newsfirstkannada.com

ಪ್ರಜ್ವಲ್ ಸೋತಿದ್ದಕ್ಕೆ ಸೆಲೆಬ್ರೇಷನ್.. ಹಾಸನದಲ್ಲಿ ಪೆನ್‌ಡ್ರೈವ್ ಆರೋಪಿ ಕಾರ್ತಿಕ್‌ ಗೌಡ ದಿಢೀರ್​ ಪ್ರತ್ಯಕ್ಷ; ಏನಾಯ್ತು?

Share :

Published June 4, 2024 at 2:26pm

  ಪೆನ್‌ಡ್ರೈವ್ ಹಂಚಿಕೆ ಕೇಸ್​ನಲ್ಲಿ ಪ್ರಮುಖ ಆರೋಪಿಯಾಗಿದ್ದ ಕಾರ್ತಿಕ್‌ ಗೌಡ

  ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು

  ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ‌ ಸಿಡಿಸಿ ಭರ್ಜರಿ ಸಂಭ್ರಮಾಚರಣೆ

ಹಾಸನ: ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಫಲಿತಾಂಶದ ಕಾವು ಜೋರಾಗಿದೆ. ಈಗಾಗಲೇ ಕೆಲವೊಂದು ಕ್ಷೇತ್ರದ ಅಭ್ಯರ್ಥಿಗಳು ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಇತ್ತ ಹಾಸನ ಲೋಕಸಭಾ ಕ್ಷೇತ್ರವು ಈ ಬಾರಿ ಇಡೀ ದೇಶದ ಗಮನ ತನ್ನತ್ತ ಸೆಳೆದುಕೊಂಡಿತ್ತು. ಚುನಾವಣೆಯ ಮತದಾನಕ್ಕೆ ಒಂದೆರಡು ದಿನ ಮುನ್ನ ಹಾಸನದಲ್ಲಿ ಪೆನ್‌ಡ್ರೈವ್ ಹಗರಣ ಭಾರೀ ಸದ್ದು ಮಾಡಿತು.

ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿಗೆ 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು; ಕಾಂಗ್ರೆಸ್​​ಗೆ ಹೀನಾಯ ಸೋಲು

ಇದರ ನಡುವೆಯೂ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮತ್ತೊಂದು ಅವಧಿಗೆ ಗೆಲುವು ಸಾಧಿಸುವ ಭರವಸೆಯಲ್ಲಿದ್ದರು. ಆದರೆ ಇದೀಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದೀಗ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣರ ಮುಂದೆ ಪುಟ್ಟಸ್ವಾಮಿ ಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಗೆದ್ದು ಬಿಗಿದ್ದಾರೆ. ಹೀಗಾಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೊಳೆನರಸೀಪುರ ಪಟ್ಟಣದ ಗಾಂಧಿ ವೃತ್ತದಲ್ಲಿ ಪಟಾಕಿ‌ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ: ಆರಂಭದಿಂದಲೂ ಭರ್ಜರಿ ಲೀಡ್.. ಡಾ.C.N ಮಂಜುನಾಥ್ ಗೆಲುವಿನ ವೇಗಕ್ಕೆ ಕಂಗಾಲಾದ ಡಿ.ಕೆ ಸುರೇಶ್

ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಈ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆಯಲ್ಲಿ ಕಾರ್ತಿಕ್‌ ಗೌಡ ಪುಟ್ಟರಾಜು ಅಲಿಯಾಸ್ ಪುಟ್ಟಿ ಕಾಣಿಸಿಕೊಂಡಿದ್ದಾರೆ. ಹಾಸನ ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ಪ್ರಮುಖ ಆರೋಪಿಯಾದ ಕಾರ್ತಿಕ್‌ ಗೌಡ ಹಾಗೂ ಪುಟ್ಟರಾಜು ನ್ಯೂಸ್​ಫಸ್ಟ್​​​ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಕಾರ್ತಿಕ್‌ ಗೌಡ ಪ್ರಜ್ವಲ್‌ ರೇವಣ್ಣ ಮಾಜಿ ಕಾರು ಚಾಲಕರಾಗಿದ್ದರು. ಸದ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ ಗೆದ್ದ ಖುಷಿಯಲ್ಲಿ ಕಾರ್ತಿಕ್‌ ಗೌಡ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್ ಸೋತಿದ್ದಕ್ಕೆ ಸೆಲೆಬ್ರೇಷನ್.. ಹಾಸನದಲ್ಲಿ ಪೆನ್‌ಡ್ರೈವ್ ಆರೋಪಿ ಕಾರ್ತಿಕ್‌ ಗೌಡ ದಿಢೀರ್​ ಪ್ರತ್ಯಕ್ಷ; ಏನಾಯ್ತು?

https://newsfirstlive.com/wp-content/uploads/2024/06/karthik2.jpg

Load More