newsfirstkannada.com

SIT ನೋಟಿಸ್​ಗೂ ಕ್ಯಾರೇ ಎನ್ನದ ಪ್ರಜ್ವಲ್​​ ರೇವಣ್ಣ.. ಸರ್ಕಾರದ ಜತೆ ಜೆಡಿಎಸ್​ಗೂ ತಲೆನೋವು

Share :

Published May 27, 2024 at 6:16am

    ಚಿಕ್ಕಪ್ಪ, ಇಳಿ ವಯಸ್ಸಿನ ತಾತನ ಮನವಿಗೂ ಡೋಂಟ್​ಕೇರ್

    ಕೇಸ್ ಎಳೆಯುವುದು ಬೇಡ, ತನಿಖೆಗೆ ಸಹಕರಿಸಲು ಮನವಿ‌

    ತಲೆ ಕೆಡಿಸಿಕೊಳ್ಳದೆ ವಿದೇಶದಲ್ಲೇ ಠಿಕಾಣಿ ಹೂಡಿದ ಪ್ರಜ್ವಲ್‌

ಸಂಸದ ಪ್ರಜ್ವಲ್ ರೇವಣ್ಣ ಸದ್ಯ ಸರ್ಕಾರಕ್ಕೆ ಮಾತ್ರವಲ್ಲದೆ ಜೆಡಿಎಸ್‌ ನಾಯಕರಿಗೂ ತಲೆನೋವಾಗಿದ್ದಾರೆ. ಪ್ರಜ್ವಲ್​ನನ್ನು ವಾಪಸ್ ಕರೆಸಲು ಕುಟುಂಬ ಅದೆಷ್ಟೇ ಮನವಿ ಮಾಡಿದ್ರೂ ಸಂಸದ ಮಾತ್ರ ಕ್ಯಾರೇ ಅಂತಿಲ್ಲ. ಚಿಕ್ಕಪ್ಪ ಹಾಗೂ ತಾತನ ಮನವಿಗೂ ಡೋಂಟ್ ಕೇರ್ ಅಂತಿದ್ದಾರೆ. ಎಸ್​ಐಟಿಯಿಂದ ಎರಡೆರಡು ನೋಟಿಸ್ ಕೊಟ್ಟಿದ್ದಾಯ್ತು. ಕೇಂದ್ರ ಸರ್ಕಾರ ಕೂಡ ನೋಟಿಸ್ ಹೊರಡಿಸಿದ್ದಾಯ್ತು. ಹೋಗಲಿ ಚಿಕ್ಕಪ್ಪ ಮತ್ತು ಇಳಿ ವಯಸ್ಸಿನ ತಾತನ ಮನವಿಗಾದ್ರೂ ಸ್ಪಂದಿಸಬೇಕಿತ್ತು.

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಸರ್ಕಾರದ ಪಾಲಿಗೆ ಮಾತ್ರವಲ್ಲದೇ ಜೆಡಿಎಸ್​ ಹಾಗೂ ಬಿಜೆಪಿ ಪಕ್ಷಗಳಿಗೂ ತಲೆನೋವಾಗಿ ಪರಿಣಮಿಸಿದ್ದಾರೆ. ರಾಜ್ಯಕ್ಕೆ ವಾಪಸ್ ಬಂದು ವಿಚಾರಣೆ ಎದುರಿಸಲು ಪ್ರಜ್ವಲ್​ಗೆ ಮನವಿ ಚಿಕ್ಕಪ್ಪ ಹಾಗೂ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಮನವಿ ಮಾಡಿದ್ರು. ಅವರ ಮನವಿಯ ಜೊತೆಗೆ ತಾತ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಪತ್ರ ಬರೆದು ಎಚ್ಚರಿಕೆ ನೀಡಿದ್ರೂ ಪ್ರಜ್ವಲ್ ಡೋಂಟ್ ಕೇರ್ ಎಂದಿದ್ದಾರೆ. ಇನ್ನು, ಎರಡ್ಮೂರು ದಿನಗಳಲ್ಲಿ ಪ್ರಜ್ವಲ್ ಬರುವಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಪ್ರಜ್ವಲ್ ಶಾಕ್ ಕೊಟ್ಟಿದ್ದಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ವಿದೇಶದಲ್ಲೇ ಠಿಕಾಣಿ ಹೂಡಿದ್ದಾರೆ. ಇದರಿಂದ ಗೌಡ್ರ ಕುಟುಂಬ ಹಾಗೂ ಜೆಡಿಎಸ್​ ಪಕ್ಷಕ್ಕೂ ಮುಜುಗರ ಆದಂತಾಗಿದೆ.

ಇದನ್ನೂ ಓದಿ: ವಾಯ್ಸ್​ ಬದಲಿಸೋ ಆ್ಯಪ್ ಬಳಸಿ 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ.. ಅನಕ್ಷರಸ್ಥನ ಕೃತ್ಯಕ್ಕೆ ಪೊಲೀಸರೇ ಶಾಕ್!

ಪ್ರಜ್ವಲ್ ರೇವಣ್ಣನನ್ನು ವಾಪಸ್ ಕರೆಸಲು ದೇವೇಗೌಡ್ರ ಕುಟುಂಬ ಸರ್ಕಸ್ ಮಾಡ್ತಿದೆ. ರಾಜ್ಯಕ್ಕೆ ವಾಪಸ್ ಬಂದು ವಿಚಾರಣೆ ಎದುರಿಸಲು HDK ಮನವಿಗೆ ಹಾಗೂ ಪತ್ರ ಬರೆದು ಎಚ್ಚರಿಕೆ ನೀಡಿದ್ದ ದೇವೇಗೌಡರಿಗೂ ಪ್ರಜ್ವಲ್ ರೇವಣ್ಣ ಡೋಂಟ್ ಕೇರ್ ಎಂದಿದ್ದಾರೆ. ಈಗ ಎರಡ್ಮೂರು ದಿನಗಳಲ್ಲಿ ಪ್ರಜ್ವಲ್ ಬರುವಿಕೆ ನಿರೀಕ್ಷೆಯಲ್ಲಿದ್ದವರಿಗೆ ಟೆನ್ಷನ್ ಶುರುವಾಗಿದೆ. ಅಲ್ಲದೆ ಪ್ರಕರಣ ಡ್ರ್ಯಾಗ್ ಮಾಡೋದು‌ ಬೇಡ, ತನಿಖೆಗೆ ಸಹಕರಿಸಲು ಮನವಿ‌ ಮಾಡಿದ್ದರು. ವಾಪಸ್ ಬಂದ್ರೆ ಟೀಕೆ ಕಡಿಮೆ ಆಗುವ ಲೆಕ್ಕಾಚಾರದಲ್ಲಿ ದಳಪತಿಗಳಿದ್ದರು. ಇದೇ ಪ್ರಕರಣ ಮುಂದಿಟ್ಟುಕೊಂಡು ದಳಪತಿಗಳ ಮೇಲೆ ಕಾಂಗ್ರೆಸ್​ ನಿರಂತರ ಅಟ್ಯಾಕ್ ಮಾಡ್ತಿದೆ.

ಸಾರ್ವಜನಿಕ ವಲಯದಲ್ಲಿ ಜೆಡಿಎಸ್ ನಾಯಕರಿಗೆ ಮುಜುಗರ ತಪ್ಪಿಸಿಕೊಳ್ಳಲಾಗ್ತಿಲ್ಲ. ಪ್ರಜ್ವಲ್ ಬಗ್ಗೆ ಹೆಚ್​ಡಿಡಿ, ಹೆಚ್​ಡಿಕೆ ತಲೆ ಕೆಡಿಸಿಕೊಂಡಿದ್ರೂ ಪ್ರಜ್ವಲ್ ಮಾತ್ರ ಯಾವುದಕ್ಕೂ ತಲೆ ಕಡೆಸಿಕೊಳ್ಳದೇ ವಿದೇಶದಲ್ಲೇ ಠಿಕಾಣಿ ಹೂಡಿದ್ದಾರೆ. ಇನ್ನು ಪ್ರಜ್ವಲ್‌ ಬಗ್ಗೆ ಮಾತನಾಡೋಕೂ ಜೆಡಿಎಸ್ ನಾಯಕರು ಹಿಂದೇಟು ಹಾಕ್ತಿದ್ದಾರೆ. ಶಾಸಕ ಜಿಟಿ ದೇವೇಗೌಡ ಹೆಚ್ಚೇನೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಅದೇನೇ ಇರಲಿ ತಮ್ಮ ಮೇಲೆ ಅದೇನೇ ಆರೋಪಗಳು ಬಂದ್ರೂ ಅದನ್ನು ಇಲ್ಲೇ ಇದ್ದು ಎದುರಿಸಬೇಕಾಗಿತ್ತು. ಅದು ಬಿಟ್ಟು ಅದೆಲ್ಲೋ ವಿದೇಶದಲ್ಲಿ ಕೂತು ನಾನು ಆರಾಮಾಗಿ ತಪ್ಪಿಸಿಕೊಳ್ತೇನೆ ಅನ್ನೋ ಕನಸು ಕಾಣ್ತಿದ್ರೆ ಅದನ್ನ ಮಾನ್ಯ ಪ್ರಜ್ವಲ್ ಸಾಹೇಬ್ರು ಬಿಡಬೇಕಿದೆ. ಕೂಡಲೇ ಸ್ವದೇಶಕ್ಕೆ ವಾಪಸ್ಸಾಗಿ ತನಿಖೆ ಎದುರಿಸಿ ತನ್ನ ಕುಟುಂಬಕ್ಕೆ ಆಗುತ್ತಿರುವ ಮುಜುಗರವನ್ನು ತಪ್ಪಿಸಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SIT ನೋಟಿಸ್​ಗೂ ಕ್ಯಾರೇ ಎನ್ನದ ಪ್ರಜ್ವಲ್​​ ರೇವಣ್ಣ.. ಸರ್ಕಾರದ ಜತೆ ಜೆಡಿಎಸ್​ಗೂ ತಲೆನೋವು

https://newsfirstlive.com/wp-content/uploads/2024/05/Prajwal-Revanna-5.jpg

Load More