newsfirstkannada.com

‘ನಾನೇ ಬರ್ತೀನಿ’ ಪ್ರಜ್ವಲ್​ ರೇವಣ್ಣ ವಿಡಿಯೋ ಬೆನ್ನಲ್ಲೇ ಮತ್ತೊಂದು ಸಂಕಷ್ಟ.. ಬಂಧನದ ಭೀತಿಯಲ್ಲಿ ತಾಯಿ ಭವಾನಿ

Share :

Published May 28, 2024 at 8:15am

    ಕೆ.ಆರ್ ನಗರ ಅಪಹರಣ ಪ್ರಕರಣದಲ್ಲಿ ಭವಾನಿ ಹೆಸರು ಪ್ರಸ್ತಾಪ

    ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್​ನಲ್ಲಿ ಭವಾನಿ ಅರ್ಜಿ

    ಎಸ್​ಐಟಿ ನೀಡಿದ್ದ ನೋಟಿಸ್​ಗೆ ಹಾಜರಾಗದ ಭವಾನಿ ರೇವಣ್ಣ

ತಿಂಗಳ ವಿದೇಶವಾಸದ ಬಳಿಕ ಪ್ರಜ್ವಲ್‌ ಪ್ರತ್ಯಕ್ಷರಾಗಿದ್ದಾರೆ. ನಾನು ರಿಟರ್ನ್ ಬರ್ತೀದ್ದೀನಿ ಅನ್ನೋ ಸಂದೇಶ ಕಳಿಸಿದ್ದಾರೆ. ಇದರ ಬೆನ್ನಲ್ಲೇ ಎಸ್​ಐಟಿಯಿಂದ ಮುಂದಿನ ಕಾನೂನು ಪ್ರಕ್ರಿಯೆಗಳ ತಯಾರಿ ನಡೀತಿದೆ. ರಾಜಕೀಯ ಲೆಕ್ಕಾಚಾರವೂ ಶುರುವಾಗಿದೆ. ಅತ್ತ ಭವಾನಿ ರೇವಣ್ಣಗೂ ಬಂಧನ ಭೀತಿ ಎದುರಾಗಿದ್ದು ಕೋರ್ಟ್ ಮೊರೆ ಹೋಗಿದ್ದಾರೆ.

ಪೆನ್​ಡ್ರೈವ್ ಪ್ರಕರಣದ​ ಪ್ರಜ್ವಾಲೆಯ ನಡುವೆ ಪ್ರಜ್ವಲ್‌ ಪ್ರತ್ಯಕ್ಷರಾಗಿದ್ದಾರೆ. ದುಬೈನಲ್ಲಿದ್ದಾರಾ? ಜರ್ಮನಿಯಲ್ಲಿದ್ದಾರಾ? ಇನ್ನೆಲ್ಲೋ ತಲೆಮರೆಸಿಕೊಂಡಿದ್ದಾರಾ? ಅನ್ನೋ ಚರ್ಚೆಗೆ ಪೂರ್ಣವಿರಾಮ ಬಿದ್ದಿದೆ. ಯಾಕಂದ್ರೆ, ನಾನೇ ಬರ್ತೀನಿ ಅಂತಾ ಪ್ರಜ್ವಲ್ ರೇವಣ್ಣ ವಿಡಿಯೋ ಮೂಲಕ ಮತ್ತೆ ವೈರಲ್ ಆಗಿದ್ದಾರೆ.

ನಾನು ಬರ್ತೀನಿ ಅಂತಿರೋ ಪ್ರಜ್ವಲ್. ನನ್ನ ಪ್ರವಾಸ ಪ್ರೀಪ್ಲಾನ್ ಆಗಿತ್ತು ಎಂದಿದ್ದಾರೆ. ಇದು ಕೆಲವರ ರಾಜಕೀಯ ಪಿತೂರಿ ಅಂತ ಕುಟುಕಿರೋ ಪ್ರಜ್ವಲ್​​​, ಡಿಫ್ರೆಶನ್​ ಕಥೆ ಹೇಳಿ, ಇದೊಂದು ಸುಳ್ಳಿನ ಪ್ರಕರಣ ಅಂತ ಜರಿದಿದ್ದಾರೆ. ಹೀಗೆ ಪ್ರಜ್ವಲ್​ ಬರೋ ಹಾದಿಯಲ್ಲಿ ಕಾದು ಕಾದು ಸುಸ್ತಾಗಿದ್ದ ಎಸ್​​ಐಟಿ, ಈಗ ಕೆಲಸ ಚುರುಕು ಗೊಳಸಿದೆ. ಬಂಧನಕ್ಕೂ ಪ್ಲಾನ್ ಮಾಡಿಕೊಳ್ತಿದೆ.

ಪ್ರಜ್ವಲ್​ ರೇವಣ್ಣ ಕಾಣಿಸಿಕೊಂಡ ಬೆನ್ನಿಗೆ ಅರೆಸ್ಟ್​​ ಖಚಿತ

ಪ್ರಜ್ವಲ್​ ರೇವಣ್ಣ ಕಾಣಿಸಿಕೊಂಡ ಬೆನ್ನಿಗೆ ಅರೆಸ್ಟ್​​ ಆಗೋದು ಖಚಿತ ಅನ್ನೋ ಮಾತು ಕೇಳಿಸ್ತಿದೆ.. ಸದ್ಯ 376 ಅಡಿಯಲ್ಲಿ ಪ್ರಜ್ವಲ್​ ವಿರುದ್ಧ ಕೇಸ್ ದಾಖಲಾಗಿದೆ. ನೋಟಿಸ್​ ನೀಡಿ ವಿಚಾರಣೆ ಅವಧಿ ಸಹ ಮುಗಿದು ಹೋಗಿದೆ.. ತಾನು ಬಯಸಿದಾಗ ವಿಚಾರಣೆಗೆ ಬರಲು ಅವಕಾಶವಿಲ್ಲ.. ಹಾಗಾಗಿ ವಿದೇಶದಿಂದ ಪ್ರಜ್ವಲ್​ ಹೊರಡ್ತಿರೋ ಬೆನ್ನಲ್ಲೇ SIT ಅಲರ್ಟ್​ ಆಗಲಿದೆ.. ದೇಶದ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣವೇ ಅರೆಸ್ಟ್ ಮಾಡಲು ಮುಂದಾಗಿದೆ.

ಇದನ್ನೂ ಓದಿ: VIDEO: ಇದೇ ಕೈಯಾರೆ ಕಳೆದುಕೊಂಡೆ! ಚಿನ್ನುವನ್ನು ನೆನೆದು ಭಾವುಕರಾದ ಆ್ಯಂಕರ್ ಅನುಶ್ರೀ

ಪ್ರಜ್ವಲ್ ರೇವಣ್ಣ ತಾಯಿಗೂ ಬಂಧನದ ಭೀತಿ

ಅತ್ತ ಪ್ರಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣಗೂ ಟೆನ್ಷನ್ ಕಾಡ್ತಿದೆ. ಪುತ್ರನ ಶರಣಾಗತಿ ಹೇಳಿಕೆ ಬೆನ್ನಲ್ಲೇ ರೇವಣ್ಣ ವೈಫ್ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಅರೆಸ್ಟ್ ಭೀತಿಗೆ ಕಾರಣ ಮನೆ ಕೆಲಸದಾಕೆ ಕಿಡ್ನ್ಯಾಪ್ ಕೇಸ್

ಇಂದು ವಿಚಾರಣೆ ಹಿನ್ನೆಲೆ ಇಂದು ಭವಾನಿ ರೇವಣ್ಣಗೆ ಮಹತ್ವದ ದಿನ

ಕೆ.ಆರ್ ನಗರ ಮಹಿಳೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಹೆಸರು ಕೂಡ ಕೇಳಿ ಬಂದಿತ್ತು. ಎಸ್​ಐಟಿ ನೀಡಿದ್ದ ನೋಟಿಸ್​ಗೆ ಈವರೆಗೂ ಹಾಜರಾಗದ ಭವಾನಿ ರೇವಣ್ಣ ಇದೀಗ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಿನ್ನೆ ಕೋರ್ಟ್​ನಲ್ಲಿ ನಡೆದ ವಿಚಾರಣೆಯಲ್ಲಿ ಎಸ್​ಐಟಿ ನೋಟಿಸ್ ನೀಡಿದ ವಿಚಾರದ ಬಗ್ಗೆ ಭವಾನಿ ಪರ ವಕೀಲರು ಪ್ರಶ್ನಿಸಿದ್ದಾರೆ. ಭವಾನಿ ರೇವಣ್ಣಗೆ ಯಾವ ನಿಯಮದಡಿ ನೋಟಿಸ್ ನೀಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಹಾಗಾಗಿ ಅವರನ್ನೂ ಬಂಧಿಸೋ ಸಾಧ್ಯತೆ ಇರೋದ್ರಿಂದ ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕು ಎಂದು ಕೋರಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಭವಾನಿ ರೇವಣ್ಣನವರ ಪರ ವಕೀಲರು ಎತ್ತಿರುವ ಪ್ರಶ್ನೆಗೆ ಉತ್ತರಿಸುವಂತೆ ಎಸ್ಐಟಿಗೆ ಸೂಚಿಸಿದೆ. ಅರ್ಜಿಯ ವಿಚಾರಣೆಯನ್ನು ಮುಂದೂಡಿದ್ದು ಇಂದು ವಿಚಾರಣೆಗೆ ಬರಲಿದೆ. ಈ ಹಿನ್ನೆಲೆ ಇಂದು ಭವಾನಿ ರೇವಣ್ಣಗೆ ಮಹತ್ವದ ದಿನ.

ಇದನ್ನೂ ಓದಿ: VIDEO: ಕನ್ನಡಿಗರ ಮೇಲೂ ಬಿತ್ತು ರಣಚಂಡಿ ಚಂಡಮಾರುತದ ಕರಿನೆರಳು.. ಸಂಕಷ್ಟಕ್ಕೆ ಸಿಲುಕಿದ್ದಾರೆ 180 ಜನರು!

ಒಟ್ನಲ್ಲಿ ಅತ್ತ ಮಗ. ಇತ್ತ ತಾಯಿ ಇಬ್ಬರಿಗೂ ಟೆನ್ಷನ್ ಕಾಡ್ತಿದೆ. ಇಡೀ ಪ್ರಕರಣಕ್ಕೆ ಪ್ರಜ್ವಲ್​ ಆಗಮನದ ಬಳಿಕ ಬಿಗ್​​ ಟ್ವಿಸ್ಟ್​​ ಸಿಗಲಿದೆ. ಹೀಗಾಗಿ ಮುಂದಿನ ತನಿಖೆ ಹೇಗಿರುತ್ತೆ ಅನ್ನೋದೇ ಕುತೂಹಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾನೇ ಬರ್ತೀನಿ’ ಪ್ರಜ್ವಲ್​ ರೇವಣ್ಣ ವಿಡಿಯೋ ಬೆನ್ನಲ್ಲೇ ಮತ್ತೊಂದು ಸಂಕಷ್ಟ.. ಬಂಧನದ ಭೀತಿಯಲ್ಲಿ ತಾಯಿ ಭವಾನಿ

https://newsfirstlive.com/wp-content/uploads/2024/05/Bhavani-Revanna.jpg

Load More