/newsfirstlive-kannada/media/post_attachments/wp-content/uploads/2024/04/PRAJWAL_REVANNA.jpg)
ಮತದಾನ ಮುಗಿಯುತ್ತಿದ್ದಂತೆ ಹಾಸನದಲ್ಲಿ ಮಾರಾಮಾರಿಯಾಗಿದೆ. ಕಾಂಗ್ರೆಸ್​ ಅಭ್ಯರ್ಥಿ ತಾಯಿ ಭೇಟಿ ವೇಳೆ ಜೆಡಿಎಸ್​ನವರು ಘೋಷಣೆ ಕೂಗಿ ಗದ್ದಲ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಉಭಯ ಪಕ್ಷಗಳ ಕಾರ್ಯಕರ್ತರ ಮಧ್ಯೆ ಮಾರಾಮಾರಿ ಆಗಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ. ಕಾಂಗ್ರೆಸ್​ ಹಲ್ಲೆ ಆರೋಪಗೆ ಜೆಡಿಎಸ್​ ಪ್ರತ್ಯಾರೋಪ ಮಾಡಿದ್ದು ಕಾಂಗ್ರೆಸ್​ನವರೇ ಹಲ್ಲೆ ಮಾಡಿದ್ದಾರೆಂದು ಜೆಡಿಎಸ್ ಆರೋಪಿಸಿದೆ.​
ಚುನಾವಣೆ ಮುಗಿಯುತ್ತಿದ್ದಂತೆ ರಣರಂಗವಾದ ಹಾಸನ
ಲೋಕಸಭಾ ಚುನಾವಣಾ ಕಾವು ಜೋರಾಗಿದ್ದು, ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಆದ್ರೆ ಹೈವೋಲ್ಟೇಜ್​ ಕ್ಷೇತ್ರವಾಗಿದ್ದ ಹಾಸನದಲ್ಲಿ ಮತದಾನ ಮುಗಿಯುತ್ತಿದ್ದಂತೆ ಕಾಂಗ್ರೆಸ್​ -ಜೆಡಿಎಸ್​ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/04/HSN_FIGHT.jpg)
ಹೊಳೆನರಸೀಪುರ ತಾಲೂಕಿನ ಕೆ.ಬಿ.ಪಾಳ್ಯದ ಮತಗಟ್ಟೆ ಸಂಖ್ಯೆ 249ಕ್ಕೆ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ತಾಯಿ ಭೇಟಿ ನೀಡಿದ್ದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಸ್ವ ಪಕ್ಷಕ್ಕೆ ಜೈಕಾರ ಕೂಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಕೈ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಪರ ಘೋಷಣೆ ಕೂಗಿದ್ದಾರೆ.
2 ಪಕ್ಷದ ಕಾರ್ಯಕರ್ತರ ಮಧ್ಯೆ ಮಾರಾಮಾರಿ
ಘೋಷಣೆ ವಿಕೋಪಕ್ಕೆ ತಿರುಗಿ 2 ಪಕ್ಷದ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿದೆ. ಈ ವೇಳೆ ಕಬ್ಬಿಣದ ರಾಡ್‌ನಿಂದ ಜೆಡಿಎಸ್ ಕಾರ್ಯಕರ್ತರು, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಇದರಲ್ಲಿ ಮೋಹನ್‌ಕುಮಾರ್, ಗಿರೀಶ್ ಮಂಜುನಾಥ್​ ಎಂಬುವವರಿಗೆ ಗಾಯವಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತ ಮೋಹನ್‌ಕುಮಾರ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ಮೋಹನ್​ ತಲೆಗೆ ತೀವ್ರ ಪೆಟ್ಟು ಬಿದ್ದಿರುವ ಕಾರಣ ನಿಮ್ಹಾನ್ಸ್​ಗೆ ಶಿಫ್ಟ್​ ಮಾಡಲು ವೈದ್ಯರು ಸೂಚಿಸಿದ್ದಾರಂತೆ.
ಕೊಟ್ರೆಪಾಳ್ಯ ಗ್ರಾಮದಲ್ಲಿ ಸಂಜೆ ಸಮಯದಲ್ಲಿ ಅಭ್ಯರ್ಥಿ ಶ್ರೇಯಸ್ ಪಾಟೀಲ್ ತಾಯಿಯವರು ಬೂತ್ ಚೆಕ್ಕಿಂಗ್ಗೆ ಬರುತ್ತಿದ್ದರು. ವಿರೋಧ ಪಕ್ಷದವರಾದ ಜೆಡಿಎಸ್ನವರು ಮೇಡಂ ಮೇಲೆ ಹಲ್ಲೆ ಮಾಡಲು ಮುಂದಾದಗ ಜಗಳ ಮಾಡಬೇಡಿ ಶಾಂತಿಯುತವಾಗಿ ಮತದಾನ ಮಾಡಿ ಎಂದು ಹೇಳಿ ಮುಂದೆ ಹೋದರು. ಅವರು ಅರ್ಧ ಗಂಟೆ ಆದ ಮೇಲೆ 50 ಜನರ ಗುಂಪು ನಮ್ಮ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ.
ಗಿರೀಶ್, ಕಾಂಗ್ರೆಸ್ ಕಾರ್ಯಕರ್ತ
ಆಸ್ಪತ್ರೆಗೆ ಮೈಸೂರು ದಕ್ಷಿಣ ವಲಯ ಡಿಐಜಿ ಭೇಟಿ
ಇನ್ನು ಎರಡೂ ಪಕ್ಷದ ಕಾರ್ಯಕರ್ತರು ಪರಸ್ಪರ ಹಲ್ಲೆ ಆರೋಪ ಮಾಡಿಕೊಂಡಿದ್ದಾರೆ. ಇತ್ತ ಜೆಡಿಎಸ್‌ನ ಸಾಗರ್ ಹಾಗೂ ಪ್ರದೀಪ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದರೆ, ಕೈ ಕಾರ್ಯಕರ್ತರಾದ ಪ್ರದೀಪ್, ಸಾಗರ್ ಹಾಗೂ ಗೌತಮ್​ ಹಲ್ಲೆ ಮಾಡಿದ್ದಾರೆ ಎಂದು ಜೆಡಿಎಸ್​ ಕೂಡ ಪ್ರತ್ಯಾರೋಪ ಮಾಡಿದೆ. ಇನ್ನು ಜೆಡಿಎಸ್ ಕಾರ್ಯಕರ್ತರನ್ನೂ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
/newsfirstlive-kannada/media/post_attachments/wp-content/uploads/2024/04/HSN_FIGHT_1.jpg)
ಇದನ್ನೂ ಓದಿ:ಹಾಸನದಲ್ಲಿ ಪ್ರಜ್ವಲ್ ರೇವಣ್ಣ, ಶ್ರೇಯಸ್ ಪಟೇಲ್ ಬೆಂಬಲಿಗರ ಮಾರಾಮಾರಿ; ಓರ್ವನ ಸ್ಥಿತಿ ಗಂಭೀರ
ಆಸ್ಪತ್ರೆಗೆ ಮೈಸೂರು ದಕ್ಷಿಣ ವಲಯ ಡಿಐಜಿ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ ಭೇಟಿ ನೀಡಿ, ಗಾಯಾಳುಗಳಿಂದ ಮಾಹಿತಿ ಪಡೆದಿದ್ದಾರೆ.
ಕೆಬಿ ಪಾಳ್ಯ ಹೊಳೆನರಸೀಪುರ ಲಿಮಿಟ್ಸ್ನಲ್ಲಿ ಪ್ರದೀಪ್ ಮತ್ತು ಮೋಹನ್ ಅವರ ನಡುವೆ ಜಗಳವಾಗಿದೆ. ಇದರಲ್ಲಿ ಇಬ್ಬರಿಗೂ ತಲೆಗೆ ಏಟಾಗಿದೆ. ಈಗ ಇಬ್ಬರು ಕಡೆಯಿಂದ ಕಂಪ್ಲೇಟ್ ತಗೊಂಡು ತನಿಖೆ ಮುಂದುವರೆಸುತ್ತೇವೆ.
ಮಹಮದ್ ಸುಜೇತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಚುನಾವಣೆ ಮುಗಿದ ಬಳಿಕ ಹಾಸನದಲ್ಲಿ ಚಿತ್ರಣವೇ ಬದಲಾಗಿದ್ದು, ಮುಂಜಾಗ್ರತ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಬಂದೋಬಸ್ತ್​ ನಿಯೋಜಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us