವರೆಗೆ ಒಟ್ಟು ನಾಲ್ವರು ಕೊನೆಯುಸಿರೆಳೆದಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ ಯುವಕ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಹೃದಯಾಘಾತದಿಂದ ನಿಧನ ಹೊಂದಿದ ಐವರು ಹಾಸನ ಜಿಲ್ಲೆಯ ಮೂಲದವರೇ ಆಗಿದ್ದಾರೆ.
ಹೊಳೆನರಸೀಪುರ ಪಟ್ಟಣದ ನಿವಾಸಿ ಚನ್ನಕೇಶವ ಹಾಗೂ ಜ್ಯೋತಿ ದಂಪತಿಯ ಪುತ್ರ ನಿಶಾಂತ್ (19) ನಿಧನ. ಬೆಂಗಳೂರಿನ ಜೆಪಿ ನಗರದಲ್ಲಿ ನಿಶಾಂತ್ ಸಾವನ್ನಪ್ಪಿದ್ದಾರೆ. ಡಿಪ್ಲೋಮಾ ವ್ಯಾಸಂಗ ಮಾಡಿ ಮುಗಿಸಿದ್ದ ನಿಶಾಂತ್ ಅವರು ಕೈಗಾರಿಕಾ ತರಬೇತಿ ಸಲುವಾಗಿ 15 ದಿನಗಳ ಹಿಂದೆ ಬೆಂಗಳೂರಿಗೆ ಬಂದು ಪಿಜಿಯಲ್ಲಿ ಉಳಿದುಕೊಂಡಿದ್ದರು.
ಇವತ್ತು ರೂಮ್ನಲ್ಲಿ ಇರುವಾಗ ಎದೆನೋವು ಕಾಣಿಸಿದೆ. ಕೆಲವೇ ಕ್ಷಣದಲ್ಲೇ ತೀವ್ರವಾದ ಹೃದಯಾಘಾತದಿಂದ ಯುವಕ ಕೊನೆಯುಸಿರೆಳೆದಿದ್ದಾನೆ. ಬೆಳಗ್ಗೆ 10 ಗಂಟೆ ಆದರೂ ರೂಮ್ ಬಾಗಿಲು ಓಪನ್ ಮಾಡದ ಕಾರಣ ಸ್ನೇಹಿತರು ಹಾಗೂ ಅಕ್ಕಪಕ್ಕದವರು ಬಾಗಿಲು ತೆಗೆದು ಒಳಗೆ ಹೋದಾಗ ಸಾವನ್ನಪ್ಪಿರುವುದು ಗೊತ್ತಾಗಿದೆ.
ಮೃತದೇಹ ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಗೆ ರವಾನೆ…ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಪೋಷಕರು ಹಾಸನಕ್ಕೆ ಮೃತದೇಹವನ್ನು ಕೊಂಡೊಯ್ಯಲಿದ್ದಾರೆ. ಕೊರೊನಾ ಸಂದರ್ಭದಲ್ಲಿ ಯುವಕನ ತಾಯಿ ನಿಧನ ಹೊಂದಿದ್ದರು.
ಇದನ್ನೂ ಓದಿ:ಜಿಲ್ಲೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ ಮತ್ತೊಬ್ಬ ಯುವಕ
ಹಾಸನದಲ್ಲಿ ಹೃದಯಾಘಾತದಿಂದ ಪ್ರಾಣ ಬಿಟ್ಟವರು
ಹಾಸನ ಜಿಲ್ಲೆಯಲ್ಲಿ ಒಟ್ಟು ಐವರು ಹೃದಯಾಘಾತದಿಂದಲೇ ಜೀವ ಕಳೆದುಕೊಂಡಿದ್ದಾರೆ. ಆತಂಕಕಾರಿ ಸಂಗತಿ ಎಂದರೆ ಎಲ್ಲರೂ ಯುವಕರೇ ಆಗಿದ್ದಾರೆ. ಇತ್ತೀಚೆಗೆ ಹಾಸನ ಜಿಲ್ಲೆಯ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಕೆಲವತ್ತಿ ಗ್ರಾಮದ ಕವನ ಕೆ.ವಿ ಹಾರ್ಟ್ ಅಟ್ಯಾಕ್ನಿಂದ ಸಾವನ್ನಪ್ಪಿದ್ದರು. ಇದಾದ ಮೇಲೆ ಕೆಲವೇ ದಿನಗಳಲ್ಲಿ ಜಿಲ್ಲೆಯ 2 ಪ್ರತ್ಯೇಕ ಘಟನೆಗಳಲ್ಲಿ ಯುವಕ, ಯುವತಿ ಹೃದಯಾಘಾತದಿಂದ ನಿಧನ ಹೊಂದಿದ್ದರು.
ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ಯುವತಿ ಸಂಧ್ಯಾ ಹಾಗೂ ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಯುವಕ ಅಭಿಷೇಕ್ ಕೊನೆಯುಸಿರೆಳೆದಿದ್ದರು. ಇವರ ಬೆನ್ನಲ್ಲೇ ಹಾಸನ ತಾಲೂಕಿನ ಅಗಲಹಳ್ಳಿ ಕೊಪ್ಪಲು ಗ್ರಾಮದ ನವೀನ್ ಕುಮಾರ್ (21) ಹೃದಯಾಘಾತದಿಂದ ನಿಧನ ಹೊಂದಿದವರು. ಇದೀಗ ನಿಶಾಂತ್ ಕೂಡ ಹಾರ್ಟ್ ಅಟ್ಯಾಕ್ನಿಂದ ನಿಧನ ಹೊಂದಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ